Author: PrasakthaNews

Kannada news website from coastal Karnataka

ಮೃತ ಪುತ್ತೂರು ಕುದ್ಮಾರು ನಿವಾಸಿ ಕಾರ್ತಿಕ್ ಬಂಟ್ವಾಳ:- ಪಾಣೆಮಂಗಳೂರು ಪ್ಲೈಓವರ್ ನಲ್ಲಿ ಕಾರೂಂದು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಪುತ್ತೂರಿನ ಯುವಕ ಮೃತಪಟ್ಟ ಘಟನೆ ನಡೆದಿದೆ ಮೃತರನ್ನು ಪುತ್ತೂರು ಕುದ್ಮಾರು ನಿವಾಸಿ ಕಾರ್ತಿಕ್ (24) ಎಂದು ಗುರುತಿಸಲಾಗಿದೆ. ಮೂವರು ಪ್ರಯಾಣಿಸುತ್ತಿದ್ದ ಕಾರು ಬಂಟ್ವಾಳ ಪಾಣೆಮಂಗಳೂರು ಪ್ಲೈಓವರ್ ಬಳಿ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಪರಿಣಾಮ ಗಂಭೀರ ಗಾಯಗೊಂಡಿದ್ದ ಕಾರ್ತಿಕ್ ರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಯಿತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ

Read More

ತಾಯಿಯ ಹುಟ್ಟು ಹಬ್ಬದ ಕೊನೆಯ ನಂಬರನ್ನು ಪಡೆದಿದ್ದ ಅದೃಷ್ಟವಂತ ಯುವಕ ಅನಿಲ್ ಕುಮಾರ್ ಅಬುದಾಬಿ:- ಭಾರತದ 29 ವರ್ಷದ ಯುವಕನೊಬ್ಬ ಅಬುದಾಬಿಯಲ್ಕಿ 240 ಕೋಟಿ ರೂಪಾಯಿ ಜಾಕ್ ಪಾಟ್ ಲಾಟರಿ ಗೆದ್ದಿದ್ದಾನೆ. ಭಾರತದ ಅನಿಲ್ ಕುಮಾರ್ ಬೊಲ್ಲಾ ಎಂಬಾತನೇ ಆ ಅದೃಷ್ಟಶಾಲಿ ಇತ್ತೀಚಿಗೆ ಅಬುದಾಬಿಯಲ್ಲಿ ನಡೆದ ಲಕ್ಕಿ ಡೇ ಡ್ರಾನಲ್ಲಿ ಅನಿಲ್ ಕುಮಾರ್ ಗ್ರ್ಯಾಂಡ್ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ ಲಾಟರಿ ವಿಜೇತ ಅನಿಲ್ ಕುಮಾರ್ ವಿಡಿಯೋವನ್ನು ಯುಎಇ ಲಾಟರಿ ಸಂಸ್ಥೆಯು ಟ್ವೀಟರ್ ನಲ್ಲಿ ಜನರ ಜೊತೆ ಹಂಚಿಕೊಂಡಿದೆ. ನೀರಿಕ್ಷೆಯಿಂದ ಆಚರಣೆವರೆಗೆ ಎಂದು ಕಾಪ್ಸನ್ ನೀಡಲಾಗಿದೆ. ಒಂದು ಅದೃಷ್ಟದ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಅನಿಲ್ ಕುಮಾರ್ ಗೆ ಅಕ್ಟೋಬರ್ 18 ಬರೀ ಮತ್ತೊಂದು ದಿನವಲ್ಲ ಆ ದಿನ ಎಲ್ಲವನ್ನೂ ಬದಲಾಯಿಸಿಬಿಟ್ಟಿತ್ತು ಜೀವನ ಬದಲಾವಣೆ ಮತ್ತು ನೀವು ದೈರ್ಯ ಮಾಡಿ ಊಹಿಸಿಕೊಳ್ಳುವುದರಿಂದ ಏನಾಗುತ್ತೆ ಎಂಬುದರ ನೆನಪು ಕಂಗ್ರಾಜುಲೇಷನ್ ಅನಿಲ್ ಕುಮಾರ್ ಎಂದು ಯುಎಇ ಲಾಟರಿ ಸಂಸ್ಥೆ ಟ್ವೀಟ್ ಮಾಡಿದೆ ವಿಡಿಯೋದಲ್ಲಿ…

Read More

ಭಾರತೀಯ ಕ್ರಿಕೆಟ್‌ ನಲ್ಲಿ ನಡೆಯುತ್ತಿರುವ ಕೊಳಕು ರಾಜಕೀಯಕ್ಕೆ ಮತ್ತೊಬ್ಬ ಬಲಿಪಶು ಈ ಹುಡುಗ ಬೆಂಗಳೂರು:- ಟೆಸ್ಟ್ ಶತಕ ಬಾರಿಸಿದವನಿಗೆ.. ರಣಜಿ ಟ್ರೋಫಿಯಲ್ಲಿ ರನ್ ಹೊಳೆಯನ್ನೇ ಹರಿಸಿದವನಿಗೆ ಭಾರತ ‘ಎ’ ತಂಡದಲ್ಲೂ ಸ್ಥಾನ ಪಡೆಯುವ ಅರ್ಹತೆ ಇಲ್ಲವೆಂದರೆ..? ಭಾರತೀಯ ಕ್ರಿಕೆಟ್’ನಲ್ಲಿ ನಡೆಯುತ್ತಿರುವ ಕೊಳಕು ರಾಜಕೀಯಕ್ಕೆ ಮತ್ತೊಬ್ಬ ಬಲಿಪಶು ಈ ಹುಡುಗ.. 2024ರಲ್ಲಿ ಭಾರತ 46 ರನ್ನಿಗೆ ಆಲೌಟಾದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್’ನಲ್ಲಿ ಅವನು 150 ರನ್ ಬಾರಿಸಿದ್ದ. ಭಾರತ ತಂಡಕ್ಕೆ ಆಯ್ಕೆಯಾಗಿದ್ದು pure meritನೊಂದಿಗೆ. ರಣಜಿ ಕ್ರಿಕೆಟ್’ನಲ್ಲಿ ಸಾವಿರಗಟ್ಟಲೆ ರನ್’ಗಳು, ಸಾಲು ಸಾಲು ಶತಕಗಳು.. ದೊಡ್ಡ ದೊಡ್ಡ ಇನ್ನಿಂಗ್ಸ್’ಗಳೇ ಅವನಿಗೆ ಟೆಸ್ಟ್ ಕ್ಯಾಪ್ ಸಿಗುವಂತೆ ಮಾಡಿದ್ದು. ಅಂಥಾ ಆಟಗಾರನಿಗೆ ಈಗ ಭಾರತ ಎ ತಂಡದಲ್ಲೇ ಸ್ಥಾನವಿಲ್ಲವೆಂದರೆ..? ನಂಬಲಸಾಧ್ಯ.. ಉತ್ತರ ಪ್ರದೇಶ ಮೂಲದ ಮುಂಬೈ ಹುಡುಗ ಸರ್ಫರಾಜ್ ಖಾನ್’ಗೆ ಆಗಿರುವ ಅನ್ಯಾಯವನ್ನು ಮಾಜಿ ಕ್ರಿಕೆಟಿಗರು ಪ್ರಶ್ನಿಸುತ್ತಿದ್ದಾರೆ. ಇದನ್ನು “mystery’’ ಎಂದು ಕರೆದಿದ್ದಾರೆ ನೇರ ನುಡಿಗೆ ಹೆಸರಾಗಿರುವ ಸ್ಪಿನ್ ಮಾಂತ್ರಿಕ…

Read More

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಸುಧಾರಣೆ ವ್ಯವಸ್ಥೆ ಇಡೀ ರಾಷ್ಟ್ರದಲ್ಲೇ ಮಾದರಿಯಾಗಿದೆ ಎಚ್ ಎಂ ರೇವಣ್ಣ ಬಂಟ್ವಾಳ:- ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ಕಂಡಿದ್ದು ಇಡೀ ರಾಷ್ಟ್ರದಲ್ಲೇ ಮಾದರಿಯಾಗಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಅಧ್ಯಕ್ಷ ಎಚ್‌.ಎಂ.ರೇವಣ್ಣ ಹೇಳಿದರು ಬಿ.ಸಿ.ರೋಡಿನ ಅಂಬೇಡ್ಕರ್ ಭವನದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ನಡೆದ ಗೃಹಲಕ್ಷ್ಮಿ ಫಲಾನುಭವಿಗಳ ಸ್ವಸಹಾಯ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಷ್ಟ್ರದಲ್ಲೇ ಉತ್ತಮ ಜನಪರ ಕಾರ್ಯಕ್ರಮ ಕೊಟ್ಟ ರಾಜ್ಯವಿದ್ದರೆ ಅದು ದೇವರಾಜ್ ಅರಸು ಅವರಿಂದ ಹಿಡಿದು ಇಲ್ಲಿಯ ತನಕ ಆಡಳಿತ ನಡೆಸಿದ ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರ ಎಂದರು ಕಾಂಗ್ರೆಸ್ ಯಾವತ್ತೂ ಜನರ ಬದುಕಿನ ಮೇಲೆ ರಾಜಕೀಯ ಮಾಡಿದ ಹೊರತು ಭಾವನೆಗಳ ಮೇಲೆ ಮಾಡಿಲ್ಲ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿಗರು ರಾಷ್ಟ್ರದಲ್ಲಿ ಇದನ್ನೇ ಕಾಪಿ ಮಾಡುತ್ತಿದ್ದಾರೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ…

Read More

ಹಲವು ವರ್ಷಗಳಿಂದ ಕಾನ್ ಸ್ಟೇಬಲ್ ಗಳು ಧರಿಸುತ್ತಿದ್ದ ಸ್ಲೋಚ್ ಕ್ಯಾಪ್ ಬದಲು ಪಿ ಕ್ಯಾಪ್ ಆಯ್ಕೆ ಬೆಂಗಳೂರು:- 56 ವರ್ಷಗಳ ಬಳಿಕ ಪೋಲಿಸ್ ಸಿಬ್ಬಂದಿಗೆ ಹೊಸದಾಗಿ ನೀಡಲಾಗುತ್ತಿರುವ ಪಿ ಕ್ಯಾಪ್ ನಲ್ಲಿ ಬದಲಾವಣೆ ಅಷ್ಟೇ ಅಲ್ಲದೇ ದಕ್ಷತೆ ಮೆರೆಯುವ ಮೂಲಕ ವೃತ್ತಿಯಲ್ಲಿ ಬದಲಾವಣೆಯಾಗಬೇಕು ಈ ಮೂಲಕ ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ಕಡಿಮೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ಹಮ್ಮಿಕೊಂಡಿದ್ದ ಪೋಲಿಸ್ ಸಿಬ್ಬಂದಿಗೆ ಪಿ- ಕ್ಯಾಪ್ ಪರಿಚಯ ಹಾಗೂ ವಿತರಣೆ ಹಾಗೂ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆಗೆ ಚಾಲನೆ ನೀಡಿ ಅವರು ಮಾತನಾಡಿದರು ಹಲವು ವರ್ಷಗಳಿಂದ ಕಾನ್ಸ್ ಸ್ಟೇಬಲ್ ಗಳು ಧರಿಸುತ್ತಿದ್ದ ಸ್ಲೋಚ್ ಕ್ಯಾಪ್ ಬದಲು ಪಿ ಕ್ಯಾಪ್ ಆಯ್ಕೆ ಮಾಡಿದ್ದು ನಾನೇ 56 ವರ್ಷಗಳಿಂದ ಇದ್ದ ಕ್ಯಾಪನ್ನು ಇಂದು ಬದಲಾವಣೆ ಮಾಡಿದ್ದೇನೆ ದಕ್ಷತೆಯಿಂದ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತನ್ನಿ ಕ್ಯಾಪ್ ಬದಲಾವಣೆಯಷ್ಟೇ ಅಲ್ಲದೇ…

Read More

ಪುತ್ತೂರು ಸೆಶನ್ಸ್ ಕೋರ್ಟೀನಿಂದ ಮಧ್ಯಂತರ ರಿಲೀಫ್ ಮಂಗಳೂರು:- ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳುವುದು ಬೇಡ ಎಂದು ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಸೂಚಿಸಿದೆ. ಮುಸ್ಲಿಂ ಮಹಿಳೆಯರ ವಿರುದ್ದ ಅವಮಾನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಲ್ಲಡ್ಕ ಭಟ್ ವಿರುದ್ದ ಎಫ್ ಐ.ಆರ್ ದಾಖಲಾಗಿತ್ತು ಅಲ್ಲದೇ ಕೇಸು ದಾಖಲು ಹಿನ್ನಲೆಯಲ್ಲಿ ಅ.30 ರಂದು ವಿಚಾರಣೆಗೆ ಹಾಜರಾಗುವಂತೆ ಪೋಲಿಸರು ಪ್ರಭಾಕರ ಭಟ್ ಅವರಿಗೆ ನೋಟೀಸ್ ನೀಡಿದ್ದರು ಇದರ ಬೆನ್ನಲ್ಲೇ ಪುತ್ತೂರು ಸೆಶನ್ಸ್ ಕೋರ್ಟಿನಲ್ಲಿ ಮಧ್ಯಂತರ ಜಾಮೀನು ನೀಡುವಂತೆ ಪ್ರಭಾಕರ ಭಟ್ ಪರವಾಗಿ ಅಪೀಲು ಸಲ್ಲಿಸಲಾಗಿತ್ತು ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ವಿಚಾರಣೆ ದಿನಾಂಕದವರೆಗೆ ಬಲವಂತದ ಕ್ರಮ ಬೇಡವೆಂದು ಹೇಳಿ ಅ.29 ಕ್ಕೆ ಮುಂದೂಡಿದೆ ಅಲ್ಲದೇ ಪ್ರತಿವಾದಿ ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ

Read More

ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಮಂಗಳೂರು:-ಅ.27 ಸಮಾಜದಲ್ಲಿ ಒಡಕುಂಟು ಮಾಡಿ ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನ್ಮಾತಕ ಭಾಷಣವನ್ನು ಯಾರು ಮಾಡಿದರೂ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು ಕಲ್ಲಡ್ಕ ಪ್ರಭಾಕರ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿ ದ್ವೇಷಪೂರಿತ ಭಾಷಣ ಮಾಡುವವರ ಮೇಲೆ ಎಫ್.ಐ.ಆರ್ ದಾಖಲಾಗುತ್ತದೆ ಅವರು ಮಹಿಳೆಯರಿಗೆ ಅಗೌರವಾಗಿ ಭಾಷಣದಲ್ಲಿ ಮಾತನಾಡಿದ್ದಾರೆ ಎಂದರು

Read More

ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧರಿಸುತ್ತದೆ. ಮಂಗಳೂರು:- ಅ.27 ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಇದೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಭಿನ್ನ ಹೇಳಿಕೆ ನೀಡಿದ್ದಾರೆ ಈತನಕ ನಾನೇ ಐದು ವರ್ಷ ಪೂರೈಸುವೆ ಎಂದು ವಿಶ್ವಾಸದಿಂದ ನುಡಿಯುತ್ತಿದ್ದ ಸಿದ್ದರಾಮಯ್ಯ ಇದೀಗ ಹೈಕಮಾಂಡ್ ನತ್ತ ಬೊಟ್ಟು ಮಾಡಿದ್ದಾರೆ. ಅವರು ಇಂದು ಮಂಗಳೂರಿನ ವಿಮಾಣ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವಿವಿಧ ಸಚಿವರ ಹೇಳಿಕೆ ನೀಡುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾ ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿಗಳ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುದರಲ್ಲಿಯೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿಕೆ ನೀಡುವ ಮೂಲಕ ಉಬ್ಬೇರಿಸುವಂತೆ ಮಾಡಿದರು

Read More

ಸುಳ್ಳು ಕೇಸು ಹಾಕುತ್ತಿದ್ದಾರೆಂದು ತಹಶಿಲ್ದಾರ್ ಗೆ ದೂರು ಎಸ್ಐಟಿ ವಿಚಾರಣೆಗೆ ಬರದ ಹೋರಾಟಗಾರರು ಬೆಳ್ತಂಗಡಿ :- ಅ.27 ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಮರೋಡಿ ಸೇರಿದಂತೆ ಅವರ ಜೊತೆಗಿದ್ದವರ ಮೇಲೆ ವಿನಾಕಾರಣ ಸುಳ್ಳು ಕೇಸುಗಳನ್ನು ಹಾಕಿ ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿ ತಹಶಿಲ್ದಾರ್ ಗೆ ದೂರು ನೀಡಲು ಆಗಮಿಸಿದ್ದವರನ್ನು ಪೋಲಿಸರು ತಡೆದಿದ್ದರಿಂದ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಹೈಡ್ರಾಮಾ ನಡೆಯಿತು. ಇಂದು ಬೆಳಿಗ್ಗೆ 10:30 ಕ್ಕೆ ಸೌಜನ್ಯ ತಾಯಿ ಕುಸುಮಾವತಿ ಮಹಿಳಾ ಹೋರಾಟಗಾರ್ತಿ ಪ್ರಸನ್ನ ರವಿ ನೇತೃತ್ವದಲ್ಲಿ ಮನವಿ ಕೊಡುವುದಕ್ಕೆ ಸಿದ್ದತೆ ನಡೆಸಲಾಗಿತ್ತು ಇದೇ ವೇಳೆ ಸೌಜನ್ಯ ಹೋರಾಟದ ಪರವಾಗಿದ್ದವರು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಸೇರಿದ್ದಾರೆ ಆದರೆ ಬೆಳ್ತಂಗಡಿ ಠಾಣೆ ಪೋಲಿಸರು ಮನವಿ ಕೊಡುವುದಕ್ಕೆ ಅವಕಾಶ ನೀಡುವುದಿಲ್ಲ ಇಲ್ಲಿ ಜನ ಸೇರಿಸುವುದೇ ತಪ್ಪು ಎಂದು ಅವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಇದೇ ವೇಳೆ ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಪಿತೂರಿ…

Read More

ಅಯ್ಯರ್ ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ವ್ಯೆದ್ಯರ ಘೋಷಣೆ- ಸಿಡ್ನಿ:- ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಪಕ್ಕೆಲುಬಿನ ಗಾಯದಿಂದ ಆಂತರಿಕ ರಕ್ತಸ್ರಾವಕ್ಕೆ ಒಳಗಾದ ಭಾರತ ತಂಡದ ಉಪನಾಯಕ ಶ್ರೆಯಸ್ ಅಯ್ಯರ್ ಅವರನ್ನು ಸಿಡ್ನಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿ( ಐಸಿಯು ) ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂದ್ಯದ ವೇಳೆ ಬ್ಯಾಕ್ ವರ್ಡ್ ಪಾಯಿಂಟ್ ನಿಂದ ಹಿಂದಕ್ಕೆ ಓಡುತ್ತಾ ಅಲೆಕ್ಸ್ ಕ್ಯಾರಿಯನ್ನು ಔಟ್ ಮಾಡುವ ವೇಳೆ ಅಯ್ಯರ್ ಅವರ ಎಡ ಪಕ್ಕೆಲುಬಿಗೆ ತೀವ್ರ ಗಾಯವಾಗಿದೆ ಶನಿವಾರ ಆಟದ ಬಳಿಕ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಂಡದ ವ್ಯದ್ಯರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಆಂತರಿಕ ರಕ್ತಸ್ರಾವ ಪತ್ತೆಯಾಗಿದ್ದು ಸೋಂಕು ತಡೆಗಟ್ಟುವ ಸಲುವಾಗಿ ಅವರನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಅಯ್ಯರ್ ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಅವರು ಚೇತರಿಸಿಕೊಂಡ ಬಳಿಕ ಎರಡರಿಂದ ಏಳು…

Read More