Subscribe to Updates
Get the latest creative news from FooBar about art, design and business.
Author: PrasakthaNews
ಸರ್ಕಾರಿ ನೌಕರರಿಗೂ ಅಂಕುಶ ಬೆಂಗಳೂರು:- ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳನ್ನು ನಿರ್ಬಂಧಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆಯವರು ಬರೆದಿದ್ದ ಪತ್ರ ಸಾಕಷ್ಟು ವಾಗ್ವದಗಳಿಗೆ ಎಡೆಮಾಡಿಕೊಟ್ಟಿರುವ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆಯವರು ಸರ್ಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ನಿಷೇಧ ಜಾರಿಗೊಳಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ಯಾವುದೇ ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷದ ಅಥಾವ ರಾಜಕಾರಣದಲ್ಲಿ ಭಾಗವಹಿಸುವಂತಹ ಯಾವುದೇ ಸಂಘ ಸಂಸ್ಥೆಯ ಸದಸ್ಯರಾಗುವಂತದ್ದಲ್ಲ ಅಥಾವ ಅವುಗಳೊಂದಿಗೆ ಅನ್ಯತಾ ಸಂಬಂಧ ಹೊಂದಿರತಕ್ಕದಲ್ಲ ಅಥವಾ ಯಾವುದೇ ರಾಜಕೀಯ ಚಳುವಳಿ ಚಟುವಟಿಕೆಗಳಲ್ಲಿ ಭಾಗವಹಿಸತ್ಕದಲ್ಲ ಅದರ ಸಹಾಯರ್ಥ ವಂತಿಗೆ ನೀಡತಕ್ಕದ್ದಲ್ಲ ಅಥವಾ ಅದಕ್ಕೆ ಯಾವುದೇ ರೀತಿಯ ನೆರವು ನೀಡತಕ್ಕದ್ದಲ್ಲ ಎಂದು ಕರ್ನಾಟಕ ನಾಗರಿಕ ಸೇವಾ ನಿಯಮಗಳಲ್ಲಿ ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ ಎಂದು ಪತ್ರದಲ್ಲಿ ಪ್ರಿಯಾಂಕ್ ಖರ್ಗೆ ಉಲ್ಲೇಖಿಸಿದ್ದಾರೆ. ನಾಗರೀಕ ಸೇವಾ ನಿಯಮಗಳಲ್ಲಿ ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ…
ಸಿಎಂ ಭೇಟಿ ಹಿನ್ನಲೆಯಲ್ಲಿ ಸಿದ್ದತಾ ಪರಿಶೀಲನೆ ಪುತ್ತೂರು:- ಅ.20 ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮದ ಸಿದ್ಧತೆಯನ್ನು ಪರಿಶೀಲಿಸುವ ನಿಟ್ಟಿನಲ್ಲಿ ಜಿಲ್ಲಾ ಎಸ್ ಪಿ ಅರುಣ್ ಕುಮಾರ್, ಡಿವೈಎಸ್ಪಿ ಅರುಣ್ ನಾಗೇಗೌಡ ಪುತ್ತೂರು ಸರ್ಕಲ್ ಇನ್ಸ್‌ಪೆಕ್ಟರ್ ಜಾನ್ಸನ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸುವ ಹಿನ್ನಲೆಯಲ್ಲಿ ಪೋಲಿಸ್ ಇಲಾಖೆಯಿಂದ ಸಿದ್ದತಾ ಪರಿಶೀಲನೆ ನಡೆಯಿತು.
ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ನೀರಿಕ್ಷೆ ಪುತ್ತೂರು:-ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಜನಸೇವಾ ಕೇಂದ್ರ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಅಶೋಕ ಜನ-ಮನ ಕಾರ್ಯಕ್ರಮ ಅ.20 ರಂದು ಭಾನುವಾರ ದಿವಸ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುತ್ತಿನ ನಗರಿ ಪುತ್ತೂರಿಗೆ ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಹಲವು ಭಾಗ್ಯಗಳ ಭಾಗ್ಯದಾತ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ವಿಶೇಷವಾಗಿ ಶಾಸಕ ಅಶೋಕ್ ಕುಮಾರ್ ರೈ ಅವರು ಶಾಸಕರಾದ ನಂತರ ಮೊದಲ ಭಾರಿಗೆ ಸಿಎಂ ಪುತ್ತೂರಿಗೆ ಭೇಟಿ ನೀಡುತ್ತಿದ್ದಾರೆ.
ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇದೆಯೇ ಎಂಬ ಅನುಮಾನ ಮೂಡುತ್ತಿದೆ ಬೆಂಗಳೂರು: ಅ.16 ಸರಕಾರಿ ಜಾಗಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವುದನ್ನು ವಿರೋಧಿಸಿ ಅವರಿಗೆ ಸಾಮಾಜಿಕ ಜಾಲತಾಣಗಳ ಹಾಗೂ ದೂರವಾಣಿ ಕರೆ ಮಾಡಿ ಬೆದರಿಕೆಗಳನ್ನು ಹಾಕುತ್ತಿರುವುದು ನೋಡಿದರೆ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹೇಳಿದ್ದಾರೆ. ಗುರುವಾರ ಮಾಧ್ಯಮದ ಜೊತೆಗೆ ಮಾತನಾಡಿದ ಅವರು ಯಾವುದೇ ವಿಷಯವಿರಲಿ ಟೀಕೆಗಳು ರಚನಾತ್ಮಕವಾಗಿ ಇರಬೇಕು ರಾಜ್ಯದ ಒಬ್ಬ ಸಚಿವ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರೆ ಅವರಿಗೆ ಬೆದರಿಕೆ ಹಾಕುವುದು ಎಷ್ಟರ ಮಟ್ಟಿಗೆ ಸರಿ ಆರೆಸ್ಸೆಸ್ ಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಈಗ ಹೊಸದಾಗಿ ಚರ್ಚೆಗಳು ನಡೆಯುತ್ತಿಲ್ಲ ಹಲವಾರು ವರ್ಷಗಳಿಂದ ಈ ಕುರಿತು ಚರ್ಚೆಗಳು ನಡೆದಿವೆ ಎಂದು ಹೇಳಿದರು. ಪ್ರಿಯಾಂಕ್ ಖರ್ಗೆ ಒಬ್ಬಂಟಿಯಲ್ಲ ಅವರ ಜೊತೆ ಕೋಟ್ಯಾಂತರ ಜನ ಇದ್ದಾರೆ ಹಿಂದುಳಿದ ದಲಿತರು…
ಕಾಂಗ್ರೆಸ್ ಪಕ್ಷದ ಸೈದ್ದಾಂತಿಕ ನಿಲುವು ಜಾತ್ಯತೀತತೆ ಅದಕ್ಕೆ ಜನ ಬೆಂಬಲ ಮಂಗಳೂರು:- ಕರ್ನಾಟಕ ರಾಜ್ಯದ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್ ಚಟುವಟಿಕೆಗಳ ಕುರಿತು ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ್ ರೈ ಅವರು ಹೇಳಿದ್ದಾರೆ. ಅವರು ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದೇಶದ ಜಾತ್ಯತೀತ ಮೌಲ್ಯಗಳನ್ನು ಕಾಪಾಡಲು ಹಾಗೂ ಸಾಮಾಜಿಕ ಸಾಮರಸ್ಯವನ್ನು ಬಲಪಡಿಸಲು ಸಾರ್ವಜನಿಕ ಸ್ಥಳಗಳು ಮತ್ತು ಸರಕಾರಿ ಶಾಲೆಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಶಾಖೆಗಳ ಮೂಲಕ ಸಣ್ಣ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನ ನಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಸಮಾಜದ ಶಾಂತಿ ಹಾಗೂ ಸಹಬಾಳ್ವೆಗೆ ಅಪಾಯಕರಾರಿಯಾಗಿದೆ ಎಂದರು ದಕ್ಷಿಣ ಕನ್ನಡ ಜಿಲ್ಲೆಯ ಮತೀಯ ಸಾಮರಸ್ಯಕ್ಕೆ ಹಾನಿ ಆಗದಂತೆ ಎಲ್ಲರೂ ಜಾಗೃತರಾಗಬೇಕು ಆರ್ ಎಸ್ ಎಸ್ ಸಂಘಟನೆಯಿಂದ ಮತ ಭೇದ ಹುಟ್ಟಿಸುವ ಕಾರ್ಯಕ್ರಮಗಳು ನಡೆಯುತ್ತಿರುವುದಾಗಿ ಆರೋಪಿಸಿ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ನಿಲುವು ಜಾತ್ಯಾತೀತವಾದದ್ದು ಅದಕ್ಕೆ ಜನರು ನಮಗೆ ಬೆಂಬಲಿಸುತ್ತಿದ್ದಾರೆ ಆರ್…
ಅಪ್ರಾಪ್ತರಿಗೆ ವಾಹನ ನೀಡುವ ಮಾಲಕರಿಗೆ ತಕ್ಕ ಪಾಠ ಕಲಿಸಿದ ಪೋಲಿಸ್ ಇಲಾಖೆ ವಿಟ್ಲ:- ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಅಪಘಾತ ಮಾಡಿರುವ ಬಗ್ಗೆ ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಅದರ ಮಾಲಕನಿಗೆ 32000 ರೂ ದಂಡ ವಿಧಿಸಲಾಗಿದೆ. ಸೆ.ತಿಂಗಳಿನಲ್ಲಿ ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪ್ರಾಪ್ತ ಬಾಲಕನು ಚಲಾಯಿಸುತ್ತಿದ್ದ ಇನ್ನೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಅಪಘಾತವಾಗಿತ್ತು ಈ ಬಗ್ಗೆ ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರ 74/2025 ಕಲಂ U/s :281,125(a) BNS and U /s :4(1) 181,146,196,199,A(1) 190(2)IMV Act and U/s 115CMV Rule ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಪ್ರಾಯದ ಬಾಲಕ KA 19-5-966ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಚಲಾಯಿಸಿ ಅಫಘಾತಪಡಿಸಿದ ಬಗ್ಗೆ ಮಾನ್ಯ ಎಸಿ ಜೆ .ಮತ್ತು ಜೆ.ಎಂ ಎಪ್ ಸಿ ನ್ಯಾಯಾಲಯ ಬಂಟ್ವಾಳದವರ ಸಿಸಿ…
ಡಯಾಲಿಸ್ ಕೇಂದ್ರಕ್ಕೆ ಮನವಿ ವಿಟ್ಲ:- ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ, ವ್ಯೆದ್ಯರ ಕೊರತೆ ಇದ್ದು ಅದನ್ನು ತಕ್ಷಣ ಪರಿಹರಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ವಿಟ್ಲ ಸಮುದಾಯ ಕೇಂದ್ರದಲ್ಲಿ ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಇದೆ ಅಲ್ಲಿ ವ್ಯೆದ್ಯರ ಕೊರತೆಯಿಂದ ಜನರಿಗೆ ಸಂಕಷ್ಟ ಉಂಟಾಗಿದೆ ವಿಟ್ಲದಲ್ಲಿ ಬೇರೆ ಯಾವುದೇ ಆಸ್ಪತ್ರೆ ಇಲ್ಲದ ಕಾರಣ ತುರ್ತು ಸಂದರ್ಭದಲ್ಲಿ ತೀವ್ರ ತೊಂದರೆಯನ್ನು ಅನುಭವಿಸಬೇಕಾಗಿ ಬಂದಿದೆ ಜೊತೆಗೆ ಸಿಬಂದಿಗಳ ಕೊರತೆಯೂ ಇದೆ ತಕ್ಷಣ ಈ ಬಗ್ಗೆ ಮುತುವರ್ಜಿ ವಹಿಸಿ ಪರಿಹರಿಸುವಂತೆ ಮನವಿ ಮಾಡಿದರು. ವಿಟ್ಲ ಸಮುದಾಯ ಕೇಂದ್ರ ಸುಸಜ್ಜಿತವಾದ ಕಟ್ಟಡವನ್ನು ಹೊಂದಿದ್ದು ಸೌಲಭ್ಯಗಳ ಕೊರತೆ ಮಾತ್ರ ಇದೆ ಈ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಪ್ರಾರಂಭ ಮಾಡುವಂತೆಯೂ ಸಚಿವರಿಗೆ ಶಾಸಕರು ಮನವಿ ಮಾಡಿದರು ಶಾಸಕರ ಮನವಿಗೆ ಸಚಿವರು ಸ್ಪಂದಿಸಿದ್ದು ಶಿಘ್ರ ಕ್ರಮಕ್ಕೆ…
ರಾತ್ರಿಯಿಡಿ ವಿದ್ಯುತ್ ಸಂಚಾರದಲ್ಲಿ ಅಡಚಣೆ ರಾಮಕುಂಜ :- ಕಳೆದ ರಾತ್ರಿ ಬೀಸಿದ ಭಾರಿ ಗಾಳಿ ಹಾಗೂ ಮಳೆಗೆ ರಾಮಕುಂಜ ಗ್ರಾಮದ ಬಾಜಳ್ಳಿ ಬಾಂತೊಟ್ಟು ಬಾರಿಂಜ ಪರಿಸರದಲ್ಲಿ ನೂರಾರು ಅಡಿಕೆ ಮರ ತೆಂಗಿನಮರ ಬಾಳೆಗೀಡಗಳು ಧರೆಗುರುಳಿವೆ. ಕೆಲವು ಕಡೆ ವಿದ್ಯುತ್ ಕಂಬ ತಂತಿಯ ಮೇಲೂ ಮರಬಿದ್ದ ಪರಿಣಾಮ ವಿದ್ಯುತ್ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಅ.12 ರಂದು ಸಂಜೆಯಿಂದಲೇ ಈ ಪರಿಸರದಲ್ಲಿ ಭಾರೀ ಮಳೆಯಾಗಿದ್ದು ಜೊತೆಗೆ ಬಿರುಗಾಳಿಯೂ ಬಂದ ಪರಿಣಾಮ ನೂರಾರು ಅಡಿಕೆ ಮರಗಳು ಧರೆಗುರುಳಿವೆ ಬಾಂತೊಟ್ಟು ನಿವಾಸಿಗಳಾದ ಸೇಸಪ್ಪ ರೈ , ರಾಘವ, ಬಾಜಳ್ಳಿ ನಿವಾಸಿಗಳಾದ ಶ್ರೀಕಾಂತ ಕಲ್ಲೂರಾಯ ಹೊನ್ನಪ್ಪ ಗೌಡ ಪ್ರದೀಪ್ ಕುಲಾಲ್ ದಾಮೋದರ ಕುಲಾಲ್, ಬಾರಿಂಜ ನಿವಾಸಿಗಳಾದ ಗಣೇಶ ಗೌಡ , ಕಮಲಾಕ್ಷ ಗೌಡ, ರುಕ್ಮಯ ಗೌಡ ,ಈಶ್ವರ ಗೌಡ, ಹರೀಶ್ ಗೌಡರ ತೋಟದಲ್ಲಿ ಅಡಿಕೆ ಮರಗಳು ದರೆಗುರುಳಿವೆ. ಬಾಜಳ್ಳ ನಿವಾಸಿ ಹೊನ್ನಪ್ಪ ಗೌಡ ಅವರ 5 ತೆಂಗಿನಕಾಯಿ ಮರಗಳು ಮುರಿದು ಬಿದ್ದಿವೆ ಸಂಪ್ಯಾಡಿ ನಿವಾಸಿ ಯತೀಶ್…
ಹಾಸನಾಂಬೆ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಹಾಸನ:- ಸಂಪುಟ ಸಹೋದ್ಯೋಗಿಗಳಿಗೆ ನಾನು ಮೊನ್ನೆ ಆಯೋಜಿಸಿದ್ದ ಡಿನ್ನರ್ ಪಾರ್ಟಿಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ ಆಗಾಗ ಹೀಗೆ ಪಾರ್ಟಿ ಕೊಡುತ್ತಿರುತ್ತೇನೆ. ಆಗಾಗ ಸೇರುತ್ತೀವಿ ಊಟ ಮಾಡುತ್ತೀವಿ ಗೆಟ್ ಟುಗೆದರ್ ಮಾಡುತ್ತಿರುತ್ತೇವೆ ಪಕ್ಷದ ವಿಚಾರವಾಗಿ ಚರ್ಚೆ ಮಾಡುತ್ತಿರುತ್ತೇವೆ ಅದು ಬಿಟ್ಟರೆ ಔತಣಕೂಟದಲ್ಲಿ ನಾಯಕತ್ವ ಬದಲಾವಣೆಯಾಗಲಿ ಬೇರೆ ರಾಜಕೀಯ ವಿಚಾರಗಳು ಚರ್ಚೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇಂದು ಹಾಸಾನಂಬೆ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಹೈಕಮಾಂಡ್ ಈಗ ಬಿಹಾರ ಚುನಾವಣೆ ಮೇಲೆ ಹರಿಸಿದ್ದಾರೆ ಆಮೇಲೆ ಹೈಕಮಾಂಡ್ ಏನು ಹೇಳುತ್ತಾರೆ ಕಾದು ನೋಡೋಣ ಎಂದರು ನವೆಂಬರ್ ನಲ್ಲಿ ರಾಜ್ಯ ಸರ್ಕಾರದಲ್ಲಿ ಕ್ರಾಂತಿಗುತ್ತದೆ ಎಂಬ ಚರ್ಚೆ ನಡೆಯುತ್ತಿದೆಯಲ್ಲವೇ ಎಂದು ಸುದ್ದಿಗಾರರು ಕೇಳಿದಾಗ ಯಾವ ಕ್ರಾಂತಿಯೂ ಇಲ್ಲ ಭ್ರಾಂತಿಯೂ ಇಲ್ಲ ಯಾವ ಶಾಸಕರು ಇದರ ಬಗ್ಗೆ ಅಪಸ್ವರ ಕೂಗು ಎತ್ತುತ್ತಿಲ್ಲ ಎಲ್ಲ ನೀವೇ ಊಹಿಸಿಕೊಳ್ಳುತ್ತಿದ್ದರಷ್ಟೇ ಎಂದರು ಆರೆಸ್ಸೆಸ್ ಕಾರ್ಯಕ್ರಮಕ್ಕೆ…
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಯವರು ವರ್ಗಾವಣೆ- ಪುತ್ತೂರು:- ಪುಣಚ ಗ್ರಾಮ ಪಂಚಾಯತ್ ನ ನೂತನ ಪ್ರಭಾವ ಅಭಿವೃದ್ಧಿ ಅಧಿಕಾರಿಯಾಗಿ ಸೃಜನ್ ಎ.ಜಿಯವರು ಅಧಿಕಾರವಹಿಸಿಕೊಂಡಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ರವಿಯವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಸೃಜನ್ ಎ.ಜಿಯವರು ಅಧಿಕಾರ ವಹಿಸಿಕೊಂಡಿದ್ದು ಪ್ರಸ್ತುತ ಇವರು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ದೊಡ್ಡಡ್ಕ ನಿವಾಸಿಯಾಗಿದ್ದಾರೆ ಸೃಜನ್ ರವರು ಈ ಹಿಂದೆ ಸುಳ್ಯದ ಆಲೆಟ್ಟಿ ಗ್ರಾಮ ಪಂಚಾಯತಿನಲ್ಲಿ ಗ್ರೇಡ್-1 ಕಾರ್ಯದರ್ಶಿಯಾಗಿ ಪ್ರಭಾರ ಪಿಡಿಓ ಆಗಿ ಕರ್ತವ್ಯ ನಿರ್ವಹಿಸಿದ್ದರು ಅಲ್ಲಿಂದ ವರ್ಗಾವಣೆಗೊಂಡು ಪುಣಚ ಗ್ರಾಮ ಪಂಚಾಯತಿಗೆ ಬಂದಿದ್ದು ಹೆಚ್ಚುವರಿಯಾಗಿ ಕರೋಪಾಡಿ ಗ್ರಾಮ ಪಂಚಾಯತ್ ನ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಲಿದ್ದಾರೆ


