ಇಬ್ಬರು ಪೋಲಿಸರ ಅಮಾನತು
ಪುತ್ತೂರು:- ಅ.17 ರಂದು ಸಂಜೆ ಆಟೋ ಚಾಲಕ ಬಶೀರ್ ಕುರಿಯ ಗ್ರಾಮ ಎಂಬವರು ಸಮವಸ್ತ್ರ ಧರಿಸದೇ ಆಟೋ ಚಲಾಯಿಸಿಕೊಂಡು ಬರುತ್ತಿರುವಾಗ ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೋಲಿಸ್ ಠಾಣಾ ಚಿದಾನಂದ ರೈ ಎ.ಎಸ್.ಐ ಮತ್ತು ಸಿಪಿಸಿ 2283 ಶ್ರೀ ಶೈಲ ಎಂ.ಕೆ ಕೈ ಸನ್ನೆ ಮೂಲಕ ನಿಲ್ಲಿಸಲು ಸೂಚಿಸಿದ್ದರೂ ತನ್ನ ವಾಹನವನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಬಂದು ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡಿದ್ದು ಈ ಕುರಿತು ಬಶೀರ್ ಅವರನ್ನು ಹಿಂಬಾಲಿಸಿ ವಾಹನವನ್ನು ತಡೆದು ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಲ್ಲೆ ಮಾಡಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ
ಇದನ್ನು ಪರಿಶೀಲಿಸಿ ಚಿದಾನಂದ ರೈ ಎ.ಎಸ್ ಐ ಮತ್ತು ಸಿಪಿಸಿ 2283 ಶ್ರೀ ಶೈಲ ಎಂಕೆ ರವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಜಿಲ್ಲಾ ಎಸ್ಪಿ ತಿಳಿಸಿದ್ದಾರೆ



