ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಿಂದ ಸೂಕ್ತ ಕ್ರಮದ ಭರವಸೆ
ಪುತ್ತೂರು:- ಸಂಚಾರಿ ಪೋಲಿಸರ ಸೂಚನೆಯನ್ನು ಪಾಲಿಸಲಿಲ್ಲವೆಂಬ ಕಾರಣಕ್ಕೆ ಬೆನ್ನಟ್ಟಿಕೊಂಡು ಬಂದು ಆಟೀ ಚಾಲಕನ ಮೈ ಮೇಲೆ ಕೈ ಮಾಡಿ ಅವಾಚ್ಯ ಪದಗಳಿಂದ ಬೈದು ನಿಂದಿಸಿದ ಘಟನೆ ಸಂಬಂಧಿತ ವಿಡಿಯೋ ಸಾಮಾಜಿ ಜಾಲತಾಣಗಳಲ್ಲಿ ಹರಿದಾಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಬಗ್ಗೆ ವರದಿಯಾಗಿದೆ.
ಪುತ್ತೂರು ಟ್ರಾಫಿಕ್ ಪೋಲಿಸ್ ಠಾಣೆಯ ಇಬ್ಬರು ಸಿಬ್ಬಂದಿ ಆಟೋ ರಿಕ್ಷಾವೂಂದನ್ನು ಬೆನ್ನಟ್ಟಿಕೊಂಡು ಬಂದಿರುವುದು ಬೈಕ್ ನಿಲ್ಲಿಸಿ ರಿಕ್ಷಾವನ್ನು ತಡೆದು ನಿಲ್ಲಿಸಿದ ಪೋಲಿಸರು ರಿಕ್ಷಾವನ್ನು ಆಪ್ ಮಾಡಲು ಸೂಚಿಸಿ ಆಟೋ ರಿಕ್ಷಾದ ಕೀ ಕಿತ್ತುಕೊಳ್ಳು ಯತ್ನಿಸುವುದು ಪೋಲಿಸರ ವಿಡಿಯೋ ಮಾಡುತ್ತಿಯಾ ಎಂದು ಪ್ರಶ್ನಿಸುವುದು ಆತನ ಅಂಗಿಯನ್ನು ಹಿಡಿದೆಳೆಯುವುದು ಅವಾಚ್ಯ ಪದಗಳಿಂದ ನಿಂದಿಸುವುದು ಮತ್ತು ಮೈ ಮೇಲೆ ಕೈ ಮಾಡುವುದು ದ್ರಶ್ಯಾವಳಿಯಲ್ಲಿ ಕಾಣಿಸಿದೆ.
ಈ ವಿಡಿಯೋ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹಾರಿದಾಡುತ್ತಿದ್ದಂತೆಯೇ ಆಕ್ರೋಶಗೊಂಡ ಸಾರ್ವಜನಿಕರು ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಸೆಳೆಯುವರೆಗೆ ಹಂಚಿಕೊಳ್ಳಿ ಎಂದು ವಿನಂತಿಸಿದ್ದು ಮತ್ತಷ್ಟು ಗ್ರೂಪುಗಳಿಗೆ ವಿಡಿಯೋ ಹರಿದಾಡುವಂತೆ ಮಾಡಿದ್ದಾರೆ.
ಪ್ರಕರಣದ ವಿಡಿಯೋ ದೃಶ್ಯಾವಳಿಯನ್ನು ವೀಕ್ಷಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಸ್ಪಷ್ಟಣೆ ನೀಡಲಾಗಿದ್ದು ವಿಡಿಯೋ ದಲ್ಲಿ ಇಬ್ಬರು ಪೋಲಿಸರ ಕೃತ್ಯ ತಪ್ಪು ಎಂದು ಸ್ಪಷ್ಟವಾಗಿ ತೋರುತ್ತಿದ್ದು ಘಟನೆಯ ಕಾರಣವನ್ನು ಪರಿಶೀಲಿಸಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ



