ಪುಣಚ:- ಕಳೆದ ಅನೇಕ ವರ್ಷಗಳಿಂದ ಪುಣಚದ ಮಣಿಲ ಮತ್ತು ಕಳೆದ ಕೆಲವು ತಿಂಗಳಿನಲ್ಲಿ ಮಣಿಲ ಮುಖ್ಯ ರಸ್ತೆಯಲ್ಲಿ ಕಾರ್ಯಚರಿಸುತ್ತಿದ್ದ ಬ್ಲಿಸ್ ಲಂಡನ್ ಪ್ರೀ ಸ್ಕೂಲ್ ಇಂದು ಪರಿಯಾಲ್ತಡ್ಕ ಮಸೀದಿಯ ನೂತನ ನವೀಕೃತ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತ್ತು.
ಈ ಸಂದರ್ಭದಲ್ಲಿ ಪರಿಯಾಲ್ತಡ್ಕ ಮಸೀದಿ ಅಧ್ಯಕ್ಷರಾದ ಎಂ.ಎಸ್ ಮಹಮ್ಮದ್, ಮಸೀದಿ ಸದರ್ ಉಸ್ತಾದ್ ಅಬೂಬಕ್ಕರ್ ಸಿದ್ದೀಕ್ ರಝ್ವಿ ಅವರು ಸಂಸ್ಥೆಯನ್ನು ಉದ್ಘಾಟಿಸುವ ಮೂಲಕ ಸಂಸ್ಥೆಗೆ ಶುಭ ಹಾರೈಸಿದರು
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರಾದ ನೂರ್ ಮುಹಮ್ಮದ್ ನೀರ್ಕಜೆ, ಅಶ್ರಫ್ ಅಂಜದಿ, ಕಮರುದ್ದೀನ್ ಪರಿಯಾಲ್, ಎಂ.ಎಸ್ ಶಫೀಕ್ ಮಣಿಲ,
ಶಾಫಿ ಮಾಳಿಗೆ,ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು
ಕಾರ್ಯಕ್ರಮದಲ್ಲಿ ಹಿರಿಯರಾದ ಕುಂಚ ಪರಿಯಾಲ್ತಡ್ಕ,
ಯೂಸುಫ್ ಗೌಸಿಯಾ ಸಾಜಾ, ಸಿರಾಜ್ ಮಣಿಲ, ಕಮಾಲ್ ಪುಣಚ, ಇಸ್ಮಾಯಿಲ್ ನಾಟೆಕಲ್ಲು , ಮಹಮ್ಮದ್ ಆಲಿ ಸಿಟಿ ಬಝಾರ್, ಹನೀಫ್ ಸಿಟಿ ಮೊಬೈಲ್, ಮೊದಲಾದವರು ಉಪಸ್ಥಿತರಿದ್ದರು
ಬ್ಲಿಸ್ ಲಂಡನ್ ಪ್ರೀ ಸ್ಕೂಲ್ ಸಂಸ್ಥೆಯ ಶಿಕ್ಷಕಿಯರು ವಿವಿಧ ಕಾರ್ಯಕ್ರಮ ನಿರ್ವಹಿಸಿ ಸಹಕರಿಸಿದರು