ರಾಜ್ಯದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್ ಎಂ ರೇವಣ್ಣ ಉಪಾಧ್ಯಕ್ಷ ಪುಷ್ಪ ಅಮರನಾಥ್ ಆಗಮನ
ಬಿಸಿರೋಡ್:- ಗೃಹಲಕ್ಷ್ಮಿ ಫಲಾನುಭವಿಗಳ ಸ್ವಸಹಾಯ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಬಿ.ಸಿ .ರೋಡಿನ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಅಕ್ಟೋಬರ್ 28ರಂದು ನಡೆಯಲಿದೆ.
ಬಂಟ್ವಾಳ ತಾಲೂಕು ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಶ್ರೀಮತಿ ಜಯಂತಿ ವಿ ಪೂಜಾರಿ ಅವರು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ರಾಜ್ಯದ ಪಂಚ ಗ್ಯಾರಂಟಿ ಯೋಜನೆ ಪ್ರಾಧಿಕಾರ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಎಚ್ ಎಂ ರೇವಣ್ಣ , ಉಪಾಧ್ಯಕ್ಷರಾದ ಪುಷ್ಪ ಅಮರನಾಥ್ , ಮಾಜಿ ಸಚಿವರಾದ ಬಿ ರಮಾನಾಥ್ ರೈ, ಜಿಲ್ಲಾಧ್ಯಕ್ಷ ಶ್ರೀ ಭರತ್ ಮುಂಡೋಡಿ, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು ಸುದಿಗೋಷ್ಟಿಯಲ್ಲಿ ಸದಸ್ಯರಾದ ಚಂದ್ರಶೇಖರ ಆಚಾರ್ಯ , ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.
527 ಕೋಟಿ ರೂಗಳನ್ನು ಬಂಟ್ವಾಳ ತಾಲೂಕಿನಲ್ಲಿ ಫಲಾನುಭವಿಗಳು ಪಡೆದುಕೊಂಡಿದ್ದಾರೆ.ಎಂದು ಹೇಳಿದ ಅವರು ಸಂಜೀವಿನಿ ಗುಂಪಿನಿಂದ ಹೊರಗುಳಿದ ಗೃಹಲಕ್ಷ್ಮಿ ಯೋಜನೆ ಪಲಾನುಭವಿಗಳು ಈ ಸ್ವಸಹಾಯ ಸಂಘದಲ್ಲಿ ಸೇರ್ಪಡೆಯಾಗಲಿದ್ದಾರೆ ಈಗಾಗಲೇ ತಾಲೂಕಿನಲ್ಲಿ 39 ಗುಂಪುಗಳ ರಚನೆಯಾಗಿದೆ ಎಂದರು



