
ಮಂಗಳೂರು:- ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಟವಾಗಿ ಕಟ್ಟುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ರೆಡ್ಡಿಯವರು ಉತ್ಸುಕರಾಗಿದ್ದು ಇದರ ಭಾಗವಾಗಿ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷಕ್ಕೆ ಎರಡು ನೂತನ ಅಧ್ಯಕ್ಷರುಗಳಾಗಿ ಶ್ರೀಮತಿ ಉಷಾ ಅಂಚನ್ ಹಾಗೂ ಕುಮಾರಿ ಅಪ್ಪಿ ಅವರನ್ನು ನೇಮಕ ಮಾಡಲಾಗಿದೆ.



ಮಂಗಳೂರು ರೂರಲ್ ಅಧ್ಯಕ್ಷರಾಗಿ ಶ್ರೀಮತಿ ಉಷಾ ಅಂಚನ್ ಹಾಗೂ ಮಂಗಳೂರು ಅರ್ಬನ್ ಅಧ್ಯಕ್ಷರಾಗಿ ಕುಮಾರಿ ಅಪ್ಪಿ ಅವರು ಇನ್ನೂ ಮುಂದೆ ಕಾರ್ಯ ನಿರ್ವಹಿಸಲಿದ್ದಾರೆ
ರೂರಲ್ ನೂತನ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್ ಅವರು ಈ ಹಿಂದೆ ತಾಲೂಕು ಪಂಚಾಯತ್ ಸದಸ್ಯರಾಗಿ ಹಲವಾರು ಮಹತ್ವದ ಸ್ಥಾನ ಮಾನಗಳನ್ನು ಕಾಂಗ್ರೆಸ್ ಪಕ್ಷದಲ್ಲಿ ಪಡೆಯುವ ಮೂಲಕ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದಾರೆ
ಇವರು ಬಿಲ್ಲವ ಸಮುದಾಯದ ನಾಯಕಿಯಾಗಿ ಗುರುತಿಸಿದ್ದಾರೆ.
ಅರ್ಬನ್ ನೂತನ ಅಧ್ಯಕ್ಷರಾದ ಕುಮಾರಿ ಅಪ್ಪಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಹಂತ ಹಂತವಾಗಿ ಕೆಲಸ ಮಾಡಿದವರು ಜೊತೆಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ 5 ಭಾರಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ ಇವರು ಎಸ್ಸಿ ಸಮುದಾಯದ ಪ್ರಬಲ ನಾಯಕಿಯಾಗಿ ಗುರುತಿಸಿರುತ್ತಾರೆ..
ಇವರು ಕಾಂಗ್ರೆಸ್ ಪಕ್ಷದ ಹೋರಾಟಗಳಲ್ಲಿ ಮುಂಚೂಣಿಯಾಗಿ ಹಲವಾರು ವರ್ಷಗಳಿಂದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ