SSF ಸವಣೂರು ಶಾಖೆಯ ವಾರ್ಷಿಕ ಮಹಾಸಭೆಯು 29-11-2025 ರಂದು ಇಶಾ ನಮಾಝಿನ ಬಳಿಕ ಕಛೇರಿಯ ಲ್ಲಿ ನಡೆಯಿತು.
ಅಧ್ಯಕ್ಷ ತೆಯನ್ನು ಅಬೂಬಕ್ಕರ್ ಮುಸ್ಲಿಯಾರ್ ಕಾಯರ್ಗ ವಹಿಸಿದರು ನೌಫಲ್ ಸವಣೂರು ರವರು ಸ್ವಾಗತ ಭಾಷಣ ಹಾಗೂ ಸಾದಾತ್ ಕಾಯರ್ಗ ರವರು ಉದ್ಘಾಟನೆ ಗೈದು ಫಾರಿಸ್ ಕಾಯರ್ಗ ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ವೀಕ್ಷಣಾ ಧಿಕಾರಿಯಾಗಿ ಆಗಮಿಸಿದ ಸಿನಾನ್ ಪಲ್ಲತ್ತಾರು ಅವರ ನಿರ್ದೇಶನ ಹಾಗೂ ಕಾರ್ಯಕರ್ತರ ಒಮ್ಮತಾಭಿಪ್ರಾಯದ ಪ್ರಕಾರ ಸಮಿತಿಯನ್ನು ಬರ್ಖಾಸ್ತು ಮಾಡದೆ 2026- 027 ಸಾಲಿನ ಅಧ್ಯಕ್ಷರಾಗಿ ಮುಹಮ್ಮದ್ ಫಾರಿಸ್ ಕಾಯಾರ್ಗ, ಉಪಾಧ್ಯಕ್ಷರಾಗಿ ಸಯ್ಯಿದ್ ಅಬ್ದುರ್ರಹ್ಮಾನ್ ತಂಙಳ್ ಮಾಂತೂರು, ಕಾರ್ಯದರ್ಶಿಯಾಗಿ ಮುಹಮ್ಮದ್ ನೌಫಲ್ ಶಾಂತಿನಗರ, ಜೊತೆಗೆ ಕಾರ್ಯದರ್ಶಿಯಾಗಿ ಸಾದಾತ್ ಕಾಯಾರ್ಗ, ಖಜಾಂಜಿಯಾಗಿ ಅಲಿ ಅಸ್ಗರ್ ಅಲಿ ಮಾಂತೂರು, GD ಆಗಿ ಶಮ್ಮಾಸ್ ಮಾಂತೂರು, QD ಆಗಿ ಸಲ್ಮಾನ್ ಮಾಂತೂರು, ದಅ್‌ವಾಹ್‌ಗೆ ರುವೈದ್ ಸವಣೂರು, ರೈಂಬೋ ವಿಭಾಗಕ್ಕೆ ಉವೈಸ್ ಸವಣೂರು ಮತ್ತು ಕ್ಯಾಂಪಸ್ ವಿಭಾಗಕ್ಕೆ ಫುಹಾದ್ ಶಾಂತಿನಗರ ಹಾಗೂ ಕಾರ್ಯಾಕಾರಿ ಸಮಿತಿ ಸದಸ್ಯರಾಗಿ ಫೈಝಲ್ ಶಾಂತಿನಗರ, ನುಹ್ ಮನ್ ಸವಣೂರು, ಜಲೀಲ್ ಮುಹೀನಿ ಪಣೆಮಜಲು , ಆದಿಲ್ ಪಣೆಮಜಲು, ಸೈಫುದ್ದೀನ್ ಶಾಂತಿನಗರ ಹಾಗೂ ಹಬೀಬ್ ಸವಣೂರು ಇವರನ್ನು ಮುಂದುವರಿಸಲಾಯಿತು .



