ಭವಿಷ್ಯವನ್ನರಸಿ ವಿದೇಶದಲ್ಲಿ ಉನ್ನತ ವ್ಯಾಸಂಗದ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ಪುತ್ತೂರು:-ಭವಿಷ್ಯವನ್ನರಸಿ ವಿದೇಶದಲ್ಲಿ ಉನ್ನತ ವ್ಯಾಸಂಗದ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ವಿಸ್ಡಂ ಎಜುಕೇಶನ್ ಸಂಸ್ಥೆಯ ಪುತ್ತೂರು ಶಾಖೆ ವತಿಯಿಂದ INTERNX & ABROAD STUDIES ಬಗ್ಗೆ ಮಾಹಿತಿ ಕಾರ್ಯಗಾರ ಅ.10 ರಂದು ವಿದ್ಯಾರಶ್ಮಿ ಸವಣೂರು ಕಾಲೇಜಿನಲ್ಲಿ ನಡೆಯಿತು.
ವಿಸ್ಢಂ ಎಜುಕೇಶನ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯಸ್ಥ ದಿರೇನ್ ಕುಂದರ್, ಪುತ್ತೂರು ಶಾಖೆಯ ಮುಖ್ಯಸ್ಥೆ ರೂಪರೇಖಾ ಆಳ್ವ, ಶಿವಪ್ರಸಾದ್, ಕೌಶಲ್ಯ ಎಸ್, ಉಪ ಪ್ರಾಂಶುಪಾಲರಾದ ಶೇಷಗಿರಿ ಎಂ. ಉಪಸ್ಥಿತರಿದ್ದರು.
ವಿಸ್ಡಂ ಎಜುಕೇಶನಲ್ ಸಂಸ್ಥೆಯ ಸಂಸ್ಥಾಪಕಿ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಪ್ರಾನ್ಸಿಸ್ ತೇಜ್, ಸಹ ಸಂಸ್ಥಾಪಕ ಡಾ.ಗುರುತೇಜ್, ನೇತ್ರತ್ವದಲ್ಲಿ ವಿದೇಶದಲ್ಲಿ ವ್ಯಾಸಂಗ ಮಾಡಲಿಚ್ವಿಸುವ ವಿದ್ಯಾರ್ಥಿಗಳಿಗೆ ಕೆರಿಯರ್ ಕೌನ್ಸಿಲಿಂಗ್ ಸ್ಕಾಲರ್ ಶಿಪ್ ಪಾಸಿಬಲಿಟಿ ಗೈಡೆನ್ಸ್ ಡಾಕ್ಯುಮೆಂಟೇಶನ್ ಟೆಸ್ಟ್ ಪ್ರೀಪರೇಶನ್ ಟ್ರೈನಿಂಗ್ IELTS ಟ್ರೈನಿಂಗ್ ನೀಡುವ ಮೂಲಕ ಕಳೆದ ಹಲವು ವರ್ಷಗಳಿಂದ ಮಣಿಪಾಲ, ಶಿವಮೊಗ್ಗ, ಹಾಸನ, ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಉಡುಪಿ, ಹುಬ್ಬಳ್ಳಿ, ಅರಸೀಕೆರೆ, ಮೈಸೂರಿನಲ್ಲಿ ಕಾರ್ಯಾಚರಿಸುತ್ತಿದ್ದು ದೇಶ- ವಿದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ.



