ಕಾಂಗ್ರೆಸ್ ಪಕ್ಷದ ಸೈದ್ದಾಂತಿಕ ನಿಲುವು ಜಾತ್ಯತೀತತೆ ಅದಕ್ಕೆ ಜನ ಬೆಂಬಲ
ಮಂಗಳೂರು:- ಕರ್ನಾಟಕ ರಾಜ್ಯದ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್ ಚಟುವಟಿಕೆಗಳ ಕುರಿತು ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ್ ರೈ ಅವರು ಹೇಳಿದ್ದಾರೆ.
ಅವರು ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದೇಶದ ಜಾತ್ಯತೀತ ಮೌಲ್ಯಗಳನ್ನು ಕಾಪಾಡಲು ಹಾಗೂ ಸಾಮಾಜಿಕ ಸಾಮರಸ್ಯವನ್ನು ಬಲಪಡಿಸಲು ಸಾರ್ವಜನಿಕ ಸ್ಥಳಗಳು ಮತ್ತು ಸರಕಾರಿ ಶಾಲೆಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಶಾಖೆಗಳ ಮೂಲಕ ಸಣ್ಣ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನ ನಡೆಯುತ್ತಿದೆ.
ಇದು ಮುಂದಿನ ದಿನಗಳಲ್ಲಿ ಸಮಾಜದ ಶಾಂತಿ ಹಾಗೂ ಸಹಬಾಳ್ವೆಗೆ ಅಪಾಯಕರಾರಿಯಾಗಿದೆ ಎಂದರು
ದಕ್ಷಿಣ ಕನ್ನಡ ಜಿಲ್ಲೆಯ ಮತೀಯ ಸಾಮರಸ್ಯಕ್ಕೆ ಹಾನಿ ಆಗದಂತೆ ಎಲ್ಲರೂ ಜಾಗೃತರಾಗಬೇಕು ಆರ್ ಎಸ್ ಎಸ್ ಸಂಘಟನೆಯಿಂದ ಮತ ಭೇದ ಹುಟ್ಟಿಸುವ ಕಾರ್ಯಕ್ರಮಗಳು ನಡೆಯುತ್ತಿರುವುದಾಗಿ ಆರೋಪಿಸಿ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ನಿಲುವು ಜಾತ್ಯಾತೀತವಾದದ್ದು ಅದಕ್ಕೆ ಜನರು ನಮಗೆ ಬೆಂಬಲಿಸುತ್ತಿದ್ದಾರೆ ಆರ್ ಎಸ್ ಎಸ್ ಚಟುವಟಿಕೆಗಳು ಇದರ ವಿರುದ್ಧವಾಗಿವೆ ಅದನ್ನು ನಾವು ಖಂಡಿಸುತ್ತೇವೆ ರಾಹುಲ್ ಗಾಂಧಿಯವರ ಮಾತು ಉಲ್ಲೇಖಿಸಿ ಆರೆಸ್ಸೆಸ್ಸಿಗೆ ಹೆದರುವವರು ನಮ್ಮ ಪಕ್ಷದಲ್ಲಿರಬಾರದು ಎಂಬ ಅವರ ನಿಲುವು ಸೈದ್ಧಾಂತಿಕವಾಗಿ ಸರಿಯಾಗಿದೆ
ಕಾರ್ಯಕರ್ತರು ಧರ್ಮನಿರಪೇಕ್ಷ ಸಮಾಜ ನಿರ್ಮಾಣದತ್ತ ಶ್ರಮಿಸಬೇಕು ಸರ್ದಾರ್ ವಲ್ಲಭಭಾಯಿ ಪಟೇಲ್ ರವರನ್ನು ಕೇವಲ ಪ್ರಚಾರಕ್ಕಾಗಿ ಬಳಸದೆ ಅವರ ತೀರ್ಮಾನಗಳ ಆತ್ಮವನ್ನು ಗೌರವಿಸಬೇಕೆಂದು ಒತ್ತಾಯಿಸಿದರು
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪಕ್ಷದ ವಕ್ತಾರರಾದ ಎಂಜಿ ಹೆಗ್ಗಡೆ , ಬೇಬಿ ಕುಂದರ್, ಬಿ.ಎಲ್ ಪದ್ಮನಾಭ ಕೋಟ್ಯಾನ್, ಎಸ್ ಅಪ್ಪಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ದಿನೇಶ್ ಮುಳೂರು , ಸದಾಶಿವ ಶೆಟ್ಟಿ, ಟಿಕೆ ಸುದೀರ್, ಗಿರೀಶ್ ಶೆಟ್ಟಿ, ಪದ್ಮಪ್ರಸಾದ್ ಜೈನ್, ಮಂಜುಳಾ ನಾಯಕ್, ರಮಾನಂದ ಪೂಜಾರಿ, ಸಜೀತ್ ಶೆಟ್ಟಿ ವಾಮಂಜೂರು, ಯೋಗೀಶ್ ಕುಮಾರ್, ಸುನೀಲ್ ಬಜಿಲಕೇರಿ ಮತ್ತಿತರರು ಉಪಸ್ಥಿತರಿದ್ದರು



