
ಮಂಗಳೂರು:- ಕೆಂಪುಕಲ್ಲು ಗಣಿಗಾರಿಕೆಯ ಗೊಂದಲ ನಿವಾರಣೆಗಾಗಿ ಮರಳು ವಿತರಣೆ ಮಾದರಿಯಲ್ಲಿರುವ ಸ್ಯಾಂಡ್ ಬಜಾರ್ ಆ್ಯಪ್ ನಂತೆ ಕೆಂಪು ಕಲ್ಲು ಖರೀದಿಗೂ ಪ್ರತ್ಯೇಕ ಆ್ಯಪ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ರಾಜ್ಯ ವಿಧಾನ ಸಭೆಯ ಸ್ಪೀಕರ್ ಯುಟಿ ಖಾದರ್ ತಿಳಿಸಿದ್ದಾರೆ



ಈ ಹಿಂದೆ ಜಾರಿಗೆ ತರಲಾಗಿದ್ದ ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ಸಿಗುತ್ತಿತ್ತು ಅದೇ ಮಾದರಿಯಲ್ಲಿ ಕೆಂಪು ಕಲ್ಲು ಕೂಡ ಜನಸಾಮಾನ್ಯರಿಗೆ ಸಿಗಬೇಕು ಈ ನಿಟ್ಟಿನಲ್ಲಿ ಕೆಂಪು ಕಲ್ಲು ಖರೀದಿಗೂ ಪ್ರತ್ಯೇಕ ಆ್ಯಪ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಸರಕಾರಿ ದರದಲ್ಲಿ ಕೆಂಪು ಕಲ್ಲನ್ನು ಅಗತ್ಯ ಇರುವವರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯು ನೂತನ ಆ್ಯಪ್ ಮೂಲಕ ಆಗಲಿದೆ ಜಿಲ್ಲೆಯಲ್ಲಿ ಕೆಂಪು ಕಲ್ಲು ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರೊಂದಿಗೆ 2 ನೇ ಹಂತದ ಸಭೆ ನಡೆಸಲಾಗಿದೆ ಎಂದರು