ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಸಾಲೆತ್ತೂರು:- ಸಮನ್ವಯ ಆರ್ಟ್ಸ್ ಸ್ಪೋರ್ಟ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇದರ ಆಶ್ರಯದಲ್ಲಿ ಅ.25-10-2025 ಶನಿವಾರ ಹೊನಲು- ಬೆಳಕಿನ ಸ್ಥಳೀಯ ಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 10025 ಹಾಗೂ ಬಹುಮಾನ ನೀಡಲಾಗುವುದು.
ದ್ವೀತಿಯ ಸ್ಥಾನ ಪಡೆಯುವ ತಂಡಕ್ಕೆ 7025 ಮತ್ತು ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಶ್ರೀ ಎಂ.ಎಸ್ ಮಹಮ್ಮದ್, ಡಾ.ರವಿರಾಜ್ ರೈ ಕುಲಾಲು, ಶ್ರೀಮತಿ ಲತಾ ಸಿ ರೈ, ಅಧ್ಯಾಪಕರು ಕಾಡುಮಠ ಶಾಲೆ ಇವರುಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮ ಅ.25 ಶನಿವಾರ ಸಾಯಂಕಾಲ 3:30 ಕ್ಕೆ ಆರಂಭವಾಗಲಿದೆ.
ಉದ್ಘಾಟನೆಯನ್ನು ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ರಫ್ ಕೆ ಸಾಲೆತ್ತೂರು ಅವರು ಮಾಡಲಿರುವವರು.
ಅಧ್ಯಕ್ಷತೆಯನ್ನು ಟಿ.ಎಂ ಈಶ್ವರ್ ಖಂಡ್ರೆ ಇಂಟ್ರಗಿಟಿ ಸ್ಥಾಪಕ ಅಧ್ಯಕ್ಷರಾಗಿರುವ ಎಂ.ಕೆ ಅನ್ಸಾಫ್ ಇವರು ವಹಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರು ಬಂಟ್ವಾಳ ಕೆಡಿಪಿ ಸದಸ್ಯರಾದ ಹಾಜಿ ಎಬಿ ಅಬ್ದುಲ್ಲಾ, ಮಾಜಿ ತಾ.ಪಂ.ಸದಸ್ಯರಾದ ಮಾಧವ ಮಾವೆ, ನಾರಾಯಣ ಶೆಟ್ಟಿ ಕುಲ್ಚಾರ್, ಅಬ್ಬಾಸ್ ಅಲಿ ಬೊಳಂತೂರು, ಹಮೀದ್ ಸುರಿಬೈಲ್ , ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಬ್ರಾಹಿಂ ಜಿ.ಎಸ್, ಹಸೈನಾರ್ ಪಿಕೆ, ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಆಸ್ಮ ಹಸೈನಾರ್, ರಝಾಕ್ ಸುರಿಬೈಲು, ಮಹಮ್ಮದ್ ಎಸ್ ಕೆ, ಯೂತ್ ಕಾಂಗ್ರೆಸ್ ಬಂಟ್ವಾಳ ಇದರ ಉಪಾಧ್ಯಕ್ಷ ಹಫೀಝ್ ಸಾಲೆತ್ತೂರು, ಸಪ್ವಾನ್ ಸಾಲೆತ್ತೂರು ಕಟ್ಟೆ, ಬಶೀರ್ ಕೊಳ್ನಾಡು, ಅಝೀಝ್ ಸಾಲೆತ್ತೂರು ಕಟ್ಟೆ, ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಾತ್ರಿ ಸಮಯ 7:00 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಬಿ ರಮಾನಾಥ್ ರೈ ಅವರು ವಹಿಸಲಿರುವವರು.
ಮುಖ್ಯ ಅತಿಥಿಗಳಾಗಿ, ಜಿ.ಪಂ.ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್ , ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಶೆಟ್ಟಿ ಕುಳಾಲ್, ಶ್ರೀಮತಿ ಮಲ್ಲಿಕಾ ಪಕ್ಕಳ, ಅಭಿಮತ ಟಿವಿ ಮಂಗಳೂರು ಮುಖ್ಯಸ್ಥರಾದ ಡಾ ಮಮತಾ ಪಿ ಶೆಟ್ಟಿ, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಮಂಜುಳಾ ನಾಯಕ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಬ್ರಾಹಿಂ ನವಾಝ್ , ಶಶಿಧರ್ ಕಾಡುಮಠ, ಲುಕ್ಮಾನ್ ಬಂಟ್ವಾಳ, ಪವಿತ್ರ ಪೂಂಜಾ , ಲತೀಫ್ ಪರ್ತಿಪ್ಪಾಡಿ, ಕರಿಂ ಬೊಳ್ಳಾಯಿ, ರಝಾಕ್ ಚೌಟ, ರಾಮಪ್ರಸಾದ್ ರೈ , ಖಾದರ್ ಮೂಸ ,ಉದ್ಯಮಿ ಶಫೀಕ್ ಕತ್ತಾರ್, ಕೆಪಿಸಿಸಿ ಮಾಧ್ಯಮ ಕಾರ್ಯದರ್ಶಿ ಉಮ್ಮರ್ ಸಾಲೆತ್ತೂರು, ಉದ್ಯಮಿ ಹಾಶಿರ್ ಕಟ್ಟತ್ತಿಲ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಸಮನ್ವಯ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ತಿಳಿಸಿದ್ದಾರೆ.



