Subscribe to Updates
Get the latest creative news from FooBar about art, design and business.
Author: PrasakthaNews
ಬಂಟ್ವಾಳ:- ಪುರಸಭಾ ಸದಸ್ಯ, ದಲಿತ ಮುಖಂಡ ಬಂಟ್ವಾಳ ಸಮೀಪದ ಚೆಂಡ್ತಿಮಾರ್ ನಿವಾಸಿ ಜನಾರ್ದನ ಚೆಂಡ್ತಿಮಾರ್ ಅವರು ಇಂದು ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು ಮಾಜಿ ಸಚಿವ ಬಿ ರಮನಾಥ್ ರೈ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ಇವರು ಇತ್ತೀಚಿನ ಕೆಲ ಸಮಯಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು ರಾಜಕೀಯ ಸಾಮಾಜಿಕ ಚಟುವಟಿಕೆಗಳಿಂದ ದೂರವಿದ್ದರು ಮೃತರು ಪತ್ನಿ ಒರ್ವ ಪುತ್ರ ಸಹಿತ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ ಇವರ ನಿಧನಕ್ಕೆ ಮಾಜಿ ಸಚಿವ ಬಿ ರಮನಾಥ್ ರೈ, ಪುರಸಭಾ ಅಧ್ಯಕ್ಷ ವಾಸು ಪೂಜಾರಿ , ಸಹಿತ ಪುರಸಭಾ ಸದಸ್ಯರುಗಳು ಹಾಗೂ ಹಲವು ಮುಖಂಡರು ಸಂತಾಪ ಸೂಚಿಸಿದ್ದಾರೆ
ಬೆಂಗಳೂರು:- ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣ ಸಂಬಂಧ ಎಸ್ ಐಟಿ ರಚಿಸಿ ಮತ್ತು ಈವರೆಗೆ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತೀವ್ರ ಕ್ರಮಕೈಗೊಳ್ಳಿ ಎಂದು ನಟ ಪ್ರಕಾಶ್ ರಾಜ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ ಧರ್ಮಸ್ಥಳ ದೂರು ಸಂಬಂಧಿಸಿದಂತೆ ಪೋಲಿಸರು ತನಿಖೆ ನಡೆಸುತ್ತಿದ್ದು ವರದಿ ಬಂದ ನಂತರ ಏನು ಮಾಡಬೇಕು ನೋಡುತ್ತೇವೆ ಅಗತ್ಯ ಬಿದ್ದರೆ ಎಸ್ ಐಟಿ ರಚನೆ ಮಾಡಲು ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ ಜೊತೆಗೆ ಈಗಾಗಲೇ ತನಿಖೆಯನ್ನು ಮಾಡಲು ಎಸ್ ಐಟಿ ತಂಡವನ್ನು ರಚನೆ ಮಾಡಿದ್ದಾರೆ
ಬೆಂಗಳೂರು:- ಕೆಲದಿನಗಳಿಂದ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿರುವ ಧರ್ಮಸ್ಥಳ ಗ್ರಾಮದ ಶವಗಳ ಪ್ರಕರಣದ ತನಿಖೆಗೆ ಇದೀಗ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ಎಸ್ ಐಟಿ ರಚಿಸಿದೆ ಡಾ|| ಪ್ರಣವ ಮೊಹಾಂತಿ ಅವರ ನೇತ್ರತ್ವದಲ್ಲಿ ನಾಲ್ಕು ಅಧಿಕಾರಿಗಳ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂ.ಎನ್ ಅನುಚೇತ್ ಸೌಮ್ಯಲತಾ ಮತ್ತು ಜಿತೇಂದ್ರ ಕುಮಾರ್ ದಯಾಮ ಅವರು ಈ ತಂಡದಲ್ಲಿದ್ದಾರೆ ರಾಜ್ಯ ಸರ್ಕಾರದ ಈ ನಡೆ ತೀವ್ರ ಕುತೂಹಲ ಕೆರಳಿಸಿದೆ ತನಿಖೆ ಯಾವ ರೀತಿ ಸಾಗಲಿದೆ ಸಮಗ್ರ ಚಿತ್ರಣ ತನಿಖೆಯ ನಂತರ ಬೆಳಕಿಗೆ ಬರಲಿದೆ
ಬಂಟ್ವಾಳ:- ಪೋಲಿಸ್ ಉಪನೀರಿಕ್ಷರುಗಳ ವರ್ಗಾವಣೆ ಆದೇಶವನ್ನು ಸರಕಾರ ಹೊರಡಿಸಿದ್ದು ಬಂಟ್ವಾಳ ನಗರ ಪೋಲಿಸ್ ಠಾಣೆಯ ಎಸೈ ಆಗಿ ಕಾರ್ಕಳ ಮೂಲದ ದಕ್ಷ ಪ್ರಾಮಣಿಕ ಜನಸ್ನೇಹಿ ಅಧಿಕಾರಿ ಸಂದೀಪ್ ಶೆಟ್ಟಿ ಅವರನ್ನು ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ ಸಂದೀಪ್ ಶೆಟ್ಟಿಯವರು ಈ ಹಿಂದೆ ವಿಟ್ಲ ಪೋಲಿಸ್ ಠಾಣೆಯ ಎಸೈ ಆಗಿ ಜನಸ್ನೇಹಿ ಪೋಲಿಸ್ ಅಧಿಕಾರಿಯಾಗಿ ವಿಟ್ಲದಲ್ಲಿ ಕಾರ್ಯನಿರ್ವಹಿಸಿ ಜನರ ಪ್ರಶಂಸನೀಯಗೆ ಪಾತ್ರರಾಗಿದ್ದರು..
ಬಂಟ್ವಾಳ:- ಪೋಲಿಸ್ ಉಪನೀರಿಕ್ಷಕರುಗಳ ವರ್ಗಾವಣೆ ಆದೇಶವನ್ನು ಸರಕಾರ ಹೊರಡಿಸಿದ್ದು ಬಂಟ್ವಾಳ ನಗರ ಪೋಲಿಸ್ ಠಾಣೆಯ ಎಸ್ ಐ ಆಗಿದ್ದ ರಾಮಕೃಷ್ಣ ಅವರನ್ನು ವಿಟ್ಲ ಪೋಲಿಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ ಬಂಟ್ವಾಳ ನಗರ ಪೋಲಿಸ್ ಠಾಣೆಗೆ ಸ್ಥಳ ನೀರಿಕ್ಷಣೆಯಲ್ಲಿದ್ದ ಸಂದೀಪ್ ಶೆಟ್ಟಿ ಹಾಗೂ ಪೂಂಜಾಲಕಟ್ಟೆ ಎಸ್ ಐ ಆಗಿದ್ದ ನಂದಕುಮಾರ್ ಅವರು ಪೋಲಿಸ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆ ಆದ ಹಿನ್ನಲೆಯಲ್ಲಿ ಖಾಲಿಯಾಗಿದ್ದ ಪೂಂಜಾಲಕಟ್ಟೆ ಠಾಣೆಗೆ ಚಿಕ್ಕಮಗಳೂರಿನಿಂದ ರಾಜೇಶ್ ಕೆವಿ, ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಸಂದೀಪ್ ಶೆಟ್ಟಿಯವರು ಈ ಹಿಂದೆ ವಿಟ್ಲ ಹಾಗೂ ರಾಜೇಶ್ ಕೆವಿ ಅವರು ಬಂಟ್ವಾಳ ಟ್ರಾಫಿಕ್ ಹಾಗೂ ಉಪ್ಪಿನಂಗಡಿಯಲ್ಲಿ ಕರ್ತವ್ಯ ಮಾಡಿ ಜಿಲ್ಲೆಯ ಆನುಭವಿ ಅಧಿಕಾರಿಗಳಾಗಿದ್ದಾರೆ
ಕುಡ್ತಮುಗೇರು:- ಕೊಳ್ನಾಡು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಶ್ರೀ ಪವಿತ್ರ ಪೂಂಜಾ ಹಾಗೂ ಟಾಪ್ & ಟಾಪ್ ಚಾರಿಟೇಬಲ್ ಟ್ರಸ್ಟ್ ರಿ ಕುಡ್ತಮುಗೇರು ಇದರ ಸಹಕಾರದಿಂದ ಇಂದು ಬೆಳಿಗ್ಗೆ- 11 ರಿಂದ ಸಾಯಂಕಾಲ- 5:30 ರವರೆಗೆ ಕುಡ್ತಮುಗೇರು ಜಂಕ್ಷನ್ ನಲ್ಲಿ ಕಾಮತ್ ಅಪ್ಟಿಕಲ್ಸ್ ಇದರ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.ಶಿಬಿರದಲ್ಲಿ 75 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು
ಪುತ್ತೂರು:- ಪುತ್ತೂರು ತಾಲೂಕಿನ 13 ಮಂದಿ ಆಶಾ ಕಾರ್ಯಕರ್ತರನ್ನು ಆರ್ ಸಿ ಎಚ್ ಪೋರ್ಟಲ್ ನಿಂದ ಹೊರ ತೆಗೆದಿರುವುದರಿಂದ ಅವರಿಗೆ ಆಶಾ ಕಾರ್ಯಕರ್ತರಾಗಿ ಮುಂದುವರಿಸಲು ಸಮಸ್ಯೆಯಾಗಿತ್ತು ಇದರ ಬಗ್ಗೆ ಇತ್ತೀಚೆಗೆ ಶಾಸಕರಾದ ಅಶೋಕ್ ಕುಮಾರ್ ರೈ ಅವರಿಗೆ ಆಶಾ ಕಾರ್ಯಕರ್ತರು ಜೊತೆಯಾಗಿ ಮನವಿ ಸಲ್ಲಿಸಿ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ರು ಈ ಬಗ್ಗೆ ಶಾಸಕರು ತಕ್ಷಣ ಸಂಬಂಧಿಸಿದ ಅಧಿಕಾರಿಗಳಲ್ಲಿ ಮಾತನಾಡಿ 13 ಮಂದಿಯನ್ನು ಸೇವೆಗೆ ಪಡೆದುಕೊಳ್ಳುವಂತೆ ಮನವಿ ಮಾಡಿದ್ರುಈ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ದ.ಕ.ಜಿಲ್ಲೆಯ 45 ಮಂದಿ ಆಶಾ ಕಾರ್ಯಕರ್ತರು ಹಾಗೂ ಪುತ್ತೂರು ತಾಲೂಕಿನ 13 ಮಂದಿ ಆಶಾ ಕಾರ್ಯಕರ್ತರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿರುವುದನ್ನು ಆಶಾ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ
ಕುಡ್ತಮುಗೇರು:- ಕೊಳ್ನಾಡು ಗ್ರಾಮದ ಕುಡ್ತಮುಗೇರುನಲ್ಲಿರುವ ಅಂಚೆ ಕಚೇರಿಯು ಕಳೆದ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿದೆ ಈ ಕಟ್ಟಡಕ್ಕೆ ಅಗತ್ಯವಾಗಿ ಬೇಕಾಗಿದ್ದು ವಿದ್ಯುತ್ ಸಂಪರ್ಕ ಇಲ್ಲಿನ ಬಹುಕಾಲದ ಬೇಡಿಕೆಯನ್ನು ಜನಸಾಮಾನ್ಯರ ಕಷ್ಟಗಳಿಗೆ ನೆರವಾಗಲು ಈ ಭಾಗದ ಮಾಜಿ ಪಂಚಾಯತ್ ಸದಸ್ಯರಾದ ಪವಿತ್ರ ಪೂಂಜಾ ಅವರು ಅಂಚೆ ಕಚೇರಿಗೆ ಬಹುಕಾಲದ ಬೇಡಿಕೆಯಾಗಿ ವಿದ್ಯುತ್ ಸಂಪರ್ಕಕ್ಕೆ ಬೇಕಾಗಿದ್ದ ಸರಿಸುಮಾರು 15000 ಹಣವನ್ನು ತಾವೇ ಭರಿಸಿ ಕತ್ತಲ ಕೋಣೆಗೆ ಬೆಳಕು ನೀಡುವಲ್ಲಿ ಯಶಸ್ವಿಯಾಗಿದ್ದಾರೆಪವಿತ್ರ ಪೂಂಜಾರವರ ಸಾಮಾಜಿಕ ಸೇವೆಗೆ ವ್ಯಾಪಕ ಅಭಿನಂದನೆ ವ್ಯಕ್ತವಾಗಿದೆ
ತಲಕ್ಕಿ:- ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ಆಶ್ರಯದಲ್ಲಿ ಸಾಲೆತ್ತೂರು ವಲಯ ಕಾಂಗ್ರೆಸ್ ಸಮಿತಿ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ಸಹಭಾಗಿತ್ವದಲ್ಲಿ ಮಾಜಿ ಸಚಿವರಾದ ಬಿ.ರಮಾನಾಥ ರೈ ಯವರ ನೇತೃತ್ವದಲ್ಲಿ ತಲಕಿ ಜಂಕ್ಷನ್ ನಲ್ಲಿ ಜನಜಾಗೃತಿ ಅಭಿಯಾನ ಕಾರ್ಯಕ್ರಮವು ನಡೆಯಿತು. ಈ ಸಭೆಯನ್ನು ಉದ್ದೇಶಿಸಿ ಮಾಜಿ ಸಚಿವರಾದ ಬಿ ರಮನಾಥ್ ರೈ ಅವರು ಮಾತನಾಡಿ ಬಿಜೆಪಿ ಎಂಬುದು ಸುಳ್ಳಿನ ಪಕ್ಷವಾಗಿ ಜಾತಿ ಧರ್ಮಗಳ ನಡುವೆ ಕಂದಕ ಉಂಟು ಮಾಡಿ ರಾಜಕೀಯ ಲಾಭ ಪಡೆಯುವುದು ಅಪಪ್ರಚಾರ ಮಾಡುವುದೇ ಬಿಜೆಪಿಯ ಜಾಯಮಾನವಾಗಿದೆ ಎಂದು ನುಡಿದರು ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತ್ರತ್ವದಲ್ಲಿ ಐದು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ ಮತ್ತು ರಾಜ್ಯದ ಉದ್ದಗಲಕ್ಕೂ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನಪರ ಸರಕಾರವಾಗಿ ಕಾಂಗ್ರೆಸ್ ಪಕ್ಷ ಗುರುತಿಸಿದೆ ಕಾಂಗ್ರೆಸ್ ಪಕ್ಷದ ಜನಪ್ರಿಯತೆಯನ್ನು ಸಹಿಸದೇ ಬಿಜೆಪಿಗರು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇತ್ತೀಚಿಗೆ…
ಪುತ್ತೂರು:-ಜುಲೈ 14 ರಂದು ಪುತ್ತೂರು ಬೊಳುವಾರು ಮಸೀದಿಗೆ ನುಗ್ಗಿದ ಹಾಸನ ಮೂಲದ ರಾಜು ಎಂಬಾತ ಕೈಯಲ್ಲಿ ತಲವಾರು ಹಿಡಿದು ಬೆದರಿಕೆ ಒಡ್ಡಿರುವ ಘಟನೆ ಅತ್ಯಂತ ಖಂಡನೀಯವಾಗಿದೆ ಮತ್ತು ಈ ವ್ಯಕ್ತಿಯ ಹಿನ್ನಲೆ ಏನು ಈತನ ಉದ್ದೇಶ ಏನು ಎಂಬುದರ ಬಗ್ಗೆ ಪೋಲಿಸ್ ಇಲಾಖೆಯು ಉನ್ನತ ಮಟ್ಟದ ತನಿಖೆ ಮಾಡುವ ಮೂಲಕ ಇದರ ಹಿಂದಿನ ಸತ್ಯಾಸತ್ಯೆಯನ್ನು ಬಯಲಿಗೆ ತರಬೇಕು ಎಂದು ರಾಜೀವ್ ಗಾಂಧಿ ಜ್ಯೋತಿ ಯಾತ್ರ ಕಮಿಟಿಯ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ ಅವರು ಪೋಲಿಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ ಪತ್ರಿಕಾ ಹೇಳಿಕೆ ಮೂಲಕ ಮಾತನಾಡಿದ ಹನೀಫ್ ಬಗ್ಗುಮೂಲೆ ಅವರು ಇತ್ತೀಚಿನ ದಿನಗಳಲ್ಲಿ ನಡೆದಿರುವ ಧ್ವೇಷ ಭಾಷಣಗಳಿಂದ ಪ್ರೇರಿತಗೊಂಡು ಇಂತಹ ಕೆಲಸ ಕಾರ್ಯಕ್ಕೆ ಈ ವ್ಯಕ್ತಿ ಮುಂದಾಗಿರುವ ಬಗ್ಗೆ ಸಾರ್ವಜನಿಕವಾಗಿ ಅನುಮಾನವಿದ್ದು ತಕ್ಷಣ ಇದರ ಬಗ್ಗೆ ಕೂಲಂಕಷವಾಗಿ ಪೋಲಿಸ್ ಇಲಾಖೆ ತನಿಖೆ ನಡೆಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ


