Author: PrasakthaNews

Kannada news website from coastal Karnataka

ಬಂಟ್ವಾಳ : ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು, ತಾಲೂಕು ಪಂಚಾಯತ್ ಬಂಟ್ವಾಳ ವತಿಯಿಂದ ಇರ್ವತ್ತೂರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಪಂಚ ಗ್ಯಾರಂಟಿ ಸದಸ್ಯರಾದ ಸುದೀರ್ ಶೆಟ್ಟಿ ರವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ಕೊಳಲಬಾಕಿಮಾರು ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. *ಪರಿಸರಕ್ಷಣೆಯಲ್ಲಿ ಸ್ಥಳೀಯ ಸಂಸ್ಥೆಗಳು ಮುಖ್ಯ ಪಾತ್ರ ವಹಿಸಬೇಕು : ಜಯಂತಿ ವಿ.ಪೂಜಾರಿ* ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ಮಾತನಾಡಿ ಪರಿಸರ ರಕ್ಷಣೆ ನಮ್ಮೆಲ್ಲರ ಹೋಣೆ,ಪ್ರತಿ‌ ಮನೆಯಲ್ಲಿ ವನಮಹೋತ್ಸವ ನಡೆಯಬೇಕು,ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಸಂಘ ಸಂಸ್ಥೆಗಳು ತಮ್ಮ ಸುತ್ತ ಮುತ್ತಲಿನ ಪರಿಸರಲ್ಲಿ ಗಿಡ ನೆಟ್ಟು ಪರಿಸರದ ರಕ್ಷಣೆ ಮಾಡಬೇಕು,ಪಂಚ ಗ್ಯಾರಂಟಿ ವತಿಯಿಂದ ಇನ್ನಷ್ಟು ಕಾರ್ಯಕ್ರಮಗಳನ್ನು ಅಯೋಜನೆ ಮಾಡಲಾಗುವುದು ಎಂದರು.*ಪರಿಸರ ರಕ್ಷಣೆ ನಮ್ಮ ಹೊಣೆ  ಸಚಿನ್ ಕುಮಾರ್* ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ತಾಲೂಕು ಕಾರ್ಯನಿರ್ವಹಣಾಧಿಕಾರಿ ಪರಿಸರ ರಕ್ಷಣೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಈ ಕರ್ತವ್ಯವನ್ನು…

Read More

ಮಂಗಳೂರು:- ಕೆಂಪುಕಲ್ಲು ಗಣಿಗಾರಿಕೆಯ ಗೊಂದಲ ನಿವಾರಣೆಗಾಗಿ ಮರಳು ವಿತರಣೆ ಮಾದರಿಯಲ್ಲಿರುವ ಸ್ಯಾಂಡ್ ಬಜಾರ್ ಆ್ಯಪ್ ನಂತೆ ಕೆಂಪು ಕಲ್ಲು ಖರೀದಿಗೂ ಪ್ರತ್ಯೇಕ ಆ್ಯಪ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ರಾಜ್ಯ ವಿಧಾನ ಸಭೆಯ ಸ್ಪೀಕರ್ ಯುಟಿ ಖಾದರ್ ತಿಳಿಸಿದ್ದಾರೆ ಈ ಹಿಂದೆ ಜಾರಿಗೆ ತರಲಾಗಿದ್ದ ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ಸಿಗುತ್ತಿತ್ತು ಅದೇ ಮಾದರಿಯಲ್ಲಿ ಕೆಂಪು ಕಲ್ಲು ಕೂಡ ಜನಸಾಮಾನ್ಯರಿಗೆ ಸಿಗಬೇಕು ಈ ನಿಟ್ಟಿನಲ್ಲಿ ಕೆಂಪು ಕಲ್ಲು ಖರೀದಿಗೂ ಪ್ರತ್ಯೇಕ ಆ್ಯಪ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಸರಕಾರಿ ದರದಲ್ಲಿ ಕೆಂಪು ಕಲ್ಲನ್ನು ಅಗತ್ಯ ಇರುವವರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯು ನೂತನ ಆ್ಯಪ್ ಮೂಲಕ ಆಗಲಿದೆ ಜಿಲ್ಲೆಯಲ್ಲಿ ಕೆಂಪು ಕಲ್ಲು ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರೊಂದಿಗೆ 2 ನೇ ಹಂತದ ಸಭೆ ನಡೆಸಲಾಗಿದೆ ಎಂದರು

Read More

ಮಂಗಳೂರು:- ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಟವಾಗಿ ಕಟ್ಟುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ರೆಡ್ಡಿಯವರು ಉತ್ಸುಕರಾಗಿದ್ದು ಇದರ ಭಾಗವಾಗಿ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷಕ್ಕೆ ಎರಡು ನೂತನ ಅಧ್ಯಕ್ಷರುಗಳಾಗಿ ಶ್ರೀಮತಿ ಉಷಾ ಅಂಚನ್ ಹಾಗೂ ಕುಮಾರಿ ಅಪ್ಪಿ ಅವರನ್ನು ನೇಮಕ ಮಾಡಲಾಗಿದೆ. ಮಂಗಳೂರು ರೂರಲ್ ಅಧ್ಯಕ್ಷರಾಗಿ ಶ್ರೀಮತಿ ಉಷಾ ಅಂಚನ್ ಹಾಗೂ ಮಂಗಳೂರು ಅರ್ಬನ್ ಅಧ್ಯಕ್ಷರಾಗಿ ಕುಮಾರಿ ಅಪ್ಪಿ ಅವರು ಇನ್ನೂ ಮುಂದೆ ಕಾರ್ಯ ನಿರ್ವಹಿಸಲಿದ್ದಾರೆ  ರೂರಲ್ ನೂತನ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್ ಅವರು ಈ ಹಿಂದೆ ತಾಲೂಕು ಪಂಚಾಯತ್ ಸದಸ್ಯರಾಗಿ ಹಲವಾರು ಮಹತ್ವದ ಸ್ಥಾನ ಮಾನಗಳನ್ನು ಕಾಂಗ್ರೆಸ್ ಪಕ್ಷದಲ್ಲಿ ಪಡೆಯುವ ಮೂಲಕ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದಾರೆ ಇವರು ಬಿಲ್ಲವ ಸಮುದಾಯದ ನಾಯಕಿಯಾಗಿ ಗುರುತಿಸಿದ್ದಾರೆ. ಅರ್ಬನ್ ನೂತನ ಅಧ್ಯಕ್ಷರಾದ ಕುಮಾರಿ ಅಪ್ಪಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಹಂತ ಹಂತವಾಗಿ ಕೆಲಸ ಮಾಡಿದವರು ಜೊತೆಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ 5…

Read More

ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ ಮತ್ತು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳು ಜುಲೈ 25 ರಂದು ಶುಕ್ರವಾರ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ

Read More

ವಿಟ್ಲ:- ಯುನೈಟೆಡ್ ಎಂಪರ್ಮೆಂಟ್ ಅಸೋಸಿಯೇಷನ್ ವಿಟ್ಲ ವಲಯಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತುಸಮಿತಿಯ ನೂತನ ಗೌರವಧ್ಯಕ್ಷರಾಗಿ ಅಕ್ಬರ್ ಕಂಬಳಬೆಟ್ಟು, ಅಧ್ಯಕ್ಷರಾಗಿ ಶಫೀಕ್ ಎಂ.ಎಸ್, ಉಪಾಧ್ಯಕ್ಷರುಗಳಾಗಿ ಇಸ್ಮಾಯಿಲ್ ಶಿತಲ್, ಪಹಾದ್ ಕಂಬಳಬೆಟ್ಟು, ಶಾಫಿ ಸಾಲೆತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಪೊನ್ನೊಟು, ಜೊತೆ ಕಾರ್ಯದರ್ಶಿಯಾಗಿ ಜಲೀಲ್ ಮಂಗಿಳಪದವು, ಆಸೀಫ್ ಪೆರುವಾಯಿ, ಬಶೀರ್ ಬದಿಯಾರ್ ಲತೀಫ್ ಪುಣಚ, ಕೋಶಾಧಿಕಾರಿಯಾಗಿ ತೌಸೀಫ್ ಎಂ.ಜಿ , ಸಂಘಟನಾ ಕಾರ್ಯದರ್ಶಿಯಾಗಿ ಸಮದ್ ಮೇಗಿನಪೇಟೆ, ಇಂತಿಯಾಝ್ ಬೊಬ್ಬೇಕೆರಿ, ಹಂಝ ವಿಕೆಎಂ, ಮಾಧ್ಯಮ ಕಾರ್ಯದರ್ಶಿಯಾಗಿ ರಹೀಮ್ ಕುಂಡಡ್ಕ, ಶಿಫಾನ್ ಪುಣಚ, ಹರ್ಷದ್ ಕುಕ್ಕಿಲ, ಶಮೀರ್ ಇವರನ್ನು ಆಯ್ಕೆ ಮಾಡಲಾಯಿತು

Read More

ಬೆಳ್ತಂಗಡಿ’:- ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಶೋಭ ನಾರಾಯಣ ಗೌಡ ಇವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶ್ರೀಮತಿ ಶಾಲೆಟ್ ಪಿಂಟೋ ನೇಮಕ ಮಾಡಿ ಆದೇಶಿಸಿದ್ದಾರೆ.ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆದೇಶ ಪತ್ರವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಹಸ್ತಾಂತರಿಸಿದರುಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ, ನಗರ ಸಮಿತಿಯ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ನ, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಝಿನತ್ ಉಜಿರೆ ಸದಸ್ಯರಾದ ಶ್ರೀಮತಿ ಸುಚಿತ್ರ ಕೊಲ್ಲಾಜೆ ವಿಜಯಲಕ್ಷ್ಮಿ ನಿಡ್ಲೆ ಉಪಸ್ಥಿತರಿದ್ದರು

Read More

ಬಂಟ್ವಾಳ:- ದಿನಾಂಕ 23/07/2025 ರಂದು ಬಂಟ್ವಾಳ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯು ತಾಲೂಕು ಪಂಚಾಯತಿನ 2ನೇ ಮಹಡಿಯಲ್ಲಿರುವ ಸಮಿತಿಯ ಕಚೇರಿಯಲ್ಲಿ ಪಂಚ ಗ್ಯಾರಂಟಿ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಯಂತಿ ವಿ. ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.  ಈ ಹಿಂದಿನ ಸಭೆಯಲ್ಲಿ ಫ್ಲೈಓವರ್ ನಿರ್ಮಾಣದ ಬಳಿಕ ಉಪ್ಪಿನಂಗಡಿಯಿಂದ ಬರುವ ಬಸ್ಸುಗಳು ಮಾಣಿ ಜಂಕ್ಷನ್ಗೆ ಬರುವ ಬಗ್ಗೆ ನಿರ್ಣಯವನ್ನು ಕೈಗೊಂಡಿದ್ದು, ಸದ್ರಿ ನಿರ್ಣಯಕ್ಕೆ ಸ್ಪಂದಿಸಿದ ಇಲಾಖೆಯು ಈ ಹಿಂದಿನಂತೆ ಮಾಣಿ ಬಸ್ಸು ತಂಗುದಾಣದಲ್ಲಿ ಬಸ್ಸು ನಿಲುಗಡೆಗೊಳಿಸುತ್ತಿದೆ ಎಂದು ಸಂಬಂಧಿಸಿದ ಇಲಾಖಾಧಿಕಾರಿಯವರು ಸಭೆಗೆ ತಿಳಿಸಿದರು.  ದಿನಾಂಕ: 25/07/2025 ರಂದು ಪೂರ್ವಾಹ್ನ 11.00 ಗಂಟೆಗೆ ಮೂಡುಪಡುಕೋಡಿ ಗ್ರಾಮದ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಕೊಳಲ ಬಾಕಿಮಾರು ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಮತ್ತು ಅದೇ ದಿನ ಅಪರಾಹ್ನ 1.30 ಗಂಟೆಗೆ ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವು ಇಲ್ಲಿ ಮಾದಕ ದ್ರವ್ಯ ವ್ಯಸನ ಮುಕ್ತ ಸಮಾಜ ಜನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.  ಹಾಗೂ ದಿನಾಂಕ: 02-08-2025…

Read More

ಮಂಗಳೂರು:- ಲಯನ್ಸ್ 317 ಡಿ ಜಿಲ್ಲೆಯ ಗವರ್ನರ್ ಕುಡ್ಪಿ ಅರವಿಂದ ಶೆಣೈ ಅವರು ಮಂಗಳೂರು ಲಯನ್ಸ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು ಲಯನ್ಸ್ 317 ಡಿ ಜಿಲ್ಲೆ ಮಾಜಿ ಗವರ್ನರ್ ಕೆ.ಸಿ ಪ್ರಭು ಮತ್ತು ಕಿಶೋರ್ ರಾವ್ ಉದ್ಘಾಟಿಸಿದರು ಮಾಜಿ ಗವರ್ನರ್ ಸಂಜೀತಾ ಶೆಟ್ಟಿ ಮಾಜಿ ಗವರ್ನರ್ ಭಾರತೀ ಬಿ.ಎಂ ದ್ವೀತಿಯ ಉಪಜಿಲ್ಲಾ ಗವರ್ನರ್ ಗೋವರ್ಧನ್ ಶೆಟ್ಟಿ, ಸಂಪುಟ ಕಾರ್ಯದರ್ಶಿ ಚಂದ್ರೆಗೌಡ ಕಾರ್ಯದರ್ಶಿ ಬಾಲಕೃಷ್ಣ ಹೆಗ್ಡೆ ಕ್ಯಾಬಿನೆಟ್ ಸಂಯೋಜಕಿ ನಾನ್ಸಿ ಮಸ್ಕರನೇಸ್ ಡಿಜಿ ಸಂಯೋಜಕಿ ಜ್ಯೋತಿ ಎಸ್ ಶೆಟ್ಟಿ ಜಿಲ್ಲಾ ಪಿ.ಆರ್ ಸುದರ್ಶನ ಪಡಿಯಾರ್ ವಿಟ್ಲ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ರೈ ಜಿಲ್ಲೆಯ ವಿವಿಧ ಲಯನ್ಸ್ ಕ್ಲಬ್ ಗಳ ಕ್ಯಾಬಿನೆಟ್ ಸದಸ್ಯರು ಪದಾಧಿಕಾರಿಗಳು ಭಾಗವಹಿಸಿದರು

Read More

ಮಂಗಳೂರು:- ಅಮೇರಿಕಾ ಓರ್ಲ್ಯಾಂಡ್ಯೋದಲ್ಲಿ ಲಯನ್ಸ್ 317 ಡಿ ಜಿಲ್ಲಾ ಗವರ್ನರ್ ಆಗಿ ಪ್ರಮಾಣವಚನ ಸ್ವೀಕರಿಸಿ ಮಂಗಳೂರಿಗೆ ಆಗಮಿಸಿದ ಕುಡ್ಪಿ ಅರವಿಂದ ಶೆಣೈ ಮತ್ತು ಮಮತಾ ಶೆಣೈ ಅವರನ್ನು ಮಂಗಳೂರು ಲಯನ್ಸ್ ಸೇವಾ ಮಂದಿರದಲ್ಲಿ ಸ್ವಾಗತಿಸಿ ಸಮ್ಮಾನಿಸಲಾಯಿತು. ಲಯನ್ಸ್ 317ಡಿ ಜಿಲ್ಲೆ ಗವರ್ನರ್ ಅರವಿಂದ ಶೆಣೈ ಮಾತನಾಡಿ ಶಿಸ್ತು ನಿಷ್ಠೆ ಮತ್ತು ಸೇವಾ ಮನೋಭಾವನೆ ಲಯನ್ಸ್ ಸಂಸ್ಥೆಯಲ್ಲಿ ಬಲವಾಗಿದೆ ಎಲ್ಲ ಲಯನ್ಸ್ ಸದಸ್ಯರು ತೊಡಗಿಸಿಕೊಂಡು ಇತರರನ್ನು ಪ್ರೇರೆಪಿಸಬೇಕು ಎಂದು ಹೇಳಿದರು ದ್ವೀತಿಯ ಉಪ ಜಿಲ್ಲಾ ಗವರ್ನರ್ ಗೋವರ್ಧನ್ ಶೆಟ್ಟಿ ಸಂಪುಟ ಕಾರ್ಯದರ್ಶಿ ಚಂದ್ರೆಗೌಡ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ ಕ್ಯಾಬಿನೆಟ್ ಸಹ ಸಂಯೋಜಕಿ ನಾನ್ಸಿ ಮಸ್ಕರೇಸನ್ ಡಿಜಿ‌ ಸಂಯೋಜಕಿ ಜ್ಯೋತಿ ಶ್ರೀಧರ್ ರಾಜ್ ಶೆಟ್ಟಿ,ಜಿಲ್ಲಾ ಪಿ.ಆರ್ ಒ ಸುರ್ಶನ್ ಪಡಿಯಾರ್ ವಿಟ್ಲ ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಕಾಮತ್ ಹೆಚ್ಚುವರಿ ಜಿಲ್ಲಾ ಕಾರ್ಯದರ್ಶಿ ಚಂದ್ರಹಾಸ್ ರೈ ನಿಕಟಪೂರ್ವ ಜಿಲ್ಲಾ ಗವರ್ನರ್ ಉದಯಶಂಕರ ಶೆಟ್ ವಸಂತ್ ಕುಮಾರ್ ಶೆಟ್ಟಿ ರೋನಾಲ್ಡ್ ಐಸಾಕ್‌ ಗೋಮ್ಸ್ ಕೆ.ಪಿ ಪ್ರಭು ಕಿಶೋರ್ ರಾವ್…

Read More

ತಿರುವನಂತಪುರಂ :- ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಎಂನ ಹಿರಿಯ ನಾಯಕ ವಿ.ಎಸ್ ಅಚ್ಯುತಾನಂದನ್ ಅವರು ಇಂದು ಸೋಮವಾರ ನಿಧನರಾದರು  ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ತೀವ್ರ ನಿಗಾ ಘಟಕದಲ್ಲಿ ಇದ್ದವರು ಎಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಶತಾಯುಷಿಯಾದ ಅಚ್ಯುತಾನಂದನ್ ಕೇರಳ ರಾಜಕಾರಣದಲ್ಲಿ ವಿಶಿಷ್ಟ ಚಾಪು ಮೂಡಿಸಿರುವ ವ್ಯಕ್ತಿಯಾಗಿದ್ದಾರೆಏಳು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅಚ್ಯುತಾನಂದನ್ ಅವರು 2006 ರಿಂದ 2011ರವರೆಗೆ ಕೇರಳ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು ತಮ್ಮ ರಾಜಕೀಯ ಜೀವನದಲ್ಲಿ ಅವರು ಒಟ್ಟು 10 ಚುನಾವಣೆಗಳನ್ನು ಎದುರಿಸಿದ್ದರು  ಅಚ್ಯುತಾನಂದನ್ ಅವರು ಕಳೆದ ಕೆಲವು ವರ್ಷಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು

Read More