Author: PrasakthaNews

Kannada news website from coastal Karnataka

ಅಶೋಕ ಜನ-ಮನ ಕಾರ್ಯಕ್ರಮದಲ್ಲಿ ನಿರೀಕ್ಷೆಗಿಂತ ಮೀರಿ ಜನ ಆಗಮಿಸಿದ ಹಿನ್ನಲೆಯಲ್ಲಿ ಅಸ್ವಸ್ಥ- ಪುತ್ತೂರು:- ಅ.20 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಅಶೋಕ ಜನಮನ 2025 ಈ ಕಾರ್ಯಕ್ರಮಕ್ಕೆ ಬಂದು ಸಭಾಂಗಣದಲ್ಲಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರ ಬಿಲ್ ನ್ನು ಶಾಸಕ ಅಶೋಕ್ ರೈ ಅವರೇ ಭರಿಸಿದ್ದಾರೆ.ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಇಬ್ಬರು ವ್ಯಕ್ತಿಗಳ ಆಸ್ಪತ್ರೆ ಚಿಕಿತ್ಸಾ ಖರ್ಚು ವೆಚ್ಚವನ್ನು ಭರಿಸಲಾಗಿದೆ. ಆಶೋಕ ಜನಮನ ಕಾರ್ಯಕ್ರಮದಲ್ಲಿ ನಿರೀಕ್ಷೆಗಿಂತ ಮೀರಿ ಜನ ಆಗಮಿಸಿದ ‌ಕಾರಣ ಜನ ಸಂದಣಿಯ ನಡುವೆ ಸಿಲುಕಿ ಕೆಲವು ಮಂದಿ ಅಸ್ವಸ್ಥರಾಗಿದ್ದರು ಈ ಪೈಕಿ ಕೆಲವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಅಸ್ವಸ್ಥರಾದವರೆಲ್ಲರೂ ಗುಣಮುಖರಾಗಿ ಮನೆ ಸೇರಿದ್ದಾರೆ

Read More

ಮನೆ ಸಂಪೂರ್ಣ ಹಾನಿ ಪುತ್ತೂರು:- ನಗರಸಭೆಯ ವ್ಯಾಪ್ತಿಯ ಬೆದ್ರಾಳ ಸಮೀಪದ ನೆಲ್ಲಿಗೇರಿ ಎಂಬಲ್ಲಿ ಸಿಡಿಲು ಬಡಿದು ಮನೆಯಲ್ಲಿದ್ದ ಮಗು ಸಹಿತ ನಾಲ್ವರು ಅಸ್ವಸ್ಥಗೊಂಡ ಮತ್ತು ಮನೆ ಸಂಪೂರ್ಣ ಹಾನಿಯಾದ ಘಟನೆ ಅ.19 ರಂದು ಸಂಜೆ ನಡೆದಿದೆ. ಬೆದ್ರಾಳ ಸಮೀಪದ ನೆಲ್ಲಿಗೇರಿ ದಯಾನಂದ ಕುಲಾಲ್ ಅವರ ಹಂಚಿನ ಮನೆಗೆ ಸಂಜೆ ಸಿಡಿಲು ಬಡಿದಿದೆ. ಸಿಡಿಲಿನ ಆರ್ಭಟಕ್ಕೆ ಮನೆಯ ಗೋಡೆ ಬಿರುಕು ಬಿಟ್ಟು ಕಲ್ಲುಗಳು ಜಾರಿವೆ. ಹಂಚುಗಳು ಶೀಟ್ ಗಳು ತುಂಡಾಗಿ ಬಿದ್ದಿವೆ. ನೀರಿನ ಬ್ಯಾರೆಲ್ ಪೂರ್ಣ ಸುಟ್ಟು ಹೋಗಿದೆ ಮನೆಯೊಳಗಿದ್ದ ದಯಾನಂದ ಅವರ 1 ವರ್ಷದ ಮಗು ತಾಯಿ ಲಕ್ಷ್ಮೀ ಪತ್ನಿ ರಕ್ಷಿತಾ ಅವರು ಅಸ್ವಸ್ಥಗೊಂಡಿದ್ದಾರೆ ಇವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

Read More

ಅಸ್ವಸ್ಥರಾದವರು ಗುಣಮುಖ ಪುತ್ತೂರು:- ಸೋಮವಾರದಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಅಶೋಕ ಜನಮನ ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಜನಸ್ತೋಮದ ನಡುವೆ ಸಿಲುಕಿ ಕೆಲವು ಮಂದಿ ಅಸ್ವಸ್ಥಗೊಂಡಿದ್ದು ಈ ಘಟನೆಗೆ ನಾನು ಸಾವರ್ಜನಿಕರಲ್ಲಿ ಕ್ಷೆಮೆಯಾಚಿಸುವುದಾಗಿ ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರಿದ ಕಾರಣ ಮತ್ತು ಮಧ್ಯಾಹ್ನ ವೇಳೆ ಗಾಳಿ ಮಳೆ ಬಂದ ಕಾರಣ ಜನರ ನಡುವೆ ಸಿಲುಕಿ ಏಳೆಂಟು ಮಂದಿ ಅಸ್ವಸ್ಥರಾಗಿದ್ದರು ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ ಸಾಕಷ್ಟು ಪ್ರಮಾಣದಲ್ಲಿ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿದ್ದರೂ ಜನಸಂದಣಿ ಹೆಚ್ಚಾದ ಕಾರಣ ಸ್ವಲ್ಪ ವೆತ್ಯಾಸ ಉಂಟಾಗಿದೆ ಈ ವೇಳೆ ಕೆಲವರ ಮನಸ್ಸಿಗೆ ನೋವಾಗಿದೆ ಬೇಸರವಾಗಿದೆ ಇದಕ್ಕೆ ನಾನು ಕ್ಷೆಮೆಯಾಚಿಸುತ್ತೇನೆ ಕಾರ್ಯಕ್ರಮಕ್ಕೆ ಬಂದವರಲ್ಲಿ ಯಾರ ಮನಸ್ಸಿಗೂ ನೋವಾಗಿದ್ದಲ್ಲಿ ಕ್ಷೆಮೆ ಕೇಳುತ್ತೇನೆ ಸಂಜೆ ಬಳಿಕ ರಾತ್ರಿ 9:30 ರ ವರೆಗೂ ಉಡುಗೊರೆ ವಿತರಣೆ ನಡೆದಿದೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಆಗಿರುವ ಘಟನೆಗೆ ವಿಷಾದವನ್ನು…

Read More

ಜಾತಿ ಧರ್ಮದ ಹೆಸರಿನಲ್ಲಿ ಜಗಳಕ್ಕೆ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಕಡಿವಾಣ ಹಾಕಿದೆ ಸಿಎಂ ಸಿದ್ದರಾಮಯ್ಯ ಮಂಗಳೂರು:- ಜಾತಿ ಧರ್ಮದ ಹೆಸರಿನಲ್ಲಿ ಜಗಳ ಮಾಡೋದರಲ್ಲಿ ನಿಮ್ಮ ಜಿಲ್ಲೆ ನಂ.1 ಇತ್ತು ಈಗ ಅದಕ್ಕೆ ನಮ್ಮ ಸರ್ಕಾರ ಸಂಪೂರ್ಣ ಕಡಿವಾಣ ಹಾಕಿದೆ ಎಂದು ಪುತ್ತೂರು ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾಲೀಕತ್ವದ ರೈ ಎಸ್ಟೇಟ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಶೋಕ ಜನಮನ 2025 ಹಾಗೂ ದೀಪಾವಳಿ ಪ್ರಯುಕ್ತ ವಸ್ತ್ರದಾನ ಕಾರ್ಯಕ್ರಮದಲ್ಲಿ ಭಾಗಿದ್ದ ಸಿಎಂ ಸಿದ್ದರಾಮಯ್ಯ ಜನರಿಗೆ ಸೌಹರ್ದತೆಯ ಭಾಷಣ ಮಾಡಿದರು ಕೆಲವರು 5 ಗ್ಯಾರಂಟಿ ಯೋಜನೆಯ ಬಗ್ಗೆ ಟೀಕೆ ಮಾಡ್ತಾರೆ ಸರ್ಕಾರದ ಬಳಿ ದುಡ್ಡಿಲ್ಲ ಅಂತ ದುಡ್ಡಿಲ್ಲದ್ದಿದ್ದರೆ ಪುತ್ತೂರಿಗೆ ಮೆಡಿಕಲ್ ಕಾಲೇಜ್ ಕೊಡೋಕೆ ಆಗಿತ್ತಾ ಜಾತಿ ಧರ್ಮದ ಹೆಸರಿನಲ್ಲಿ ಜಗಳ ಮಾಡೋದ್ರಲ್ಲಿ ನಿಮ್ಮ ಜಿಲ್ಲೆ ನಂಬರ್ ವನ್ ಇತ್ತು ಆದರೆ ಈಗ ಅದಕ್ಕೆ ನಮ್ಮ ಸರ್ಕಾರ ಸಂಪೂರ್ಣ…

Read More

11 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು ಪುತ್ತೂರು:- ಅಕ್ಟೋಬರ್ 20 ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ಅಶೋಕ ಜನ-ಮನ 2025 ನಡೆದ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿದೆ ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ಹೆಚ್ಚು ಜನ ಭಾಗಿಯಾಗಿದ್ದರಿಂದ ನೂಕುನುಗ್ಗಲು ಉಂಟಾಗಿ ಆಮ್ಲಜನಕ ಕೊರತೆಯಿಂದ ಜನ ಅಸ್ವಸ್ಥರಾಗಿದ್ದಾರೆ ಈ ಸಂದರ್ಭದಲ್ಲಿ ಕುಡಿಯಲು ನೀರು ಸಿಗದೆ ಜನರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಮಳೆ ಬಂದು ಕೆಸರು ತುಂಬಿದ್ದ ಮೈದಾನದ ಅವ್ಯವಸ್ಥೆ ಸಣ್ಣ ಸಣ್ಣ ಮಕ್ಕಳನ್ನು ಹಿಡಿದುಕೊಂಡು ಬಂದಿದ್ದ ಜನ ಪರದಾಡುವಂತಾಗಿದೆ ಅಸ್ವಸ್ಥರಾದವರಿಗೆ ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Read More

ದಿನೇಶ್ ಅಮಿನ್ ಮಟ್ಟು ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರ ನಡುವೆ ಟಾಕ್ ವಾರ್ ಮಂಗಳೂರು:- ನಮ್ಮ ಕಾಲೇಜಿನಲ್ಲಿ ಆರೆಸ್ಸೆಸ್ ನ ಯಾವುದೇ ಚಟುವಟಿಕೆ ನಡೆದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದ್ದಾರೆ. ಅವರು ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸರಕಾರದ ಕೈಗಾರಿಕಾ ಸಂಸ್ಥೆಯ ಮೂಲಕ ರಾಜ್ಯದ ಸುಮಾರು 300 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಸೃಷ್ಟಿ ಎಂಬ ಪ್ರಾಜೆಕ್ಟ್ ಪ್ರದರ್ಶನ ಕಾರ್ಯಕ್ರಮ ನಡೆಸಲಾಗಿದ್ದು ಸದಾನಂದ ಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ಕಾರ್ಯಕ್ರಮ ಅದಾಗಿದ್ದು ಸರಕಾರದ ಹಿರಿಯ ಅಧಿಕಾರಿಗಳು ವಿವಿಧ ಐಟಿ ಕಂಪನಿಗಳವರು ಅದರಲ್ಲಿ ಭಾಗವಹಿಸಿದ್ದರು ವಿದ್ಯಾರ್ಥಿ ಸಂಘಟನೆಯಾಗಿ ಎಬಿವಿಪಿ ಬೆಂಬಲ ನೀಡಿತ್ತು ಅದು ವಿದ್ಯಾರ್ಥಿಗಳ ಪ್ರಾಜೆಕ್ಟ್ ಆಧಾರಿತ ಕಾರ್ಯಕ್ರಮ ಎಂಬ ನೆಲೆಯಲ್ಲಿ ಅವಕಾಶ ನೀಡಲಾಗಿತ್ತು ಹೊರತು ಅಲ್ಲಿ ಯಾವುದೇ ಆರ್ ಎಸ್ ಎಸ್ ಚಟುವಟಿಕೆ ಅಥವಾ ಬೈಠಕ್ ನಡೆಸಲಾಗಿಲ್ಲ ಎಂದು ಹೇಳಿದರು ನಾನು ಎನ್.ಎಸ್ ಯು.ಐ ನಾಯಕನಾಗಿ ಬೆಳೆದವನು ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ವಿರುದ್ಧ…

Read More

ಆಕರ್ಷಕ ಅತ್ಯಾಕರ್ಷಕ ವಸ್ತುಗಳು ಲಭ್ಯ ಪುತ್ತೂರು:- LEGACY HOMES ಫರ್ನಿಚರ್ಸ್ ಮತ್ತು ಎಲೆಕ್ಟ್ರಾನಿಕ್ಸ್ ನೂತನ ಮಳಿಗೆಯು ಅ.20 ಸೋಮವಾರ ಪುತ್ತೂರಿನ ನೆಹರು ನಗರದಲ್ಲಿ ಶುಭಾರಂಭಗೊಳ್ಳಲಿದೆ. ನೂತನ ಸಂಸ್ಥೆಗೆ ಬಹು| ಅಸಯ್ಯಿದ್ ಅಹ್ನದ್ ಪೂಕೂಯ ತಂಙಳ್ ಪುತ್ತೂರು, ಬಹು| ಅಸಯ್ಯಿದ್ ಯಹಿಯ್ಯ ತಂಙಳ್ ಪೋಲ್ಯ ಪುತ್ತೂರು, ಬಹು| ಅಸಯ್ಯಿದ್ ಶರಪುದ್ದೀನ್ ತಂಙಳ್ ಅಲ್ ಹಾದಿ ಸಾಲ್ಮರ , ಇವರುಗಳು ದುಅ ಆಶಿರ್ವಚನವನ್ನು ನೀಡಲಿದ್ದಾರೆ. ಅ.20 ಬೆಳಿಗ್ಗೆ 9:30 ಕ್ಕೆ ನೂತನ ಸಂಸ್ಥೆಯ ಉದ್ಘಾಟನಾ ಸಮಾರಂಭದ ಉದ್ಘಾಟನೆಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀ ಸಂಜೀವ ಮಠಂದೂರು ಅವರು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ವಹಿಸಲಿರುವವರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಈಶ್ವರ ಭಟ್ ಪಂಜಿಗುಡ್ಡೆ , ಕಲ್ಲೇಗ ಜುಮಾ ಮಸೀದಿಯ…

Read More

ಇಬ್ಬರು ಪೋಲಿಸರ ಅಮಾನತು ಪುತ್ತೂರು:- ಅ.17 ರಂದು ಸಂಜೆ ಆಟೋ ಚಾಲಕ ಬಶೀರ್ ಕುರಿಯ ಗ್ರಾಮ ಎಂಬವರು ಸಮವಸ್ತ್ರ ಧರಿಸದೇ ಆಟೋ ಚಲಾಯಿಸಿಕೊಂಡು ಬರುತ್ತಿರುವಾಗ ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೋಲಿಸ್ ಠಾಣಾ ಚಿದಾನಂದ ರೈ ಎ.ಎಸ್.ಐ ಮತ್ತು ಸಿಪಿಸಿ 2283 ಶ್ರೀ ಶೈಲ ಎಂ.ಕೆ ಕೈ ಸನ್ನೆ ಮೂಲಕ ನಿಲ್ಲಿಸಲು ಸೂಚಿಸಿದ್ದರೂ ತನ್ನ ವಾಹನವನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಬಂದು ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡಿದ್ದು ಈ ಕುರಿತು ಬಶೀರ್ ಅವರನ್ನು ಹಿಂಬಾಲಿಸಿ ವಾಹನವನ್ನು ತಡೆದು ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಲ್ಲೆ ಮಾಡಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ ಇದನ್ನು ಪರಿಶೀಲಿಸಿ ಚಿದಾನಂದ ರೈ ಎ.ಎಸ್ ಐ ಮತ್ತು ಸಿಪಿಸಿ 2283 ಶ್ರೀ ಶೈಲ ಎಂಕೆ ರವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಜಿಲ್ಲಾ ಎಸ್ಪಿ ತಿಳಿಸಿದ್ದಾರೆ

Read More

ರಾಜಧಾನಿಯಲ್ಲಿ ಬೆಚ್ಚಿ ಬೀಳಿಸಿದ ಘಟನೆ ಬೆಂಗಳೂರು:- ಪ್ರೀತಿಸಲು ನಿರಾಕರಿಸಿದ ವಿದ್ಯಾರ್ಥಿನಿಯ ಕತ್ತು ಕೊಯ್ದು ಹತ್ಯೆ ಮಾಡಿದ್ದ ಪಾಗಲ್ ಪ್ರೇಮಿಯನ್ನು ಪೋಲಿಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಯಾಮಿನಿ ಪ್ರಿಯಾಳನ್ನು ಹತ್ಯೆ ಮಾಡಿದ್ದ ವಿಘ್ನೇಶ್ ಮತ್ತು ಆತನಿಗೆ ನೆರವಾಗಿದ್ದ ಹರೀಶ್ ಎಂಬಾತನನ್ನು ಶ್ರೀರಾಂಪುರ ಪೋಲಿಸರು ಆರೆಸ್ಟ್ ಮಾಡಿದ್ದಾರೆ. ಯಾಮಿನಿಯ ಹಿಂದೆ ಪ್ರಿಯಕರ ವಿಶ್ಲೇಸ್ ಬಿದ್ದಿದ್ದ ವಿಶ್ವೇಶ್ ಪ್ರೀತಿಯನ್ನು ಯಾಮಿನಿ ತಿರಸ್ಕರಿಸಿದ್ದಳು ಇಂದು ಮನೆಗೆ ಹೋಗುತ್ತಿದ್ದಾಗ ವಿಫೇಶ್ ಯಾಮಿನಿಯನ್ನು ಹಿಂಬಾಲಿಸಿದ್ದಾನೆ ಕಣ್ಣಿಗೆ ಖಾರದ ಹುಡಿ ಹಾಕಿ ಮನಸೋ ಇಚ್ಚೆ ದಾಳಿ ನಡೆಸಿದ್ದಾನೆ ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದರಿಂದ ತೀವ್ರ ರಕ್ತಸ್ರಾವದಿಂದ ಯಾಮಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಸ್ಥಳಕ್ಕೆ ಆಗಮಿಸಿದ ಶ್ರೀರಾಂಪುರ ಪೋಲಿಸರು ಪರಿಶೀಲನೆ ನಡೆಸುತ್ತಿದ್ದಾರೆ

Read More

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಿಂದ ಸೂಕ್ತ ಕ್ರಮದ ಭರವಸೆ ಪುತ್ತೂರು:- ಸಂಚಾರಿ ಪೋಲಿಸರ ಸೂಚನೆಯನ್ನು ಪಾಲಿಸಲಿಲ್ಲವೆಂಬ ಕಾರಣಕ್ಕೆ ಬೆನ್ನಟ್ಟಿಕೊಂಡು ಬಂದು ಆಟೀ ಚಾಲಕನ ಮೈ ಮೇಲೆ ಕೈ ಮಾಡಿ ಅವಾಚ್ಯ ಪದಗಳಿಂದ ಬೈದು ನಿಂದಿಸಿದ ಘಟನೆ ಸಂಬಂಧಿತ ವಿಡಿಯೋ ಸಾಮಾಜಿ ಜಾಲತಾಣಗಳಲ್ಲಿ ಹರಿದಾಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಬಗ್ಗೆ ವರದಿಯಾಗಿದೆ. ಪುತ್ತೂರು ಟ್ರಾಫಿಕ್ ಪೋಲಿಸ್ ಠಾಣೆಯ ಇಬ್ಬರು ಸಿಬ್ಬಂದಿ ಆಟೋ ರಿಕ್ಷಾವೂಂದನ್ನು ಬೆನ್ನಟ್ಟಿಕೊಂಡು ಬಂದಿರುವುದು ಬೈಕ್ ನಿಲ್ಲಿಸಿ ರಿಕ್ಷಾವನ್ನು ತಡೆದು ನಿಲ್ಲಿಸಿದ ಪೋಲಿಸರು ರಿಕ್ಷಾವನ್ನು ಆಪ್ ಮಾಡಲು ಸೂಚಿಸಿ ಆಟೋ ರಿಕ್ಷಾದ ಕೀ ಕಿತ್ತುಕೊಳ್ಳು ಯತ್ನಿಸುವುದು ಪೋಲಿಸರ ವಿಡಿಯೋ ಮಾಡುತ್ತಿಯಾ ಎಂದು ಪ್ರಶ್ನಿಸುವುದು ಆತನ ಅಂಗಿಯನ್ನು ಹಿಡಿದೆಳೆಯುವುದು ಅವಾಚ್ಯ ಪದಗಳಿಂದ ನಿಂದಿಸುವುದು ಮತ್ತು ಮೈ ಮೇಲೆ ಕೈ ಮಾಡುವುದು ದ್ರಶ್ಯಾವಳಿಯಲ್ಲಿ ಕಾಣಿಸಿದೆ. ಈ ವಿಡಿಯೋ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹಾರಿದಾಡುತ್ತಿದ್ದಂತೆಯೇ ಆಕ್ರೋಶಗೊಂಡ ಸಾರ್ವಜನಿಕರು ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಸೆಳೆಯುವರೆಗೆ ಹಂಚಿಕೊಳ್ಳಿ ಎಂದು ವಿನಂತಿಸಿದ್ದು ಮತ್ತಷ್ಟು…

Read More