ಸುಳ್ಳು ಕೇಸು ಹಾಕುತ್ತಿದ್ದಾರೆಂದು ತಹಶಿಲ್ದಾರ್ ಗೆ ದೂರು ಎಸ್ಐಟಿ ವಿಚಾರಣೆಗೆ ಬರದ ಹೋರಾಟಗಾರರು
ಬೆಳ್ತಂಗಡಿ :- ಅ.27 ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಮರೋಡಿ ಸೇರಿದಂತೆ ಅವರ ಜೊತೆಗಿದ್ದವರ ಮೇಲೆ ವಿನಾಕಾರಣ ಸುಳ್ಳು ಕೇಸುಗಳನ್ನು ಹಾಕಿ ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿ ತಹಶಿಲ್ದಾರ್ ಗೆ ದೂರು ನೀಡಲು ಆಗಮಿಸಿದ್ದವರನ್ನು ಪೋಲಿಸರು ತಡೆದಿದ್ದರಿಂದ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಹೈಡ್ರಾಮಾ ನಡೆಯಿತು.
ಇಂದು ಬೆಳಿಗ್ಗೆ 10:30 ಕ್ಕೆ ಸೌಜನ್ಯ ತಾಯಿ ಕುಸುಮಾವತಿ ಮಹಿಳಾ ಹೋರಾಟಗಾರ್ತಿ ಪ್ರಸನ್ನ ರವಿ ನೇತೃತ್ವದಲ್ಲಿ ಮನವಿ ಕೊಡುವುದಕ್ಕೆ ಸಿದ್ದತೆ ನಡೆಸಲಾಗಿತ್ತು ಇದೇ ವೇಳೆ ಸೌಜನ್ಯ ಹೋರಾಟದ ಪರವಾಗಿದ್ದವರು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಸೇರಿದ್ದಾರೆ ಆದರೆ ಬೆಳ್ತಂಗಡಿ ಠಾಣೆ ಪೋಲಿಸರು ಮನವಿ ಕೊಡುವುದಕ್ಕೆ ಅವಕಾಶ ನೀಡುವುದಿಲ್ಲ ಇಲ್ಲಿ ಜನ ಸೇರಿಸುವುದೇ ತಪ್ಪು ಎಂದು ಅವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.
ಇದೇ ವೇಳೆ ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಪಿತೂರಿ ನಡೆಸಿದ್ದಾರೆಂಬ ಆರೋಪಕ್ಕೀಡಾದ ಮಹೇಶ್ ಶೆಟ್ಟಿ ತಿಮರೋಡಿ ಗಿರೀಶ್ ಮಟ್ಟಣ್ಣವರ್ ಜಯಂತ್ ವಿಠಲ ಗೌಡರನ್ನು ಸೋಮವಾರ ಬೆಳಿಗ್ಗೆ 10:30 ಕ್ಕೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿತ್ತು ಆದರೆ ಹೋರಾಟಗಾರರು ಎಸ್ ಐಟಿ ವಿಚಾರಣೆ ಹಾಜರಾಗದೆ ಮೌನ ತಾಳಿದ್ದಾರೆ ಈ ಹಿನ್ನಲೆಯಲ್ಲಿ ಎಸ್ಐಟಿ ಮತ್ತೊಮ್ಮೆ ನೋಟಿಸ್ ಕೊಡುವ ಸಾಧ್ಯತೆಯಿದ್ದು ಅದಕ್ಕೂ ಸ್ಪಂದಿಸದಿದ್ದರೆ ಬಂಧಿಸುವುದಕ್ಕೆ ಮುಂದಾಗಲಿದ್ದಾರೆ ಎನ್ನಲಾಗುತ್ತಿದೆ.



