
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ಹಾಗೂ TOP & TOP ಚಾರಿಟೇಬಲ್ ಟ್ರಸ್ಟ್ ರಿ ಕುಡ್ತಮುಗೇರು ಇದರ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ*



ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡ ರಾಷ್ಟ್ರ ನಾಯಕರಾದ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ಅಬ್ದುಲ್ ಕಲಾಂ ಆಜಾದ್, ಭಗತ್ ಸಿಂಗ್, ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್, ಮಾಜಿ ರಾಷ್ಟ್ರಪತಿಗಳಾದ ಡಾ. ಎಪಿಜೆ ಅಬ್ದುಲ್ ಕಲಾಂ, ಮೊದಲಾದ ನಾಯಕರಲ್ಲಿ ಯಾವುದಾದರೂ ಒಬ್ಬ ನಾಯಕರ ಭಾವಚಿತ್ರವನ್ನು, A4 ಶೀಟ್ ಬಿಳಿ ಹಾಳೆಯಲ್ಲಿ ವಿದ್ಯಾರ್ಥಿ, ಸ್ವಕೈಯಿಂದ ರಚಿಸಿ, ಕೆಳಗೆ ನೀಡಲಾಗುವ ವಿಳಾಸಕ್ಕೆ ಪೋಸ್ಟ್ ಮಾಡಬೇಕು. ಅತ್ಯುತ್ತಮ ಚಿತ್ರಕ್ಕೆ ಪ್ರಥಮ ದ್ವಿತೀಯ ತೃತೀಯ, ನಗದು ಹಾಗೂ ಶಾಶ್ವತ ಫಲಕವನ್ನು ನೀಡಲಾಗುವುದು. ಹಾಗೂ 10 ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಆಗಸ್ಟ್ 10 ರ ಒಳಗೆ ನೀವು ಬಿಡಿಸಿದ ಚಿತ್ರ ಕೆಳಗೆ ಕಾಣಿಸುವ ವಿಳಾಸಕ್ಕೆ ತಲುಪಬೇಕು. ವಿದ್ಯಾರ್ಥಿಯು ಕಲರ್ ಅಥವಾ ಪೆನ್ಸಿಲ್ ಶೇಡಿಂಗ್ ನಲ್ಲಿ ಯಾವುದೇ ಮಾಧ್ಯಮದ ಮೂಲಕ ಚಿತ್ರ ಬಿಡಿಸಬಹುದು. ಒಬ್ಬ ವಿದ್ಯಾರ್ಥಿಗೆ ಒಂದು ಚಿತ್ರ ಬಿಡಿಸಲು ಮಾತ್ರವೇ ಅವಕಾಶ. ಚಿತ್ರ ಬಿಡಿಸಿದ ಹಾಳೆಯ ಕೆಳಭಾಗದಲ್ಲಿ, ಶಾಲಾ ವಿದ್ಯಾರ್ಥಿಯ ಹೆಸರು, ಶಾಲೆಯ ಹೆಸರು ತರಗತಿ,ಗ್ರಾಮ, ತಾಲೂಕು,ಜಿಲ್ಲೆ.ದೂರವಾಣಿ ಸಂಖ್ಯೆ, ನಮೂದಿಸಬೇಕು ವಿದ್ಯಾರ್ಥಿ ಎಂದು ಖಚಿತಪಡಿಸಲು ಮುಖ್ಯೋಪಾಧ್ಯಾಯರ ಸೀಲ್ ಹಾಗೂ ಸಹಿ ಮೂಲಕ ದೃಢಪಡಿಸುವುದು. ಆಗಸ್ಟ್ 15 ಸ್ವಾತಂತ್ರ್ಯೋತ್ಸವದ ದಿನದಂದು ಫಲಿತಾಂಶ ಪ್ರಕಟಿಸಲಾಗುವುದು. ಕರ್ನಾಟಕ ರಾಜ್ಯದ ಒಂದರಿಂದ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿರುತ್ತದೆ. ವಿಜೇತಗೊಂಡ ವಿದ್ಯಾರ್ಥಿಗೆ ದೂರವಾಣಿ ಮುಖಾಂತರವೂ ವಿಷಯ ತಲುಪಿಸಲಾಗುತ್ತದೆ. ತೀರ್ಪುಗಾರರ ತಿರ್ಮಾನ ಅಂತಿಮವಾಗಿರುತ್ತದೆ. ಕಲಾ ಕೃತಿಗಳ ಹಕ್ಕು ಸಂಘಟಕರದ್ದಾಗಿರುತ್ತದೆ. ಚಿತ್ರ ಕಳುಹಿಸಿ ಕೊಡಬೇಕಾದ ವಿಳಾಸ. TOP &TOP ಚಾರಿಟೇಬಲ್ ಟ್ರಸ್ಟ್(ರಿ) ಕುಡ್ತಮುಗೇರು.. ಕೊಳ್ನಾಡು ಗ್ರಾಮ. ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 574323 ಕ್ಕೆ ಕಳುಹಿಸಿ ಕೊಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.