ಆರೋಪಿಗಳಾದ ಬಶೀರ್, ಸಫಿಯಾ ಇತರ ಆರೋಪಿಗಳ ವಿರುದ್ಧ ದೂರು ದಾಖಲು
ವಿಟ್ಲ:- ಹುಡುಗಿ ನೋಡುವ ವಿಚಾರದಲ್ಲಿ ಪೋಟೋ ವಿಡಿಯೋ ತೆಗೆದು ಬೆದರಿಕೆ ಒಡ್ಡಿರುವ ಬಗ್ಗೆ ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ನಿವಾಸಿ ಮಹಮ್ಮದ್ ಅಶ್ರಫ್ ತಾವರಕಡನ್( 53) ಎಂಬವರು ಸೌದಿಯಲ್ಲಿ ಉದ್ಯೋಗದಲ್ಲಿದ್ದಾರೆ.
2024 ರ ಸೆಪ್ಟೆಂಬರ್ ನಲ್ಲಿ ಮದುವೆಯ ಸಲುವಾಗಿ ಮಂಗಳೂರಿಗೆ ಬಂದಿದ್ದು ಅಲ್ಲಿಗೆ ಕರೆಸಿದ ಬಶೀರ್ , ಸಫಿಯಾ ಮತ್ತು ಇತರ ಆರೋಪಿತರು ಅವರನ್ನು ಹೆಣ್ಣು ನೋಡುವ ನೆಪದಲ್ಲಿ ಪೋಟೋ ವಿಡಿಯೋ ತೆಗೆದು ನಂತರ ಅವುಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ 44.80 ಲಕ್ಷ ರೂಪಾಯಿ ಹಣ ವಂಚಿಸಿದ್ದಾರೆ.
ಎಂದು ಪಿರಿಯಾದಿದಾರರು ನೀಡಿದ ದೂರಿನಂತೆ ವಿಟ್ಲ ಪೋಲಿಸ್ ಠಾಣೆಯಲ್ಲಿ ಅ.ಕ್ರ: 145/2025 ಕಲಂ: 318(4) 308(2) 115(2) 351(2), r/w 3(5) BNS -2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



