ರಾಜಧಾನಿಯಲ್ಲಿ ಬೆಚ್ಚಿ ಬೀಳಿಸಿದ ಘಟನೆ
ಬೆಂಗಳೂರು:- ಪ್ರೀತಿಸಲು ನಿರಾಕರಿಸಿದ ವಿದ್ಯಾರ್ಥಿನಿಯ ಕತ್ತು ಕೊಯ್ದು ಹತ್ಯೆ ಮಾಡಿದ್ದ ಪಾಗಲ್ ಪ್ರೇಮಿಯನ್ನು ಪೋಲಿಸರು ಬಂಧಿಸಿದ್ದಾರೆ.
ವಿದ್ಯಾರ್ಥಿನಿ ಯಾಮಿನಿ ಪ್ರಿಯಾಳನ್ನು ಹತ್ಯೆ ಮಾಡಿದ್ದ ವಿಘ್ನೇಶ್ ಮತ್ತು ಆತನಿಗೆ ನೆರವಾಗಿದ್ದ ಹರೀಶ್ ಎಂಬಾತನನ್ನು ಶ್ರೀರಾಂಪುರ ಪೋಲಿಸರು ಆರೆಸ್ಟ್ ಮಾಡಿದ್ದಾರೆ.
ಯಾಮಿನಿಯ ಹಿಂದೆ ಪ್ರಿಯಕರ ವಿಶ್ಲೇಸ್ ಬಿದ್ದಿದ್ದ ವಿಶ್ವೇಶ್ ಪ್ರೀತಿಯನ್ನು ಯಾಮಿನಿ ತಿರಸ್ಕರಿಸಿದ್ದಳು ಇಂದು ಮನೆಗೆ ಹೋಗುತ್ತಿದ್ದಾಗ ವಿಫೇಶ್ ಯಾಮಿನಿಯನ್ನು ಹಿಂಬಾಲಿಸಿದ್ದಾನೆ
ಕಣ್ಣಿಗೆ ಖಾರದ ಹುಡಿ ಹಾಕಿ ಮನಸೋ ಇಚ್ಚೆ ದಾಳಿ ನಡೆಸಿದ್ದಾನೆ ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದರಿಂದ ತೀವ್ರ ರಕ್ತಸ್ರಾವದಿಂದ ಯಾಮಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಸ್ಥಳಕ್ಕೆ ಆಗಮಿಸಿದ ಶ್ರೀರಾಂಪುರ ಪೋಲಿಸರು ಪರಿಶೀಲನೆ ನಡೆಸುತ್ತಿದ್ದಾರೆ



