Subscribe to Updates
Get the latest creative news from FooBar about art, design and business.
Author: PrasakthaNews
ಸ್ಥಳೀಯ ಭಾಷಿಕರನ್ನೇ ಬ್ಯಾಂಕ್ ನೌಕಕರರಾಗಿ ನೇಮಿಸಲು ಸೂಚನೆ ಉಡುಪಿ:- ನ.8 ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಳೀಯ ಭಾಷಿಕರನ್ನೇ ಬ್ಯಾಂಕ್ ಉದ್ಯೋಗಕ್ಕೆ ನೇಮಿಸಬೇಕೆಂಬ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತರಾಮನ್ ಸ್ಥಳೀಯ ಭಾಷಿಗರನ್ನು ಬ್ಯಾಂಕ್ ನೌಕರಿಗೆ ನೇಮಿಸಲು ಆದೇಶಿಸಿದ್ದಾರೆ. ಕರ್ನಾಟಕ ತಮಿಳುನಾಡು ಕೇರಳ ಆಂದ್ರಪ್ರದೇಶ ಸಹಿತ ಹಲವು ರಾಜ್ಯಗಳಲ್ಲಿ ಹಿಂದಿ ಅಥವಾ ಅನ್ಯ ಭಾಷಿಕರನ್ನು ಸ್ಥಳೀಯ ಬ್ಯಾಂಕುಗಳಿಗೆ ನೌಕರಿಗೆ ನೇಮಿಸುವ ವಿರುದ್ಧ ಅನೇಕ ವರ್ಷಗಳಿಂದ ಕೂಗುಗಳು ಕೇಳಿ ಬರುತ್ತಿದ್ದವು ಕರ್ನಾಟಕದಲ್ಲಿ ಹಿಂದಿ ತಮಿಳು ತೆಲುಗು ಮಲಯಾಳಿ ಭಾಷಿಕರನ್ನು ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕುಗಳಿಗೆ ನೌಕರಿಗೆ ನೇಮಿಸುವುದು ಸಾರ್ವಜನಿಕರ ಸರಳ ವ್ಯವಹಾರಕ್ಕೆ ಅಡ್ಡಿಯಾಗುತ್ತಿತ್ತು ಈ ನಿಟ್ಟಿನಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ , ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತರಾಮನ್ ಮತ್ತು ಆರ್ಬಿಐ ಗವರ್ನರ್ ಅವರಿಗೆ ಪತ್ರದ ಮೂಲಕ ಸ್ಥಳೀಯ…
ಪುತ್ತೂರು ನೆಹರುನಗರದಲ್ಲಿ ಘಟನೆ- ಪುತ್ತೂರು:- ಸ್ವಿಪ್ಟ್ ಕಾರ್ ಮತ್ತು ಆಟೋ ರಿಕ್ಷಾ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಘಟನೆ ನೆಹರುನಗರದಲ್ಲಿ ನಡೆದಿದೆ. ಘಟನೆ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಸರಕಾರಿ ಜಾಗದಲ್ಲಿರುವ ದೇವಸ್ಥಾನ, ದೈವಸ್ಥಾನ ಧಾರ್ಮಿಕ ಕೇಂದ್ರಗಳ ಸಕ್ರಮಕ್ಕೆ ಕಂದಾಯ ಇಲಾಖೆ ಅನುಮೋದನೆ ಪುತ್ತೂರು:- ಪುತ್ತೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ದೇವಸ್ಥಾನ, ದೈವಸ್ಥಾನಗಳು ಮತ್ತು ಸಂಘ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅಂತಹ ಜಾಗಗಳನ್ನು ಸಕ್ರಮಗೊಳಿಸಿ ಅವುಗಳ ಹೆಸರಿಗೆ ಜಮೀನು ಮಂಜೂರು ಮಾಡುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ಸಲ್ಲಿಸಿದ್ದ ಮನವಿಗೆ ಕಂದಾಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶಾಸಕ ಅಶೋಕ್ ರೈ ಮನವಿ ಪತ್ರದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ದೇವಸ್ಥಾನ ದೈವಸ್ಥಾನಗಳು ಮತ್ತು ಸಂಘ ಸಂಸ್ಥೆಗಳು ತಮ್ಮ ಹೆಸರಿನಲ್ಲಿ ಜಮೀನು ಇಲ್ಲದ ಕಾರಣ ಸರ್ಕಾರದಿಂದ ಲಭಿಸುವ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ ಎಂದು ವಿವರಿಸಲಾಗಿತ್ತು ಇದರಿಂದಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದ್ದು ಈ ದೇವಸ್ಥಾನ ನಿರ್ಮಾಣಗೊಂಡಿರುವ ಜಾಗಗಳನ್ನು ಅವುಗಳ ಹೆಸರಿಗೆ ಮಂಜೂರು ಮಾಡುವಂತೆ ಕೋರಲಾಗಿತ್ತು
ವಿಟ್ಲ ಠಾಣೆಯ ನೂತನ ಪೋಲಿಸ್ ನೀರಿಕ್ಷಕರಾಗಿ ಪ್ರಕಾಶ್ ದೇವಾಡಿಗ ವಿಟ್ಲ:- ವಿಟ್ಲ ಠಾಣೆಯ ಪೋಲಿಸ್ ನೀರಿಕ್ಷಕರಾದ ನಾಗಾರಾಜ್ ಎಚ್ ಇ ಅವರು ಉಪ್ಪಿನಂಗಡಿ ಠಾಣೆಗೆ ವರ್ಗಾವಣೆಯಾಗಿದ್ದಾರೆ. ವಿಟ್ಲ ಠಾಣೆಯ ನೂತನ ಪೋಲಿಸ್ ನೀರಿಕ್ಷಕರಾಗಿ ಪ್ರಕಾಶ್ ದೇವಾಡಿಗ ಅವರನ್ನು ನೇಮಕ ಮಾಡಿ ಆದೇಶಿಸಿದೆ. ಉಪ್ಪಿನಂಗಡಿ ಪೋಲಿಸ್ ಠಾಣೆಯ ಪೋಲಿಸ್ ನೀರಿಕ್ಷಕರಾದ ರವಿ ಬಿ.ಎಸ್ ಅವರನ್ನು ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಗೆ ಪೋಲಿಸ್ ನೀರಿಕ್ಷಕರಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ
ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆಗೆ ಹಾಜರು ಪುತ್ತೂರು:- ಸಾರ್ವಜನಿಕ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆಗೆ ಬುಧವಾರ ಸಂಜೆ ಹಾಜರಾದರು. ಪುತ್ತೂರು ಗ್ರಾಮಾಂತರ ಠಾಣೆಯ ತನಿಖಾಧಿಕಾರಿಯ ನೋಟಿಸ್ ಹಿನ್ನೆಲೆ ಪ್ರಭಾಕರ ಭಟ್ ವಿಚಾರಣೆಗೆ ಹಾಜರಾಗಿದ್ದಾರೆ ಅ.20 ರಂದು ಪುತ್ತೂರು ತಾಲೂಕಿನ ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಾಡಿದ ಭಾಷಣ ಧಾರ್ಮಿಕ ದ್ವೇಷ ಪ್ರಚೋದಿಸುವ ಮಹಿಳೆಯರ ಘನತೆಗೆ ದಕ್ಕೆ ಉಂಟುಮಾಡುವ ಮಾಡುವ ಹಾಗೂ ಸಾರ್ವಜನಿಕ ಶಾಂತಿಗೆ ಅಪಾಯ ಉಂಟು ಮಾಡುವಂತಿತ್ತು.ಎಂದು ಆರೋಪಿಸಿ ಮಹಿಳಾ ಪರ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು ದೂರಿನಂತೆ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಅ 25ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. …
ಮಾನವೀಯ ಸೇವೆಯು ಎಲ್ಲಾ ಮಹಿಖೆಯರಿಗೆ ಮಾದರಿಯಾಗಲಿ ನೋಟರಿ ಎಂ.ಪಿ ಅಬೂಬಕ್ಕರ್ ಪುತ್ತೂರು:- ಪರ್ಪುಂಜ ಅಪಘಾತದಲ್ಲಿ ಗಾಯಗೊಂಡಿದ್ದ ಪುಟ್ಟ ಮಗುವಿನ ಆರೈಕೆ ಮಾಡಿ ಮಾನವೀಯತೆ ಮೆರೆದಿರುವ ಚಂದ್ರಪ್ರಭಾ ಗೌಡರವರಿಗೆ AIKMCC ಹಾಗೂ ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯುಮಾನಿಟಿ ವತಿಯಿಂದ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ನೋಟರಿ ಎಂ.ಪಿ ಅಬೂಬಕ್ಕರ್ ನಿಮ್ಮ ಮಾನವೀಯ ಸೇವೆಯು ಎಲ್ಲಾ ಮಹಿಳೆಯರಿಗೆ ಮಾದರಿಯಾಗಲಿ ಎಂದರು ಈ ಸಂದರ್ಭದಲ್ಲಿ AIKMCC ಪ್ರಧಾನ ಕಾರ್ಯದರ್ಶಿ ಅಪ್ಹಾಂ ಅಲಿ ತಂಙಳ್ ಅವರು AIKMCC ಪಾಲಿಯೇಟಿವ್ ಹೋಮ್ ಕೇರ್ ವತಿಯಿಂದ ಜಿಲ್ಲೆಯಲ್ಲಿ ನೀಡುತ್ತಿರುವ ರೋಗಿಗಳ ಆರೈಕೆ ವಿವರ ನೀಡಿದರು ಕಾರ್ಯಕ್ರಮದಲ್ಲಿ ಯೂಸುಫ್ ಸಾಲ್ಮರ, ಅಬೂಬಕ್ಕರ್, ಭರತ್ ರಾವ್, ಶರ್ಪುದ್ದೀನ್ , ಜಬ್ಬಾರ್ ಕೆಎಂಸಿಸಿ , ಅನಿಸ್ ಕೆಎಸ್, ಮಹಮ್ಮದ್ ಪಡೀಲ್, ಮಹಮ್ಮದ್ ಶಮೀರ್, ಹನೀಫ್ ದರ್ಬೆ ಉಪಸ್ಥಿತರಿದ್ದರು AIKMCC ದ.ಕ.ಜಿಲ್ಲಾ ಮೀಡಿಯಾ ವಿಂಗ್ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಸ್ವಾಗತಿಸಿ ವಂದಿಸಿದರು
ಸಮಾಜಕ್ಕೆ ಮಾನವೀಯ ಸಂದೇಶ ನೀಡುತ್ತಿರುವ ಝಕರಿಯ ಜೋಕಟ್ಟೆ ಮಂಗಳೂರು:- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ದೊರೆತ 5 ಲಕ್ಷ ರೂ.ಗಳನ್ನು ಮಾನವೀಯ ಸೇವೆ ಸಲ್ಲಿಸುವ 5 ಸಂಸ್ಥೆಗಳಿಗೆ ನೀಡುವುದಾಗಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಉದ್ಯಮಿ ಝಕರಿಯ ಜೋಕಟ್ಟೆ ಘೋಷಿಸಿದ್ದಾರೆ. ಮಂಗಳೂರಿನ ಸಾನಿಧ್ಯ ಮಾನಸಿಕ ವಿಕಲಚೇತನರ ವಸತಿ ಶಾಲೆ , ಸ್ನೇಹದೀಪ , ಎಚ್ ಐವಿ ಪೀಡಿತ ಮಕ್ಕಳ ಆಶ್ರಮ ಬೋಂದೆಲ್ ಸ್ನೇಹಾಲಯ ವ್ಯಸನ ವಿಮೋಚನಾ ಕೇಂದ್ರ ತಲಪಾಡಿ, ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಲೇಡಿಗೋಷನ್ ಕಾರುಣ್ಯ ಯೋಜನೆ, ಕಾವಳಕಟ್ಟೆ ಹಿದಾಯ ಕಾಲನಿಯ ವಿಕಲಚೇತನ ಮಕ್ಕಳ ಕೇಂದ್ರಕ್ಕೆ ತಲಾ 10 ಲಕ್ಷ ರೂ ನೀಡುವುದಾಗಿ ಅವರು ತಿಳಿಸಿದ್ದಾರೆ. ಝಕರಿಯ ಜೋಕಟ್ಟೆ ಅಭಿಮಾನಿ ಬಳಗ ನವೆಂಬರ್ ತಿಂಗಳಲ್ಲಿ ಏರ್ಪಡಿಸಲುದ್ದೇಶಿಸಿರುವ ಪೌರ ಸನ್ಮಾನದಲ್ಲಿ ಈ ಮೊತ್ತವನ್ನು ವಿತರಿಸಲಿದ್ದಾರೆ ಕರ್ನಾಟಕ ಸರ್ಕಾರವು ರಾಜ್ಯೋತ್ಸವದಂದು ಅನಿವಾಸಿ ಉದ್ಯಮಿ ಕೊಡುಗೈ ದಾನಿ ಎಂ.ಪ್ರೆಂಡ್ಸ್ ಚಾರಿಟೇಬಲ್ ಅಧ್ಯಕ್ಷ ಝಕರಿಯ ಜೋಕಟ್ಟೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ…
ಹಲವು ಗಣ್ಯರು ಭಾಗಿ ಗುಬ್ಬಿ:- ಗುಬ್ಬಿ ಪಟ್ಟಣದ ಹೊರ ಹೊಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಗೆ ಹೊಂದಿಕೊಂಡಂತೆ ನೂತನವಾಗಿ ನಿರ್ಮಾಣವಾದ ಇಂಡಿಯನ್ ಆಯಿಲ್ ಕಂಪೆನಿಯ ಶ್ರೀ ರಾಘವೇಂದ್ರ ಪ್ಯೂಯಲ್ ಸೆಂಟರ್ ಅನ್ನು ಕೇಂದ್ರದ ರೈಲ್ವೆ ಸಚಿವ ವಿ ಸೋಮಣ್ಣ ಉದ್ಘಾಟಿಸಿದರು. ಚೇಳೂರು ರಸ್ತೆಗೆ ಅಡ್ಡಲಾಗಿ ಬರುವ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಮೇಲ್ಸೆತುವೆ ಪಕ್ಕದಲ್ಲಿ ಆರಂಭವಾದ ಈ ಪೆಟ್ರೋಲ್ ಬಂಕ್ ಉದ್ಘಾಟಿಸಿ ಮಾತನಾಡಿದ ಕೇಂದ್ರದ ಜಲಶಕ್ತಿ ಸಚಿವ ವಿ.ಸೋಮಣ್ಣ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಅತ್ಯವಶ್ಯಕವಾದ ಪೆಟ್ರೋಲ್ ಮತ್ತು ಡಿಸೇಲ್ ದೂರೆಯುವ ವ್ಯವಸ್ಥೆ ಮಾಡಿರುವುದು ಪೂರಕವಾಗಿದೆ ಎಂದರು ಚುತುಷ್ಪಥ ರಸ್ತೆ ಕಾಮಗಾರಿ ಈ ಹೆದ್ದಾರಿಗೆ ಅವಶ್ಯವಿತ್ತು ವಾಹನ ದಟ್ಟಣೆ ಹೆಚ್ಚಾದಂತೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು ಈ ಜೊತೆ ನಗರ ಪಟ್ಟಣಗಳ ಹೊರ ವಲಯದಲ್ಲಿ ಸರ್ವಿಸ್ ರಸ್ತೆ ಬೃಹತ್ ವಾಹನ ಸಂಚಾರಕ್ಕೆ ಮಾರ್ಗವಾಗಿದೆ ಇಂತಹ ಮಾರ್ಗಗಳ ಮಧ್ಯೆ ಪೆಟ್ರೋಲ್ ಡೀಸೆಲ್ ಒದಗಿಸುವ ಕೆಲಸ ಈ ಬಂಕ್ ಮಾಡಲಿ ಎಂದು ಮಾಲೀಕ…
ಸಚಿವ ಸ್ಥಾನಕ್ಕೆ ನಾನು ಯಾವುದೇ ಆಕಾಂಕ್ಷೆ ಇಟ್ಟಿಲ್ಲ ಪಕ್ಷದ ಸಂಘಟನೆಯೇ ನನ್ನ ಮೊದಲ ಆದ್ಯತೆಯಾಗಿದೆ ಪ್ರಸಕ್ತ ನ್ಯೂಸ್ ಜೊತೆ ಮಂಜುನಾಥ್ ಭಂಡಾರಿ ಪ್ರತಿಕ್ರಿಯೆ ಮಂಗಳೂರು:- ಮಾಧ್ಯಮ ಮತ್ತು ರಾಜಕೀಯ ವಲಯದಲ್ಲಿ ಸದಾ ಸುದ್ದಿಯಲ್ಲಿರುವ ನವೆಂಬರ್ ಕ್ರಾಂತಿ ಮುಖ್ಯಮಂತ್ರಿ ಬದಲಾವಣೆ ಸಚಿವ ಸಂಪುಟ ಬದಲಾವಣೆ ಈ ಬಗ್ಗೆ ಪ್ರಸಕ್ತ ಮಾಧ್ಯಮವು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಮಂಜುನಾಥ್ ಭಂಡಾರಿ ಅವರನ್ನು ಸಂಪರ್ಕಿಸಿದಾಗ ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯ ಯಾವುದೇ ವಿಚಾರ ಪಕ್ಷದ ವಲಯದಲ್ಲಿ ಚರ್ಚೆ ಆಗಿಲ್ಲ ಈ ಬಗ್ಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು ಇನ್ನೂ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು ಸಚಿವ ಸ್ಥಾನದ ಬಗ್ಗೆ ನಾನೇನು ಆಕಾಂಕ್ಷೆ ಇಟ್ಟುಕೊಂಡಿಲ್ಲ ಕಾಂಗ್ರೆಸ್ ಪಕ್ಷದ ಸಂಘಟನೆಯೇ ನನ್ನ ಮೊದಲ ಆದ್ಯತೆಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಮಂಜುನಾಥ್ ಭಂಡಾರಿ ಅವರು ಪ್ರಸಕ್ತ ನ್ಯೂಸ್ ಗೆ ತಿಳಿಸಿದ್ದಾರೆ
ನಾಳೆ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವದೂಂದಿಗೆ ಅಂತ್ಯಕ್ರಿಯೆ ಬಾಗಲಕೋಟೆ:- ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಹಾಲಿ ಶಾಸಕ ಎಚ್ ವೈ ಮೇಟಿ ಅವರು ಕಾರ್ಡಿಯಾಕ್ ಅರೆಸ್ಟ್ ನಿಂದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಅನಾರೋಗ್ಯದಿಂದ ಶಾಸಕ ಎಚ್ ವೈ ಮೇಟಿ ಅವರು ಬೆಂಗಳೂರಿನ ಅಪೂಲೊ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಇದೀಗ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ ಕಳೆದ ವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಅವರು ಮೈಸೂರಿನಿಂದ ನೇರವಾಗಿ ಜಯನಗರ ಖಾಸಗಿ ಆಸ್ಪತ್ರೆಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.


