ಮಂಗಳೂರು:- ಸೆ 17 ರ ಸಭೆಯಲ್ಲಿ ತೀರ್ಮಾನಿಸಿದಂತೆ ಮುಸ್ಲಿಂ ಸಮಾಜದವರು ಧರ್ಮ ಇಸ್ಲಾಂ ಜಾತಿ ಮುಸ್ಲಿಂ ಉಪಜಾತಿ ಬ್ಯಾರಿ ಎಂದು ನಮೋದಿಸಬೇಕೆಂದು ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಕರೆ ನೀಡಿದ್ದಾರೆ.
ಸೆ.17 ರಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ಕೇಂದ್ರ ಜುಮಾ ಮಸೀದಿ ಝೀನತ್ ಭಕ್ಷ್ ಮಂಗಳೂರಿನ ಅಧ್ಯಕ್ಷರಾದ ಡಾ.ಯನಪೋಯ್ ಅಬ್ದುಲ್ಲಾ ಕುಂಙಿ ಹಾಜಿ ಇವರ ನೇತ್ರತ್ವದಲ್ಲಿ ಜಿಲ್ಲಾ ಮಸೀದಿಗಳ ಪಧಾದಿಕಾರಿಗಳು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಮುಸ್ಲಿಂ ಮುಂದಾಳುಗಳ ಸಭೆ ನಡೆಸಲಾಯಿತು.
ಇದು ಧರ್ಮಾಧಾರಿತ ಜಾತಿ ಗಣತಿ ಅಲ್ಲ ವೃತ್ತಿ ಆಧಾರಿತ ಜಾತಿ ಗಣತಿ ಎಂದು ಈ ಸಭೆಯಲ್ಲಿ ನಿರ್ಧರಿಸಲಾಗಿದೆ ತೀರ್ಮಾನದ ಪ್ರಕಾರ ಮುಸ್ಲಿಂ ಸಮಾಜದವರು ಧರ್ಮ ಇಸ್ಲಾಂ ಜಾತಿ ಮುಸ್ಲಿಂ ಉಪಜಾತಿ ಬ್ಯಾರಿ ಎಂದು ನಮೂದಿಸಬೇಕೆಂದು ತೀರ್ಮಾನಿಸಲಾಗಿದೆ ಮುಸ್ಲಿಂ ಸಮಾಜದ ಸದಸ್ಯರಿಗೆ ತಮ್ಮ ಮನೆ ಸಂಬಂಧಿತ ಜಾತಿ ವಿವರಗಳನ್ನು ಈ ಪ್ರಕಾರ ಭರ್ತಿ ಮಾಡಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಯ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಅವರು ತಿಳಿಸಿದ್ದಾರೆ



