ಅಪ್ರಾಪ್ತರಿಗೆ ವಾಹನ ನೀಡುವ ಮಾಲಕರಿಗೆ ತಕ್ಕ ಪಾಠ ಕಲಿಸಿದ ಪೋಲಿಸ್ ಇಲಾಖೆ
ವಿಟ್ಲ:- ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಅಪಘಾತ ಮಾಡಿರುವ ಬಗ್ಗೆ ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಅದರ ಮಾಲಕನಿಗೆ 32000 ರೂ ದಂಡ ವಿಧಿಸಲಾಗಿದೆ.
ಸೆ.ತಿಂಗಳಿನಲ್ಲಿ ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪ್ರಾಪ್ತ ಬಾಲಕನು ಚಲಾಯಿಸುತ್ತಿದ್ದ ಇನ್ನೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಅಪಘಾತವಾಗಿತ್ತು ಈ ಬಗ್ಗೆ ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರ 74/2025 ಕಲಂ U/s :281,125(a) BNS and U /s :4(1) 181,146,196,199,A(1) 190(2)IMV Act and U/s 115CMV Rule ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಪ್ರಾಯದ ಬಾಲಕ KA 19-5-966ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಚಲಾಯಿಸಿ ಅಫಘಾತಪಡಿಸಿದ ಬಗ್ಗೆ ಮಾನ್ಯ ಎಸಿ ಜೆ .ಮತ್ತು ಜೆ.ಎಂ ಎಪ್ ಸಿ ನ್ಯಾಯಾಲಯ ಬಂಟ್ವಾಳದವರ ಸಿಸಿ ನಂಬ್ರ 1766/2025 ರಂತೆ ವಿಚಾರಣೆಗೊಂಡು ದಿನಾಂಕ 26.09.2025 ರಂದು ಆರೋಪಿ ವಾಹನದ ಆರ್ ಸಿ ಮಾಲಕರಾದ ಮಹಮ್ಮದ್ ಅನೀಸ್ ರವರಿಗೆ 32000 ರೂ ದಂಡ ವಿಧಿಸಿರುವುದಾಗಿದೆ.



