
ಪುತ್ತೂರು:- ಪುತ್ತೂರು ತಾಲೂಕಿನ 13 ಮಂದಿ ಆಶಾ ಕಾರ್ಯಕರ್ತರನ್ನು ಆರ್ ಸಿ ಎಚ್ ಪೋರ್ಟಲ್ ನಿಂದ ಹೊರ ತೆಗೆದಿರುವುದರಿಂದ ಅವರಿಗೆ ಆಶಾ ಕಾರ್ಯಕರ್ತರಾಗಿ ಮುಂದುವರಿಸಲು ಸಮಸ್ಯೆಯಾಗಿತ್ತು ಇದರ ಬಗ್ಗೆ ಇತ್ತೀಚೆಗೆ ಶಾಸಕರಾದ ಅಶೋಕ್ ಕುಮಾರ್ ರೈ ಅವರಿಗೆ ಆಶಾ ಕಾರ್ಯಕರ್ತರು ಜೊತೆಯಾಗಿ ಮನವಿ ಸಲ್ಲಿಸಿ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ರು ಈ ಬಗ್ಗೆ ಶಾಸಕರು ತಕ್ಷಣ ಸಂಬಂಧಿಸಿದ ಅಧಿಕಾರಿಗಳಲ್ಲಿ ಮಾತನಾಡಿ 13 ಮಂದಿಯನ್ನು ಸೇವೆಗೆ ಪಡೆದುಕೊಳ್ಳುವಂತೆ ಮನವಿ ಮಾಡಿದ್ರು


ಈ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ದ.ಕ.ಜಿಲ್ಲೆಯ 45 ಮಂದಿ ಆಶಾ ಕಾರ್ಯಕರ್ತರು ಹಾಗೂ ಪುತ್ತೂರು ತಾಲೂಕಿನ 13 ಮಂದಿ ಆಶಾ ಕಾರ್ಯಕರ್ತರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿರುವುದನ್ನು ಆಶಾ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ
