Subscribe to Updates
Get the latest creative news from FooBar about art, design and business.
Author: PrasakthaNews
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದೇ ಕಾರ್ಯಾಗಾರದ ಉದ್ದೇಶ ಪುತ್ತೂರು :- ನ.26 ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು, ಮಕ್ಕಳ ಮಾಸೋತ್ಸವ ಸಮೀತಿ ಪುತ್ತೂರು ವತಿಯಿಂದ ಹಾರಾಡಿ ಶಾಲೆಯಲ್ಲಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಕುಕ್ಕಸರ್ ಸಂಪನ್ಮೂಲ ಕೇಂದ್ರದ ಸದಸ್ಯರನ್ನು ಸ್ವಾಗತಿಸಿದರು.ಸಂಪನ್ಮೂಲ ಕೇಂದ್ರದ ಪ್ರದಾನ ಕಾರ್ಯದರ್ಶಿ ಸುಮಂಗಲ ಮಕ್ಕಳಿಂದ ಸಂವಿಧಾನದ ಪೀಠಿಕೆ ಓದಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ , ಹರಿಣಾಕ್ಷೀ ಜೆ.ಶೆಟ್ಟಿ (ನ್ಯಾಯವಾದಿಗಳು ಪುತ್ತೂರು) ಇವರು ಮಕ್ಕಳಿಗೆ ಪೋಕ್ಸೋ ಮಕ್ಕಳ ಹಕ್ಕಿನ ಬಗ್ಗೆ ಮಾಹಿತಿಯನ್ನು ನೀಡಿದರು. ಬಾಲನ್ಯಾಯ ಮಂಡಳಿಯ ಸದಸ್ಯೆ ಸಾಹಿರಾ ಇವರು ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಮಂಡಳಿಯು ಯಾವರೀತಿ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಮಾಹಿತಿ ನೀಡಿದರು ಸಹ ಶಿಕ್ಷಕಿ ಎಲ್ಲರನ್ನೂ ವಂದಿಸಿದರು.ಶಾಲಾ ಮುಖ್ಯ ಶಿಕ್ಷಕ, ಹಾಗೂ ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಏಳನೇ ತರಗತಿ ಹಾಗೂ ಎಂಟನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಬಂಟ್ವಾಳ ಉಸ್ತುವಾರಿಯಾಗಿ ಜೊಸ್ಪಿನ್ ಡಿಸೋಜ ನೇಮಕ ಬಂಟ್ವಾಳ:-ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಗ್ರಾಮಾಂತರ ಇದರ ಉಸ್ತುವಾರಿಗಳ ನೇಮಕವಾಗಿದ್ದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿಯಾಗಿ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿರುವ ಜೊಸ್ಪಿನ್ ಡಿಸೋಜ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಅವರ ಆದೇಶದ ಮೇರೆಗೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಕಾ ಲಂಬಾ ರವರ ನೇತೃತ್ವದಲ್ಲಿ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಗ್ರಾಮಾಂತರ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಮುಖ್ಯ ಪ್ರಭಾಷಣಗಾರರಾಗಿ ಬಹು ಹಾಫಿಲ್ E.P .ಅಬೂಬಕ್ಕರ್ ಖಾಸಿಮಿ ಪತ್ತನಾಪುರಂ ಬಹು NPM ಸಯ್ಯದ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ಪುಣಚ:- ಇತಿಹಾಸ ಪ್ರಸಿದ್ಧ ಮುಹಿಯ್ಯುದ್ದೀನ್ ಜುಮಾ ಮಸೀದಿ ಪುಣಚ ಇದರ ಅಂಗ ಸಂಸ್ಥೆಯಾದ ಕುತುಬಿಯತ್ ಯಂಗ್ ಮೆನ್ಸ್ ಎಸೋಶಿಯೇಶನ್ ಪುಣಚ ಇದರ 41 ನೇ ಕುತುಬಿಯತ್ ವಾರ್ಷಿಕೋತ್ಸವದ ಪ್ರಯುಕ್ತ ಎರಡು ದಿನದ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ ಡಿಸೆಂಬರ್ 8 ಮತ್ತು 9 ರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ ದಿನಾಂಕ 8-12-2025 ನೇ ಮಗ್ರಿಬ್ ನಮಾಝ್ ನ ನಂತರ ಮುಖ್ಯ ಪ್ರಭಾಷಣಗಾರರಾಗಿ ಬಹು ಹಾಫಿಲ್ E.P ಅಬೂಬಕ್ಕರ್ ಖಾಸಿಮಿ ಪತ್ತನಾಪುರಂ ಅವರು ಅರ್ಥಗರ್ಭಿತವಾದ ಪ್ರಭಾಷಣ ಮಾಡಲಿದ್ದಾರೆ. ದಿನಾಂಕ 9-12-2025 ನೇ ಮಂಗಳವಾರ ಮಗ್ರಿಬ್ ನಮಾಝ್ ನಂತರ ಕುತುಬಿಯತ್ ವಾರ್ಷಿಕ ಕಾರ್ಯಕ್ರಮದ ನೇತೃತ್ವವನ್ನು ಬಹು ಬಿ.ಯಂ ಮುಹಮ್ಮದ್ ದಾರಿಮಿ ಖತೀಬರು ಜುಮಾ ಮಸೀದಿ ಪುಣಚ ವಹಿಸಲಿದ್ದಾರೆ. ಕಾರ್ಯಕ್ರಮದ ದುಹಾ ನೇತೃತ್ವವನ್ನು ಬಹು NPM…
ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಮಹಿಳೆಗೆ ಸಂದ ಜಯ ಪುತ್ತೂರು:- ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ 34 ನಿಕ್ಕಿಲಾಡಿಯ ಹನಿ ಮಿನೆಜಸ್ ಅವರನ್ನು ನೇಮಕಗೊಳಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸೌಮ್ಯ ರೆಡ್ಡಿ ಆದೇಶಿಸಿದ್ದಾರೆ ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಅನಿ ಮಿನೇಜಸ್ ಒಂದು ಅವಧಿಗೆ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದು ಈ ಸಂದರ್ಭ ತನಗೆ ಬರುವ ತಿಂಗಳ ಗೌರವ ಧನವನ್ನು ಬಡ ಕುಟುಂಬಗಳಿಗೆ ನೀಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದರು ನಮ್ಮೂರು ನೆಕ್ಕಿಲಾಡಿ ಸಂಘಟನೆಯ ಕಾರ್ಯದರ್ಶಿಯಾಗಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು 34 ನಿಖಿಲಾಡಿ ಗ್ರಾಮದ ಬೀತಲಪ್ಪುವಿನಲ್ಲಿ ಸುಶೀಲಾ ಅವರ ಮನೆ ಕುಸಿದು ಬಿದ್ದ ಸಂದರ್ಭ ಸಮಾನ ಮನಸ್ಕ ದಾನಿಗಳ ನೆರವು ಪಡೆದು ಸುಮಾರು ಒಂದು ಲಕ್ಷದ ಮೂವತ್ತು ಸಾವಿರ ರೂ ವೆಚ್ಚದಲ್ಲಿ ಅವರ ಮನೆಯನ್ನು ಪುನರ್ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಬೀತಲಪ್ಪುವಿನ ಉಷಾ ಅವರ…
ಸಂಸದ ಕಾಗೇರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮಂಗಳೂರು:- ರಾಷ್ಟ್ರಗೀತೆ ಜನಗಣಮನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಬಿ ರಮಾನಾಥ್ ರೈ ಸರಕಾರವನ್ನು ಆಗ್ರಹಿಸಿದ್ದಾರೆ. ಮಂಗಳೂರು ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ಸಚಿವ ಸ್ಥಾನ ಸ್ಪೀಕರ್ ಹುದ್ದೆ ಸೇರಿದಂತೆ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದರು ನಮ್ಮ ದೇಶದ ರಾಷ್ಟ್ರಗೀತೆಗೆ ಅಪಾರ ಇತಿಹಾಸವಿದ್ದು ದೇಶದ ಜನಮಾನಸದಲ್ಲಿ ಇರುವಂತಹ ಹಾಡು ಆಗಿದೆ ರಾಷ್ಟ್ರಧ್ವಜ , ರಾಷ್ಟ್ರಗೀತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು 1911ರ ಡಿ 11 ರಂದು ಜನಗಣಮನ ಹಾಡನ್ನು ರವೀಂದ್ರನಾಥ ಟ್ಯಾಗೋರ್ ಬರೆದರು 1911 ಡಿ 28 ರಂದು ಕೋಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಭಾರಿ ಹಾಡಲಾಗಿತ್ತು 1947 ರ…
ಅಚ್ಚರಿಯ ಹೇಳಿಕೆ ನೀಡಿದ ಯತ್ನಾಳ್ ಗದಗ:- ಪ್ರಸ್ತುತ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿದರೆ ಒಳ್ಳೆಯದು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಭಾನುವಾರ ಹೇಳಿದ್ದಾರೆ. ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಅವರ ಮೌನ ಅವರ ಉದ್ದೇಶಗಳ ಬಗ್ಗೆ ಯಾವುದೇ ಸ್ಪಷ್ಟತೆಗಳಿಲ್ಲ ಸಿಎಂ ರಾಜಣ್ಣ ಅವರ ನಿವಾಸಕ್ಕೆ ಭೇಟಿ ನೀಡಿದ್ದು ರಾಜಣ್ಣ ಅವರ ಬಣ ಡಿಕೆ ಶಿವಕುಮಾರ್ ಅವರ ಮೇಲೆ ಆರೋಪ ಹೊರಿಸುತ್ತಿದೆ ಪಕ್ಷದ ಸದಸ್ಯರಲ್ಲಿ ಸ್ಪಷ್ಟ ಗೊಂದಲವಿದೆ ಪಕ್ಷ ವಿಭಜನೆಯಾಗುವ ಆತಂಕವಿದೆ ಎಂದು ಹೇಳಿದರು
ಪುತ್ತೂರು:- ದೀಪೋತ್ಸವ ಕಾರ್ಯಕ್ರಮದಲ್ಲಿ ಕೋಮು ಪ್ರಚೋದಕ ಮಹಿಳೆಯರ ಘನತೆಗೆ ಧಕ್ಕೆ ತರುವ ಹಾಗೂ ಸಾರ್ವಜನಿಕ ಅಶಾಂತಿ ಉಂಟು ಮಾಡುವ ಭಾಷಣ ಮಾಡಿರುವ ಆರೋಪದಡಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದೂರು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ಹಾಗೂ ವಾದ ಮಂಡಿಸಲು ಅವಕಾಶ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನ.15ಕ್ಕೆ ಮುಂದೂಡಿದೆ. ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಅ.22ರಂದು ನಡೆದ ದೀಪೋತ್ಸವ ಮತ್ತು ಗೋ ಪೂಜೆಯಲ್ಲಿ ಭಾಗವಹಿಸಿದ್ದ ಕಲ್ಲಡ್ಕ ಪ್ರಭಾಕರ ಭಟ್ ಕೋಮು ಪ್ರಚೋದನಾತ್ಮಕವಾಗಿ ಭಾಷಣ ಮಾಡಿರುವ ಬಗ್ಗೆ ಈಶ್ವರಿ ಪದ್ಮುಂಜ ಅವರು ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಪ್ರಕರಣ ದಾಖಲಿಸಿದ ಪೋಲಿಸರು ವಿಚಾರಣೆಗೆ ಹಾಜರಾಗುವಂತೆ ಮನೆಗೆ ನೋಟಿಸ್ ಜಾರಿಗೊಳಿಸಿದ್ದರು ಬಳಿಕದ ಬೆಳವಣಿಗೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ನೀರಿಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು
ಹಲವಾರು ಮಂದಿ ಉಪಸ್ಥಿತಿ ಪುತ್ತೂರು:- ಕೋಡಿಂಬಾಡಿಯ ಬೀಡಿ ಉದ್ಯಮಿ,ಹಿರಿಯರು,ಕೃಷಿಕರು ಮತ್ತು ಶಾಸಕರ ತಂದೆಯವರ ಆತ್ಮೀಯರು ಮಹಮ್ಮದ್(ಮೋನುಚ್ಚ) ಭಾರತ್ ರವರ ಮನೆಗೆ ಶಾಸಕರು ಬೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಕೋಡಿಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೋನಪ್ಪ ಗೌಡ ಪಮ್ಮನಮಜಲು,ಕಾರ್ಯದರ್ಶಿ ಯೋಗೀಶ ಸಾಮಾನಿ ಸಂಪಿಗೆದಡಿ- ಮಠಂತಬೆಟ್ಟು,ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರಾದ ನಿರಂಜನ ರೈ ಮಠಂತಬೆಟ್ಟು,ಹಾಲು ಉದ್ಫಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಡಿ ನಡುಮನೆ,ಬೂತ್ ಅಧ್ಯಕ್ಷರುಗಳಾದ ಪ್ರಭಾಕರ ಸಾಮಾನಿ ಮಠಂತಬೆಟ್ಟು,ಯತೀಶ್ ಶೆಟ್ಟಿ ಬರೆಮೇಲು,ವಿದ್ಯುತ್ ಸಲಹಾ ಸಮಿತಿಯ ಸದಸ್ಯರಾದ ಶ್ರೀಮತಿ ರಶ್ಮಿ ನಿರಂಜನ ರೈ ಮಠಂತಬೆಟ್ಟು,ಹಿರಿಯರಾದ ಹುಸೈನ್ ಕೆ.ಬಿ.ಕೆ,ದಾವೂದ್ ಕೋಡಿಯಾಡಿ ಮತ್ತು ಅದ್ರಾಮ ಕೋಡಿಂಬಾಡಿ,ಪ್ರಮುಖರಾದ ಸಬೀರ್ ಸರ್ಗ,ಆದಂ ಕುಂಞಿ,ಹಂಝಾ ಮುಂತಾದವರು ಜೊತೆಗಿದ್ದರು.
ಗೌರವಧ್ಯಕ್ಷ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಅಧಿಕೃತ ಘೋಷಣೆ ಬೆಳ್ತಂಗಡಿ; ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಇತಿಹಾಸ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾದ ಕಾಜೂರು ಮಖಾಂ ಶರೀಫ್ ಉರೂಸ್ ಕಾರ್ಯಕ್ರಮವು 2026 ಜನವರಿ 16 ರಿಂದ 25 ರ ವರೆಗೆ ನಡೆಯಲಿದೆ. ಖಾಝಿ ಶೈಖುನಾ ಸುಲ್ತಾನುಲ್ ಉಲಮಾ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ಅವರ ನೇತೃತ್ವದಲ್ಲಿ, ಸಯ್ಯಿದ್ ಕಾಜೂರು ತಂಙಳ್ ಮಾರ್ಗದರ್ಶನದೊಂದಿಗೆ ನಡೆಯುವ ಈ ಆಧ್ಯಾತ್ಮಿಕ ಅನುಭೂತಿಯ ಕಾರ್ಯಕ್ರಮಗಳ ಅಧಿಕೃತ ಘೋಷಣೆಯನ್ನು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಗೌರವಾಧ್ಯಕ್ಷರೂ, ಸಮಸ್ತ ಕೇರಳ ಕೇಂದ್ರ ಮುಶಾವರ ಉಪಾಧ್ಯಕ್ಷರೂ ಆದ ಖುದುವತುಸ್ಸಾದಾತ್ ಅಸಯ್ಯಿದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್ ಪ್ರಕಟಿಸಿ, ಪೋಸ್ಟರ್ ಬಿಡುಗಡೆಗೊಳಿಸಿದರು. ಈ ಉರೂಸ್ ಕಾರ್ಯಕ್ರಮವು ಕಾಜೂರು ಮತ್ತು ಕಿಲ್ಲೂರು ಜಂಟಿ ಆಶ್ರಯದಲ್ಲಿ ಸಂಪ್ರದಾಯಬದ್ಧವಾಗಿ ಗತ ವೈಭವ ಮರುಕಳಿಸುವಂತೆ ವಿಜೃಂಬಣೆಯಿಂದ ನಡೆಸುವುದಾಗಿ ಸಯ್ಯಿದ್ ಕುಂಬೋಳ್ ತಂಙಳ್ ತಿಳಿಸಿದರು. ಪೋಸ್ಟರ್ ಬಿಡುಗಡೆ…
ನಿಮಿಗೆ ಅನ್ ಲೈನ್ ಲಾಟರಿ ಬಂದಿದೆ ಎಂದು ಕರೆ ಬರುತ್ತದೆ ನಂತರ ಅಕೌಂಟಿಗೆ ಹಣ ಬರಬೇಕಾದರೇ RBI tax ಕಟ್ಟಿದರೆ ಲಾಟರಿ ಹಣ ಅಕೌಂಟಿಗೆ ಬರುತ್ತೆ ಎಂಬ ಮೋಸದ ನಾಟಕ ಪುತ್ತೂರು:- ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಮೋಸಕ್ಕೆ ಅನೇಕ ಮಂದಿ ತಮ್ಮ ತಮ್ಮ ಅಕೌಂಟ್ ಮೂಲಕ ತಮ್ಮ ದುಡ್ಡು ಕಳೆದುಕೊಳ್ಳುತ್ತಿರುವುದು ದಿನನಿತ್ಯ ನಡೆಯುತ್ತಿದೆ ಅಂದ ಹಾಗೆ ಪುತ್ತೂರು ತಾಲೂಕಿನ ವ್ಯಕ್ತಿಯೊಬ್ಬರು ಪೇಸ್ ಬುಕ್ ಮೂಲಕ ಕೇರಳ ಅಲ್ ಲೈನ್ ಲಾಟರಿ ಎಂಬ ಲಿಂಕನ್ನು ಒಪನ್ ಮಾಡಿದ್ದು ತಕ್ಷಣ ಕೇರಳ ಲಾಟರಿ ಎಂಬ ಹೆಸರಿನ ಮೊಬೈಲ್ ಸಂಖ್ಯೆ- 9631479648 ಎಂಬ ನಂಬರಿನಲ್ಲಿ ಕೇರಳ ಲಾಟರಿಯ ಟಿಕೆಟ್ ಸಂಖ್ಯೆ ನೀಡಿ ಚಾಯ್ಸ್ ಮಾಡಲು ತಿಳಿಸಲಾಗುತ್ತದೆ ಚಾಯ್ಸ್ ಮಾಡಿದ ನಂತರ 40 ರೂ ಪೇ ಮಾಡುವಂತೆ ತಿಳಿಸುತ್ತಾರೆ. 40 ರೂ ಪೇ ಮಾಡಿದ ನಂತರ ಕೇರಳ ಅಲ್ ಲೈನ್ ಲಾಟರಿ 3 ಗಂಟೆಯಲ್ಲಿ ರಿಸಲ್ಟ್ ಬರುತ್ತದೆ ಎಂಬ ಸಂದೇಶವನ್ನು ತಿಳಿಸುತ್ತಾರೆ ಅವರು…


