Subscribe to Updates
Get the latest creative news from FooBar about art, design and business.
Author: PrasakthaNews
ಆಗಸ್ಟ್ 10 : ಗಾಂಧಿ ಗ್ರಾಮವೆಂದ ಹೆಸರುವಾಸಿಯಾಗಿರುವ ಕೊಳ್ನಾಡು ಗ್ರಾಮ ಪಂಚಾಯತಿಯಿಂದ ಎರಡು ಬಾರಿ ಸ್ಪರ್ಧಿಸಿ, ಎರಡು ಬಾರಿ ಪಂಚಾಯತ್ ಸದಸ್ಯರಾಗಿ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ, ಪಕ್ಷಕ್ಕೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ, ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಮೂರು ಬಾರಿ ನಿರ್ದೇಶಕರಾಗಿ, ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಬೋರ್ಡ್ ಮಾಜಿ ಸದಸ್ಯರಾಗಿ, ಮಾಜಿ ಕೆಡಿಪಿ ಸದಸ್ಯರಾಗಿ, ಹಲವಾರು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಕೊಳ್ನಾಡಿನ ಚಿರಪರಿಚಿತ ಜನಸೇವಕ, ಎ ಬಿ ಅಬ್ದುಲ್ ರವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಉಸ್ತುವಾರಿ ಮಂತ್ರಿಗಳಾದ ಶ್ರೀ ಬಿ ರಮಾನಾಥ್ ರೈ ಅವರ ಶಿಫಾರಸಿನ ಮೇರೆಗೆ, ಕರ್ನಾಟಕ ಸರ್ಕಾರದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನ (ಕೆಡಿಪಿ) ಸಮಿತಿಗೆ ಸದಸ್ಯರನ್ನಾಗಿ ನಾಮನಿರ್ದೇಶಿಸಿ ಆದೇಶಿಸಲಾಗಿದೆ
ಬಿ. ಸಿ. ರೋಡ್; ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ 2025ನೇ ಸಾಲಿನಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳ ಅರ್ಜಿ ಸಲ್ಲಿಕೆ ಪ್ರಾರಂಭವಾದ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ವತಿಯಿಂದ ನೋಂದಣಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಬಂಟ್ವಾಳ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಜಯಂತಿ ವಿ. ಪೂಜಾರಿ ಇವರು ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡುತ್ತಾ ಬಂಟ್ವಾಳ ತಾಲೂಕಿನ ಎಲ್ಲಾ ಅರ್ಹ ಯುವಕ ಯುವತಿಯರು ಈ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವಂತೆ ಕರೆ ನೀಡಿದರು.ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಯುವನಿಧಿ ಯೋಜನೆಯ ವಿಠ್ಠಲ್ ಹಾಗೂ ಗ್ಯಾರಂಟಿ ಯೋಜನೆಯ ತಾಲೂಕು ಅನುಷ್ಟಾನ ಸಮಿತಿಯ ಸದಸ್ಯರಾದ ಸತೀಶ್, ಸಿರಾಜ್ ಹಾಗೂ ಕೃಷ್ಣಪ್ಪ ಇವರು ಉಪಸ್ಥಿತರಿದ್ದರು.
ಬೆಂಗಳೂರು:- ಮಹದೇವಪುರ. ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಕುರಿತು ಇಂದೇ ಪುರಾವೆ ಸಲ್ಲಿಸುವಂತೆ ರಾಹುಲ್ ಗಾಂಧಿಯವರಿಗೆ ಚುನಾವಣಾ ಆಯೋಗ ಸೂಚಿಸಿದೆ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಆರೋಪಿಸಿದ್ದರು ಇದಾದ ಕೆಲವೇ ಕ್ಷಣಗಳಲ್ಲಿ ಭಾರತೀಯ ಚುನಾವಣಾ ಆಯೋಗ ರಾಹುಲ್ ಗಾಂಧಿ ಮಾಡಿರುವ ಆರೋಪಗಳ ಕುರಿತು ಪುರಾವೆಗಳನ್ನು ಸಲ್ಲಿಸುವಂತೆ ಕೇಳಿದೆ ಮತದಾರರ ಪಟ್ಟಿಯಲ್ಲಿನ ಅಕ್ರಮದ ಬಗ್ಗೆ ಮಾಡಲಾದ ಆರೋಪಗಳ ಕುರಿತು ಪುರಾವೆಗಳನ್ನು ಗುರುವಾರ ಆಗಸ್ಟ್ 7 2025ರಂದು ಪತ್ರಿಕಾಗೋಷ್ಠಿಯಲ್ಲಿ ತೋರಿಸಿದ ಪುರಾವೆಗಳೊಂದಿಗೆ ಸಲ್ಲಿಸುವಂತೆ ಕರ್ನಾಟಕ ಮುಖ್ಯ ಚುನಾವಣಾ ಆಯುಕ್ತರ ಕಚೇರಿಯು ರಾಹುಲ್ ಗಾಂಧಿಯವರಿಗೆ ಸೂಚಿಸಿದೆ ಚುನಾವಣಾ ಆಯೋಗವು ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸಿ ಚುನಾವಣಾ ಪ್ರಕ್ರಿಯ ನೈತಿಕತೆಯನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ ಕರ್ನಾಟಕದ ಮತದಾರರ ಪಟ್ಟಿಯಿಂದ ಆಯ್ದ ಭಾಗಗಳನ್ನು ಪ್ರದರ್ಶಿಸಿ ಒಂದೇ ವಿಳಾಸದಲ್ಲಿ ನೂರಾರು ಮತದಾರರು ವಿಳಾಸಗಳು ಹಾಗೂ…
ಲಯನ್ಸ್ ಅಂತಾರಾಷ್ಟ್ರೀಯ ಜಿಲ್ಲೆ 317ಡಿ ಯ ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರದ ಸದಸ್ಯೆ ಕುಸುಮ ಯು ರಾವ್ ವತಿಯಿಂದ ಶಾಶ್ವತ ಯೋಜನೆಯ ಅಡಿಯಲ್ಲಿ ಜಪ್ಪಿನ ಮೊಗರಿನಲ್ಲಿ ನಿರ್ಮಿಸಲ್ಪಟ್ಟ ನೂತನ ಮನೆಯನ್ನು ಫಲಾನುಭವಿ ಕುಟುಂಬಕ್ಕೆ ಜಿಲ್ಲಾ ಗವರ್ನರ್ ಕುಡಿಪಿ ಅರವಿಂದ್ ಶೆಣೈ ಅವರು ಹಸ್ತಾoತರಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಸಂಪುಟ ಕಾರ್ಯದರ್ಶಿ ಚಂದ್ರಹಾಸ ರೈ,ಸಂಪುಟ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, ದಾನಿ ಕುಸುಮ ಯು ರಾವ್, ಲಯನ್ಸ್ ಕ್ಲಬ್ ಮಂಗಳೂರು ಅಶೋಕ ನಗರದ ಅಧ್ಯಕ್ಷ ಪ್ರಶಾಂತ್ ಬಿ ಶೆಟ್ಟಿ, ಕಾರ್ಯದರ್ಶಿ ಬ್ರಿಜೇಶ್ ಶೆಟ್ಟಿ, ಕೋಶಾಧಿಕಾರಿ ನಿಖಿಲ್ ಶೆಟ್ಟಿ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಲಯನ್ಸ್ ಜಿಲ್ಲೆ 317 Dಯ ಜಿಲ್ಲಾ ಪದಗ್ರಹಣವು ( ಅಭಿಲಾಷ್) ಅಗೋಸ್ಟ್ 9 ರಂದು ಮಂಗಳೂರಿನಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಮಾಜಿ ರಾಜ್ಯಪಾಲರಾದ ಲಯನ್ಸ್ ಸಂಜೀತ್ ಶೆಟ್ಟಿ ಅವರು ಬಿಡುಗಡೆಗೊಳಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈಎರಡನೇ ಉಪ ರಾಜ್ಯಪಾಲ ಗೋವರ್ಧನ್ ಶೆಟ್ಟಿ ಮಾಜಿ ಗವರ್ನರ್ ರೋನಾಲ್ಡ್ ಗೋಮ್ಸ್ ಕೆಸಿ ಪ್ರಭು ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ , ಜಿಲ್ಲಾ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ ಕ್ಯಾಬಿನೆಟ್ ಕೋರ್ಡಿನೇಟ್ ನ್ಯಾನ್ಸಿ ಮಸ್ಕರನೇಸ್ ಗವರ್ನರ್ ಕೋರ್ಡಿನೇಟರ್ ಜ್ಯೋತಿ ಶೆಟ್ಟಿ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ರೈ ಇವೆಂಟ್ ಕಾರ್ಡಿನೇಟರ್ ಒಸ್ ವಲ್ಡ್ ಡಿಸೋಜ, ಮಾಜಿ ರಾಜ್ಯಪಾಲರಾದ ಭಾರತಿ ಬಿ.ಎಮ್ ಪದಗ್ರಹಣದ ಚಯರ್ ಮ್ಯಾನ್ ಶ್ರೀಧರ್ ರಾಜ್ ಶೆಟ್ಟಿ ಗೌರವಧ್ಯಕ್ಷ ಹರೀಶ್ ಆಳ್ವ ಕಾರ್ಯದರ್ಶಿ – ವಿಜಯ ವಿಷ್ಣು ಮಯ್ಯ ಕೋಶಾಧಿಕಾರಿ ಜಯಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು
ಮೂಡಿಗೆರೆ ( ಚಿಕ್ಕಮಗಳೂರು) ಹಿಂದೂವಾಗಿ, ದಲಿತೆಯಾಗಿ, ಮೂಡಿಗೆರೆಯಲ್ಲಿ ಜನಿಸಿದ್ದೇನೆ ಮುಂದೆ ಬಿಜೆಪಿಗೆ ಹೋಗ್ತಿನೊ ಕಾಂಗ್ರೆಸ್ ಪಕ್ಷದಲ್ಲಿ ಉಳಿತಿನೋ ಬಿ.ಎಸ್ ಪಿ ಅಥವಾ ಎಸ್ ಡಿ ಪಿ ಐ ಸೇರುತ್ತೇನೋ ಎಂಬ ಪ್ರಶ್ನೆಗೆ ಮೂರು ವರ್ಷ ಕಾಯೋಣ ಎಂದು ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ ಪಕ್ಷದ ಸಿದ್ದಾಂತದಲ್ಲಿ ಗೆದ್ದು ಶಾಸಕಿಯಾಗಿ ಕಾಂಗ್ರೆಸ್ ಪಕ್ಷದ ಜಾತ್ಯತೀತ ಸಿದ್ದಾಂತಗಳಿಗೆ ಅಗೌರವ ತೋರಿದ ಶಾಸಕಿ ನಯನಾ ಮೋಟಮ್ಮ ಅವರ ಹೇಳಿಕೆ ಹಾಗೂ ಪ್ರಮೋದ್ ಮುತಾಲಿಕ್ ಅವರ ಜೊತೆಗೆ ವೇದಿಕೆ ಹಂಚಿರುವ ಶಾಸಕಿಯವರ ನಡೆಕೆ ಕಾಂಗ್ರೆಸ್ ಪಕ್ಷದಲ್ಲಿ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಅವರ ಆದೇಶಗಳು ಸೂಚನೆಗಳನ್ನು ದಿಕ್ಕರಿಸಿರುವ ಶಾಸಕಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಸೂಕ್ತ ಕ್ರಮ ಕೈಗೊಂಡು ಶಾಸಕಿ ಸ್ಥಾನದಿಂದ ವಜಾ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ…
ಬಂಟ್ವಾಳ:-ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ಬ್ಲಾಕ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ಬಂಟ್ವಾಳ ಮೂಡ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಜನಜಾಗೃತಿ ಅಭಿಯಾನ ಕಾರ್ಯಕ್ರಮ ಗುರುವಾರ ಜುಲೈ 31ರಂದು ಬೆಳಿಗ್ಗೆ 10:30 ಕ್ಕೆ ಬಿಸಿರೋಡಿನ ಶ್ರೀ ರಕ್ತೇಶ್ವರಿ ಸನ್ನಿಧಿ ಮುಂಭಾಗದಲ್ಲಿ ನಡೆಯಲಿದೆಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ವಕ್ತರಾರಾದ ಸುದೀರ್ ಕುಮಾರ್ ಮುರೂಳ್ಳಿ ಮತ್ತು ಕಾಂಗ್ರೆಸ್ ರಾಜ್ಯ ವಕ್ತಾರ ಎಂಜಿ ಹೆಗಡೆ ಇವರುಗಳು ದಿಕ್ಕೂಚಿ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಮಾಜಿ ಸಚಿವ ಬಿ ರಮನಾಥ್ ರೈ ಅವರ ನೇತ್ರತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಪುಣಚ:- ಪುಣಚ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಅಜ್ಜಿನಡ್ಕದಲ್ಲಿ ಹಲವಾರು ವರ್ಷಗಳಿಂದ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಪ್ರಗತಿಪರ ಕೃಷಿಕರಾದ ಶ್ರೀ ಎನ್.ಎನ್.ನಾರಾಯಣ ಟೈಲರ್ ನಡುಸಾರು ಅವರು ನಿನ್ನೆ 27 ರಂದು ತನ್ನ ಸ್ವಗ್ರಹದಲ್ಲಿ ನಿಧನರಾದರುಮೃತರು ಈ ಹಿಂದೆ ಗ್ರಾಮ ಪಂಚಾಯತ್ ಸದಸ್ಯರಾಗಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಮಾಡುವ ಮೂಲಕ ಜನರಿಗೆ ಸದಾ ಒಲಿತನ್ನು ಮಾಡಿದ್ದರು ಕಾಂಗ್ರೆಸ್ ಪಕ್ಷದ ಸಕ್ರಿಯ ನಾಯಕರಾಗಿ ಗುರುತಿಸಿದ್ದರು ಮೃತರು ಪತ್ನಿ ಹಾಗೂ ಒರ್ವ ಪುತ್ರಿ ಇಬ್ಬರು ಪುತ್ರರನ್ನು ಅಗಲಿದ್ದಾರೆ
ಜಿಲ್ಲಾ ಗವರ್ನರ್ ಕುಡುಪಿ, ಅರವಿಂದ ಶೆಣೈ ಅವರ ನೇತೃತ್ವದಲ್ಲಿ ಜಿ ಎಲ್ ಟಿ ಕಾರ್ಡಿನೇಟರ್ ಉಮಾ ಹೆಗ್ಡೆ, ಅಧ್ಯಕ್ಷತೆಯಲ್ಲಿ, ಮಡಿಕೇರಿ, ಬೇಲೂರು, ಬಂಟ್ವಾಳ, ಸುರತ್ಕಲ್, ಹಾಗೂ ಮಂಗಳೂರಿನಲ್ಲಿ ಪಿ.ಎಸ್ ಟಿ ಸೆಮಿನಾರ್ ಯಶಸ್ವಿಯಾಗಿ ನಡೆಯಿತು. ಮಂಗಳೂರಿನ ಸೆಮಿನಾರನ್ನು ಮಾಜಿ ರಾಜ್ಯಪಾಲ ಸಂಜಿತ್ ಶೆಟ್ಟಿ ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ದ್ವೀತಿಯ ಉಪ ರಾಜ್ಯಪಾಲ ಗೋವರ್ಧನ್ ಶೆಟ್ಟಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ತರಬೇತುದಾರರಾಗಿ ಮಾಜಿ ರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ, ಮೇಲ್ವಿನ್ ಡಿಸೋಜ, ರೊನಾಲ್ಡ್ ಗೋಮ್ಸ್, ಜಗದೀಶ್ ಎಡಪಡಿತಾಯ, ರಮಾನಂದ ನೂಜಿ ಪಾಡಿ, ವಿಜಯ ವಿಷ್ಣು ಮಯ್ಯ, ಲೋಕೇಶ್ ಶೆಟ್ಟಿ, ಅನಿಲ್ ಕುಮಾರ್, ವೆಂಕಟೇಶ್ ಹೆಬ್ಬಾರ್,ಚಂದ್ರಹಾಸ್ ರೈ , ಸೀಮಾ ಮಯ್ಯ, ಗೀತಾ ರಾವ್, ಮುಂತಾದವರು ಭಾಗವಹಿಸಿದ್ದರು. ಪದಾಧಿಕಾರಿಗಳಾದ ಕಾರ್ಯದರ್ಶಿ ಚಂದ್ರೇಗೌಡ, ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ, ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ, ಕ್ಯಾಬಿನೆಟ್ ಕಾರ್ಡಿನೇಟರ್ ನಾನ್ಸಿ ಮಸ್ಕರೇಂಜಸ್, ಡಿಜಿ ಕಾರ್ಡಿನೇಟರ್ ಜ್ಯೋತಿ ಶೆಟ್ಟಿ, , ಹಾಗೂ ಆರ್ ಸಿ,,ZC ,ಕ್ಯಾಬಿನೆಟ್ ಸದಸ್ಯರುಗಳು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ಕ್ಲಬ್ ಗಳಿಗೆ…
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ಹಾಗೂ TOP & TOP ಚಾರಿಟೇಬಲ್ ಟ್ರಸ್ಟ್ ರಿ ಕುಡ್ತಮುಗೇರು ಇದರ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ* ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡ ರಾಷ್ಟ್ರ ನಾಯಕರಾದ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ಅಬ್ದುಲ್ ಕಲಾಂ ಆಜಾದ್, ಭಗತ್ ಸಿಂಗ್, ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್, ಮಾಜಿ ರಾಷ್ಟ್ರಪತಿಗಳಾದ ಡಾ. ಎಪಿಜೆ ಅಬ್ದುಲ್ ಕಲಾಂ, ಮೊದಲಾದ ನಾಯಕರಲ್ಲಿ ಯಾವುದಾದರೂ ಒಬ್ಬ ನಾಯಕರ ಭಾವಚಿತ್ರವನ್ನು, A4 ಶೀಟ್ ಬಿಳಿ ಹಾಳೆಯಲ್ಲಿ ವಿದ್ಯಾರ್ಥಿ, ಸ್ವಕೈಯಿಂದ ರಚಿಸಿ, ಕೆಳಗೆ ನೀಡಲಾಗುವ ವಿಳಾಸಕ್ಕೆ ಪೋಸ್ಟ್ ಮಾಡಬೇಕು. ಅತ್ಯುತ್ತಮ ಚಿತ್ರಕ್ಕೆ ಪ್ರಥಮ ದ್ವಿತೀಯ ತೃತೀಯ, ನಗದು ಹಾಗೂ ಶಾಶ್ವತ ಫಲಕವನ್ನು ನೀಡಲಾಗುವುದು. ಹಾಗೂ 10 ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಆಗಸ್ಟ್ 10 ರ ಒಳಗೆ ನೀವು ಬಿಡಿಸಿದ ಚಿತ್ರ ಕೆಳಗೆ ಕಾಣಿಸುವ ವಿಳಾಸಕ್ಕೆ ತಲುಪಬೇಕು. ವಿದ್ಯಾರ್ಥಿಯು ಕಲರ್ ಅಥವಾ ಪೆನ್ಸಿಲ್…


