
ಬಂಟ್ವಾಳ:- ಪೋಲಿಸ್ ಉಪನೀರಿಕ್ಷಕರುಗಳ ವರ್ಗಾವಣೆ ಆದೇಶವನ್ನು ಸರಕಾರ ಹೊರಡಿಸಿದ್ದು ಬಂಟ್ವಾಳ ನಗರ ಪೋಲಿಸ್ ಠಾಣೆಯ ಎಸ್ ಐ ಆಗಿದ್ದ ರಾಮಕೃಷ್ಣ ಅವರನ್ನು ವಿಟ್ಲ ಪೋಲಿಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ



ಬಂಟ್ವಾಳ ನಗರ ಪೋಲಿಸ್ ಠಾಣೆಗೆ ಸ್ಥಳ ನೀರಿಕ್ಷಣೆಯಲ್ಲಿದ್ದ ಸಂದೀಪ್ ಶೆಟ್ಟಿ ಹಾಗೂ ಪೂಂಜಾಲಕಟ್ಟೆ ಎಸ್ ಐ ಆಗಿದ್ದ ನಂದಕುಮಾರ್ ಅವರು ಪೋಲಿಸ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆ ಆದ ಹಿನ್ನಲೆಯಲ್ಲಿ ಖಾಲಿಯಾಗಿದ್ದ ಪೂಂಜಾಲಕಟ್ಟೆ ಠಾಣೆಗೆ ಚಿಕ್ಕಮಗಳೂರಿನಿಂದ ರಾಜೇಶ್ ಕೆವಿ, ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ
ಸಂದೀಪ್ ಶೆಟ್ಟಿಯವರು ಈ ಹಿಂದೆ ವಿಟ್ಲ ಹಾಗೂ ರಾಜೇಶ್ ಕೆವಿ ಅವರು ಬಂಟ್ವಾಳ ಟ್ರಾಫಿಕ್ ಹಾಗೂ ಉಪ್ಪಿನಂಗಡಿಯಲ್ಲಿ ಕರ್ತವ್ಯ ಮಾಡಿ ಜಿಲ್ಲೆಯ ಆನುಭವಿ ಅಧಿಕಾರಿಗಳಾಗಿದ್ದಾರೆ