ಹೆಚ್ಚಿನ ಚಿಕಿತ್ಸೆಗಾಗಿ ಅಸ್ವಸ್ಥ ಮಹಿಳೆಯನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲು ನೆರವಾದ ಕಾಂಗ್ರೆಸ್ ಪಕ್ಷದ ಪ್ರಮುಖರು
ಪುತ್ತೂರು:- ತಿಂಗಳಾಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಸಡನ್ ಆಗಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದು ಅಸ್ವಸ್ಥ ಮಹಿಳೆ ತಿಮ್ಮಕ್ಕ (68) ಎಂದು ಗುರುತಿಸಲಾಗಿದೆ.

ಇದನ್ನು ನೋಡಿದ ಮಹಿಳೆಯ ಸಂಬಂಧಿಕರು ತಕ್ಷಣ ಅಸ್ವಸ್ಥ ಮಹಿಳೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು
ಈ ಸಂದರ್ಭದಲ್ಲಿ ಮಹಿಳೆಯ ತಲೆಗೆ ಹೆಚ್ಚಿನ ಗಾಯ ಆಗಿರುವುದರಿಂದ ಮಹಿಳೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲು ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪ್ರವೀಣ್ ಆಚಾರ್ಯ ,
ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಗರೀಶ್ ರೈ , ಪ್ರಮುಖರಾದ ಸತೀಶ್ , ಹರೀಶ್ ನಿಡ್ಪಳ್ಳಿ ,
ಉಪ್ಪಿನಂಗಡಿ ಆರೋಗ್ಯ ರಕ್ಷಾ ಸಮಿತಿಯ ಸದಸ್ಯೆ ಶ್ರೀಮತಿ ಜಯಶೀಲ, ಮುಂಡೂರು ಗ್ರಾಮ
ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಅಲಿ , ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ದಾಮೋದರ ಮುರ, ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ರಾಮಣ್ಣ ಪಿಲಿಂಜ ಮೊದಲಾದವರು ಸಹಕರಿಸಿದರು



