ಬಿಹಾರದಲ್ಲಿ ರಾಹುಲ್ ಗಾಂಧಿ, ತೇಜಸ್ವಿಯಾದವ್ ನಿರ್ಣಾಯಕ ಪಾತ್ರ
ಪಾಟ್ನ:- ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಬಿಹಾರ ವಿಧಾನ ಸಭಾ ಚುನಾವಣೆಗೆ ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ಪಕ್ಷಗಳು ಸೀಟು ಹಂಚಿಕೆ ಬಗ್ಗೆ ಅಂತಿಮ ಒಪ್ಪಂದಕ್ಕೆ ಬಂದಿದ್ದು 144 ಸ್ಥಾನಗಳಿಗೆ ಪಟ್ಟುಹಿಡಿದಿದ್ದ ಆರ್ಜೆಡಿ ಅಂತಿಮವಾಗಿ 135 ಸ್ಥಾನಗಳಿಗೆ ಒಪ್ಪಿಕೊಂಡಿದೆ.
70 ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ 61 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಉನ್ನತಮೂಲಗಳಿಂದ ತಿಳಿದು ಬಂದಿದೆ.
ಒಟ್ಟು 243 ಸದಸ್ಯಬಲದ ಬಿಹಾರ ವಿಧಾನಸಭೆಯಲ್ಲಿ ಎಡಪಂಥೀಯ ಪಕ್ಷಗಳು 29-31 ಸ್ಥಾನಗಳನ್ನು ಪಡೆಯಲಿದ್ದು ಮತ್ತು ಮುಕೇಶ್ ಸಾಹ್ನಿಯವರ ವಿಕಾಸಶೀಲ ಇಸಾನ್ ಪಕ್ಷ 16 ಸ್ಥಾನಗಳಲ್ಲಿ ಹುರಿಯಾಳುಗಳನ್ನು ಕಣಕ್ಕೆ ಇಳಿಸಲಿದೆ.
ಜತೆಗೆ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಕೂಡ ಪಕ್ಷಗಳು ಇಪ್ಪಿಕೊಂಡಿವೆ.
ಆದರೆ ಯಾವುದೇ ಉಪಮುಖ್ಯಮಂತ್ರಿ ಹೆಸರಿಸುತ್ತಾರೆಯೇ ಇನ್ನೂ ಸ್ಪಷ್ಟವಾಗಿಲ್ಲ.
ಖಚಿತವಾಗಿ ಗೆಲುವಿನ ಸಾಧ್ಯತೆ ಇದೆ ಎನ್ನಲಾದ 70 ಸ್ಥಾನಗಳಿಗೆ ಕಾಂಗ್ರೆಸ್ ಪಟ್ಟು ಹಿಡಿದಿತ್ತು ಈ ಹಿನ್ನಲೆಯಲ್ಲಿ ತೇಜಸ್ವಿಯಾದವ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸುವ ನಿರ್ಧಾರವನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿತ್ತು.
ಹಾಗೂ ಈ ಬಗ್ಗೆ ಮೌನ ವಹಿಸಿತ್ತು.
ಜಾರ್ಖಂಡ್ ನಲ್ಲಿ ಮಿತ್ರಪಕ್ಷವಾಗಿರುವ ಜೆಎಂಎಂ ಹಾಗೂ ಐಪಿಪಿ ಪ್ರವೇಶದೊಂದಿಗೆ ಸಮಸ್ಯೆ ಮತ್ತಷ್ಟು ಜಟಿಲವಾಗಿತ್ತು.
ಆರಂಭದಲ್ಲಿ ಆರ್ಜೆಡಿ ಕಾಂಗ್ರೆಸ್ ಸಿಪಿಐ , ಸಿಪಿಎಂ ಹಾಗೂ ವಿಐಪಿ ಮಾತ್ರ ಕೂಟದಲ್ಲಿದ್ದವು.ಹಿಂದುಳಿದ ವರ್ಗದ ಬೆಂಬಲ ಹೊಂದಿರುವ ಮುಖೇಶ್ ಸಾಹ್ನಿ 50 ಸ್ಥಾನಗಳಿಗೆ ಬೇಡಿಕೆ ಮಂಡಿಸಿದ್ದಲ್ಲದೇ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ಉಪಮುಖ್ಯಮಂತ್ರಿ ಹುದ್ದೆಗೂ ಆಗ್ರಹ ಮಂಡಿಸಿದ್ದರು.ಅಂತಿಮವಾಗಿ ಆರ್ಜೆಡಿ ತನ್ನ ಕೋಟಾದಿಂದ ಜೆಎಂಎಂಗೆ ಸ್ಥಾನಗಳನ್ನು ಬಿಟ್ಟು ಕೊಡಲು ಕಾಂಗ್ರೆಸ್ ಗೆ ಐಐಪಿಗೆ ಸ್ಥಾನ ಬಿಟ್ಟು ಕೊಡಲು ನಿರ್ಧರಿಸಲಾಗಿದೆ



