ಎಲ್ಲಾ ಅಭಿವೃದ್ಧಿ ಕೆಲಸಗಳು ನೀತಿ ನಿಯಮಗಳ ಪ್ರಕಾರವೇ ನಡೆದಿದೆ ಖಾದರ್ ಹೇಳಿಕೆ
ಬೆಂಗಳೂರು:- ಸಂಸದ ವಿಶ್ವೇಶರ ಹೆಗೆಡೆ ಕಾಗೆರಿ ತನ್ನ ವಿರುದ್ಧ ಮಾಡಿರುವ ಆರೋಪ ದುರುದ್ದೇಶಪೂರಿತ ಮತ್ತು ಆಧಾರರಹಿತ ಎಂದು ವಿಧಾನ ಸಭಾ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಯುಟಿ ಖಾದರ್ ವಿಧಾನಸಭೆಯ ಸ್ಪೀಕರ್ ಆಗಿರುವ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸ್ಪೀಕರ್ ಹಾಗೂ ಹಾಲಿ ಸಂಸದ ಕಾಗೇರಿ ಮಾಡಿರುವ ಆರೋಪಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ
ವಿಶ್ವೇಶರ ಹೆಗಡೆ ಆರೋಪ ಮಾಡಿರುವಂತಹ ಯಾವುದೇ ಅಕ್ರಮ ನಡೆದಿಲ್ಲ ಎಲ್ಲಾ ಅಭಿವೃದ್ಧಿ ಕೆಲಸಗಳು ನೀತಿ ನಿಯಮಗಳು ಪ್ರಕಾರವೇ ನಡೆದಿವೆ ಅಭಿವೃದ್ಧಿ ಕೆಲಸಗಳು ಬಗ್ಗೆ ಯಾವುದೇ ತನಿಖೆಯನ್ನು ಬೇಕಿದ್ದರೂ ಮಾಡಿಸಬಹುದು ನಾನು ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ ಎಂದು ಯುಟಿ ಖಾದರ್ ಹೇಳಿದ್ದಾರೆ



