ಮೃತ ಪುತ್ತೂರು ಕುದ್ಮಾರು ನಿವಾಸಿ ಕಾರ್ತಿಕ್
ಬಂಟ್ವಾಳ:- ಪಾಣೆಮಂಗಳೂರು ಪ್ಲೈಓವರ್ ನಲ್ಲಿ ಕಾರೂಂದು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಪುತ್ತೂರಿನ ಯುವಕ ಮೃತಪಟ್ಟ ಘಟನೆ ನಡೆದಿದೆ
ಮೃತರನ್ನು ಪುತ್ತೂರು ಕುದ್ಮಾರು ನಿವಾಸಿ ಕಾರ್ತಿಕ್ (24) ಎಂದು ಗುರುತಿಸಲಾಗಿದೆ.
ಮೂವರು ಪ್ರಯಾಣಿಸುತ್ತಿದ್ದ ಕಾರು ಬಂಟ್ವಾಳ ಪಾಣೆಮಂಗಳೂರು ಪ್ಲೈಓವರ್ ಬಳಿ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಪರಿಣಾಮ ಗಂಭೀರ ಗಾಯಗೊಂಡಿದ್ದ ಕಾರ್ತಿಕ್ ರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಯಿತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ



