
ಬಂಟ್ವಾಳ:-


ಕರ್ನಾಟಕ ಸರಕಾರದ ಬಹು ನಿರೀಕ್ಷಿತ ಮತ್ತು ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಪಲಾನುಭವಿಗಳ ಸಂಖ್ಯೆ 500 ಕೋಟಿ ಗಡಿಯನ್ನು ದಾಟಿರುವ ಹಿನ್ನೆಲೆಯಲ್ಲಿ –

ಶಕ್ತಿ – ಸಂಭ್ರಮ ಕಾರ್ಯಕ್ರಮ ದಿನಾಂಕ: 14.07.2025ನೇ ಸೋಮವಾರ ಬೆಳಗ್ಗೆ ಗಂಟೆ. 10.,00 ಕ್ಕೆ K.S.R.T.C ಬಸ್ಸು ನಿಲ್ದಾಣ ಬಿ.ಸಿ ರೋಡ್ ನಲ್ಲಿ ನಡೆಯಲಿದೆ.
ಈ ಅರ್ಥಪೂರ್ಣ ಮತ್ತು ಸುಂದರ ಕಾರ್ಯಕ್ರಮದಲ್ಲಿ ಹೆಚ್ಚಿನ ಮಹಿಳಾ ಪಲಾನುಭವಿಗಳು, ಹಾಗೂ ಎಲ್ಲಾ ನಾಮನಿರ್ದೇಶಿತ ಸದಸ್ಯರು, ಕಾಂಗ್ರೆಸ್ ಪಕ್ಷದ ಹಿರಿಯ ಕಿರಿಯ ನಾಯಕರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಯಂತಿ ವಿ ಪೂಜಾರಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ