ಚಿತ್ರರಂಗವನ್ನು ಬಿಟ್ಟು ಮಂತ್ರಿಯಾಗಬೇಕು ಎಂದು ನಾನು ಯಾವತ್ತೂ ಭಾವಿಸಿರಲಿಲ್ಲ
ಕಣ್ಣೂರು:- ಕೇಂದ್ರ ಸಚಿವ ಸುರೇಶ್ ಗೋಪಿ ಅವರು ತಮ್ಮ ಸ್ಥಾನವನ್ನು ತೂರೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ನೂತನವಾಗಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಸದಸ್ಯ ಸಿ ಸದಾನಂದನ್ ಮಾಸ್ಟರ್ ಅವರನ್ನು ತಮ್ಮ ಸ್ಥಾನಕ್ಕೆ ನೇಮಕ ಮಾಡಬೇಕೆಂಬ ಶಿಪಾರಸ್ಸುನ್ನು ಅವರು ಭಾನುವಾರ ಮುಂದಿಟ್ಟರು.
ಸುರೇಶ್ ಗೋಪಿ ಅವರು ಪೆಟ್ರೋಲಿಯಂ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಖಾತೆ ಸಚಿವರಾಗಿದ್ದರೆ.
ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ನನ್ನನ್ನು ತೆಗೆದ ಮೇಲೆ ಸದಾನಂದನ್ ಅವರನ್ನು ಸಚಿವರನ್ನಾಗಿ ನೇಮಕ ಮಾಡಬೇಕು ಇದು ಕೇರಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಯವಾಗಲಿದೆ ಎಂದು ನಾನು ನಂಬುತ್ತೇನೆ ಎಂದರು
ಸಭೆಯಲ್ಲಿ ಸದಾನಂದನ್ ಅವರು ಭಾಗಿಯಾಗಿದ್ದರು.
ಚಿತ್ರರಂಗವನ್ನು ಬಿಟ್ಟು ಮಂತ್ರಿಯಾಗಬೇಕು ಎಂದು ನಾನು ಯಾವತ್ತೂ ಭಾವಿಸಿರಲಿಲ್ಲ ಸದಾನಂದನ್ ಅವರ ಸಂಸದ ಕಚೇರಿಯು ಶೀಘ್ರವೇ ಸಚಿವರ ಕಚೇರಿಯಾಗಿ ಬದಲಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದೂ ಗೋಪಿ ಅವರು ಹೇಳಿದರು.



