ಆಕರ್ಷಕ ಅತ್ಯಾಕರ್ಷಕ ವಸ್ತುಗಳು ಲಭ್ಯ
ಪುತ್ತೂರು:- LEGACY HOMES ಫರ್ನಿಚರ್ಸ್ ಮತ್ತು ಎಲೆಕ್ಟ್ರಾನಿಕ್ಸ್ ನೂತನ ಮಳಿಗೆಯು ಅ.20 ಸೋಮವಾರ ಪುತ್ತೂರಿನ ನೆಹರು ನಗರದಲ್ಲಿ ಶುಭಾರಂಭಗೊಳ್ಳಲಿದೆ.
ನೂತನ ಸಂಸ್ಥೆಗೆ ಬಹು| ಅಸಯ್ಯಿದ್ ಅಹ್ನದ್ ಪೂಕೂಯ ತಂಙಳ್ ಪುತ್ತೂರು,
ಬಹು| ಅಸಯ್ಯಿದ್ ಯಹಿಯ್ಯ ತಂಙಳ್ ಪೋಲ್ಯ ಪುತ್ತೂರು,
ಬಹು| ಅಸಯ್ಯಿದ್ ಶರಪುದ್ದೀನ್ ತಂಙಳ್ ಅಲ್ ಹಾದಿ ಸಾಲ್ಮರ , ಇವರುಗಳು ದುಅ ಆಶಿರ್ವಚನವನ್ನು ನೀಡಲಿದ್ದಾರೆ.

ಅ.20 ಬೆಳಿಗ್ಗೆ 9:30 ಕ್ಕೆ ನೂತನ ಸಂಸ್ಥೆಯ ಉದ್ಘಾಟನಾ ಸಮಾರಂಭದ ಉದ್ಘಾಟನೆಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀ ಸಂಜೀವ ಮಠಂದೂರು ಅವರು ಉದ್ಘಾಟಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ವಹಿಸಲಿರುವವರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಈಶ್ವರ ಭಟ್ ಪಂಜಿಗುಡ್ಡೆ , ಕಲ್ಲೇಗ ಜುಮಾ ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ಹಾಜಿ, ಪುತ್ತೂರು ನಗರಸಭಾ ಸದಸ್ಯರಾದ ಶ್ರೀ ದಿನೇಶ್ ಶೇವಿರೆ, ಉದ್ಯಮಿಗಳಾದ ಪ್ರಸನ್ನ ಕುಮಾರ್ ಶೆಟ್ಟಿ, ಮಾಸ್ಟರ್ ಪ್ಲಾನರಿ ಮಾಲಕರಾದ ಆನಂದ್ ಕುಮಾರ್ ಎಸ್ ಕೆ, ಉದ್ಯಮಿ ಉಮ್ಮರ್ ಮಲ್ನಾಡ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಇಸ್ಮಾಯಿಲ್ ಬೊಳ್ವಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ನೂತನ ಸಂಸ್ಥೆಯ ಮಾಲಕರಾದ ಮುಹಮ್ಮದ್ ಝಾಹಿದ್ ಹಾಗೂ ಹೈದರ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ



