ಠಾಣೆ ಎದುರು ದಲಿತ ಸಮುದಾಯದವರಿಂದ ಪ್ರತಿಭಟನೆ
ಕೊಪ್ಪಳ:- ಸಮಸ್ಯೆ ಹೇಳಲು ಠಾಣೆಗೆ ಬಂದ ದಲಿತ ಸಮುದಾಯದ ಯುವಕನ ಮೇಲೆ ಕುಕನೂರು ಪಿಎಸ್ ಐ ಗುರುರಾಜ್ ಅವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು ಹಲ್ಲೆ ನಡೆಸಿದ ಪಿಎಸ್ಐ ಅವರನ್ನು ಅಮಾನತು ಮಾಡಲು ಆಗ್ರಹಿಸಿ ಕುಕನೂರು ಪೋಲಿಸ್ ಠಾಣೆಯ ಎದುರು ದಲಿತ ಸಮುದಾಯದವರು ಜಮಾಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಗಾಳೆಪ್ಪ ಹಿರೇಮನಿ ಎಂಬವರು ತಮ್ಮ ಸಂಬಂಧಿಕರ ಸಮಸ್ಯೆಯನ್ನು ಹೇಳಿ ನ್ಯಾಯ ಕೊಡಿಸಿ ಎಂದು ಕೇಳಿದ್ದಕ್ಕೆ ಪಿಎಸ್ಐ ಅವರು ಕೊರಳ ಪಟ್ಟಿ ಹಿಡಿದು ನೀವು ಮಾದಿಗರು ಐದು ನೂರು ರೂಪಾಯಿಗೆ ಚಿಲ್ಲರೆ ಕೆಲಸ ಮಾಡುತ್ತೀರಿ ನಿಮ್ಮಿಂದ ನಾನು ಕೆಲಸ ಕಲಿಯುವ ಅಗತ್ಯ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
ನನಗೆ ಮನ ಬಂದಂತೆ ಹೊಡೆದಿದ್ದಾರೆ ಇದರಿಂದ ನನ್ನ ತಲೆ ಮತ್ತು ಕೈಗೆ ಗಾಯಗಳಾಗಿವೆ ನನಗೆ ನ್ಯಾಯಬೇಕೆಂದು ಗಾಳೆಪ್ಪ ಅವರು ಆಗ್ರಹಿಸಿದ್ದಾರೆ



