Subscribe to Updates
Get the latest creative news from FooBar about art, design and business.
Author: PrasakthaNews
*ಮಂಗಳೂರು.* ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ಆನ್‌ಲೈನ್ ಕವಿಗೋಷ್ಠಿ ಹಾಗೂ ಭಾವೈಕ್ಯ ವಿಚಾರ ಗೋಷ್ಠಿ ದಿನಾಂಕ: 29-6-2025 ಆದಿತ್ಯವಾರ ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 10:00 ಗಂಟೆ ತನಕ ನಡೆಯಲಿದ್ದು ಹವ್ಯಾಸಿ ಪತ್ರಕರ್ತ,ಕರ್ನಾಟಕ ಭಾವೈಕ್ಯ ಪರಿಷತ್ ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಸ್ವಾಗತ ಭಾಷಣ ಮಾಡಲಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ ಪ್ರಾಸ್ತಾವಿಕ ಭಾಷಣ ಮಾಡಲಿದ್ದು ಕರ್ನಾಟಕ ಭಾವೈಕ್ಯ ಪರಿಷತ್ ಅಧ್ಯಕ್ಷ ಬ ಕೆ.ಎಂ.ಇಖ್ಬಾಲ್ ಬಾಳಿಲ ಸಮಾರಂಭವನ್ನು ಉದ್ಘಾಟಿಸುವರು. ಕರ್ನಾಟಕ ಭಾವೈಕ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ,ಸಾಹಿತಿ ಹೆಚ್.ಭೀಮರಾವ್ ವಾಷ್ಠರ್ ಸುಳ್ಯ ಕವಿಗೋಷ್ಠಿ ಮತ್ತು ಭಾವೈಕ್ಯ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಲಿಮ್ರಾ ಗ್ರೂಪ್ ಆಫ್ ಕರ್ನಾಟಕ ಅಧ್ಯಕ್ಷ ಶೈಖ್ ಮುಹಮ್ಮದ್ ಇರ್ಫಾನಿ ಆಶಯ ಭಾಷಣ ಮಾಡುವರು. ಇಖ್ಬಾಲ್ ಕೋಲ್ಪೆ,ಡಿ.ಐ.ಅಬೂಬಕರ್ ಕೈರಂಗಳ,ಎ.ಬಿ.ಮೊಹಿದೀನ್ ಕಳಂಜ, ಎಂ.ಎ.ಅಬ್ದುರ್ರಹ್ಮಾನ್ ಝುಹ್‌ರಿ ಮಗಿರೆ,ವಿಜಯದಾಸ ನವಲಿ ರಾಯಚೂರು,ಇಬ್ರಾಹಿಂ ಬಾತಿಷ ಝುಹ್‌ರಿ ಕುಂಬ್ರ, ಹನೀಫ್ ನಿಝಾಮಿ,ಅಸೈಗೋಳಿ ಮುಖ್ಯ ಅತಿಥಿಗಳಾಗಿ ಬಾಗವಹಿಸುವರು. ಎಸ್.ಬಿ.ಮುಹಮ್ಮದ್ ದಾರಿಮಿ ಉಪ್ಪಿನಂಗಡಿ,ನಾರಾಯಣ ರೈ…
ಮಂಗಳೂರು:- ದ.ಕ.ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಹಲವರು ಹೆಸರು ಕೇಳಿ ಬರುತ್ತಿರುವ ನಡುವೆ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಎರಡು ವಿಭಾಗ ಅಂದರೆ ಅರ್ಬನ್ ಮತ್ತು ಮಂಗಳೂರು ರೂರಲ್ ಎರಡು ವಿಭಾಗವನ್ನು ಮಾಡುವ ಬಗ್ಗೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ಚಿಂತನೆ ನಡೆದಿದೆ ಈ ವಿಚಾರವನ್ನು ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರಾಗಿರುವ ವಿ.ಆರ್ ಸುದರ್ಶನ್ ಅವರು ಬಹಿರಂಗಪಡಿಸಿದ್ದಾರೆ ಕಾಂಗ್ರೆಸ್ ಪಕ್ಷದ ಪ್ರಕಾರ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಈ ರೀತಿಯ ಎರಡು ವಿಭಾಗ ಮಾಡಿದರೇ ಪಕ್ಷಕ್ಕೆ ಹೆಚ್ಚು ಅನುಕೂಲ ಮತ್ತು ಕಾರ್ಯಕರ್ತರಿಗೆ ಕೂಡ ಅನುಕೂಲ ಆಗ್ತದೆ ಎಂಬ ಭಾವನೆ ಇದೆ ಈಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷ ಎರಡು ವಿಭಾಗಗಳಾಗಿ ಎರಡು ಅಧ್ಯಕ್ಷ ಆಯ್ಕೆ ನೇಮಕ ಆಗುವುದು ಬಹುತೇಕ ಖಚಿತವಾಗಿದೆ! ಇದರಿಂದಾಗಿ ಮಂಗಳೂರು ರೂರಲ್ ಡಿಸಿಸಿ ಭಾಗದವರಿಗೆ ಮಂಗಳೂರು ವ್ಯಾಫ್ತಿ ಮತ್ತು ಅರ್ಬನ್ ಡಿಸಿಸಿಗೆ ಬಂಟ್ವಾಳ ಅಥವಾ ಪುತ್ತೂರು ವ್ಯಾಪ್ತಿ ಮಾಡುವ ಬಗ್ಗೆ ಚಿಂತನೆ ನಡೆದಿದೆ ದ.ಕ.ಜಿಲ್ಲೆಯಲ್ಲಿ…
ಪುತ್ತೂರು:- ಖುರ್ರತುಸ್ಸಾದಾತ್ ಕೂರತ್ ತಂಙಳ್ ಉರೂಸ್ ಕಾರ್ಯಕ್ರಮದ ಎರಡನೇ ದಿನವಾದ ಜೂ 27 ಇಂದು ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯುಟಿ ಖಾದರ್ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ
ಧರ್ಮಸ್ಥಳ:- ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಗೆ 175 ವರ್ಷ ತುಂಬಿದ ಪ್ರಯುಕ್ತ ಸಂಭ್ರಮಾಚರಣೆಯು ಬರುವ ಸೆಪ್ಟೆಂಬರ್ 14 ರಂದು ವೆನ್ಲಾಕ್, ಲೇಡಿಗೋಷನ್, ಕೆ. ಎಮ್.ಸಿ. ಆಸ್ಪತ್ರೆಗಳ ಸಹಬಾಗಿತ್ವದಲ್ಲಿ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದಾರಾಮಯ್ಯ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಭಾದ್ಯಕ್ಷರಾದ ಯು.ಟಿ ಖಾದರ್,ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಸೇರಿದಂತೆ ಹಲವಾರು ಸಚಿವರು, ಸಂಸದರು,ರಾಜ್ಯಸಭಾ ಸದಸ್ಯರು,ಜಿಲ್ಲೆಯ ಎಲ್ಲಾ ಶಾಸಕರು,ವಿದಾನ ಪರಿಷತ್ ಸದಸ್ಯರು, ವಿವಿಧ ನಿಗಮ ಮಂಡಳಿಯ ಅಧ್ಯಕ್ಷರುಗಳು,ಜಿಲ್ಲೆಯ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಮುಂದಿನ ಭಾಗವಾಗಿ ದಿನಾಂಕ:26:06:2025 ರಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರಾದ ಡಾ.ಶಿವಪ್ರಕಾಶ್ ಡಿ.ಎಸ್. ನೇತೃತ್ವದಲ್ಲಿ ಬೇಟಿ ಮಾಡಲಾಯಿತು. ಜೊತೆಯಲ್ಲಿ ಪಲಿಯೇಟಿವ್ ಮೆಡಿಕಲ್ ಆಫೀಸರ್ ಡಾ. ಅನ್ನಯ್ಯ ಕುಲಾಲ್,ಪಿಸಿಷಿಯನ್ ಡಾ.ವಿಜಯ ಕುಮಾರ್,ರಕ್ಷಾ ಸಮಿತಿಯ ಪದ್ಮನಾಭ ಅಮೀನ್,ಅಬ್ದುಲ್ ಕರೀಮ್ ಗೇರುಕಟ್ಟೆ, ಶಶಿದರ್…
ಪುತ್ತೂರು:- ಪುತ್ತೂರು ತಹಶಿಲ್ದಾರ್ ಆಗಿ ಎಸ್ ಬಿ ಕೂಡಲಗಿ ಅವರನ್ನು ಸರಕಾರ ನೇಮಕಗೊಳಿಸಿದೆ ಇವರು ಈ ಹಿಂದೆ ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನಲ್ಲಿ ಗ್ರೇಡ್ 1 ತಹಶಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು
ಬೆಳ್ತಂಗಡಿ:- ಜೂನ್ 26, 27, 28, 29 ಈ ನಾಲ್ಕು ದಿನಗಳಲ್ಲಿ ಕಡಬ ತಾಲೂಕಿನ ಫಝಲ್ ನಗರ ಕೂರತ್ ನಲ್ಲಿ ಮರ್ಹೂಮ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರ ಪ್ರಥಮ ವರ್ಷದ ಉರೂಸ್ ಕಾರ್ಯಕ್ರಮ ನಡೆಯಲಿದೆ. ಈ ನಾಲ್ಕು ದಿನಗಳಲ್ಲಿ ವಿವಿದ ಧಾರ್ಮಿಕ,ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿದೆ. ಸರ್ವಧರ್ಮೀಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಈ ಉರೂಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಬ್ದುಲ್ ಕರೀಮ್ ಗೇರುಕಟ್ಟೆ ಮನವಿ ಮಾಡಿಕೊಂಡಿದ್ದಾರೆ.
ಪುತ್ತೂರು:- ಖುರ್ರತುಸ್ಸಾದಾತ್ ಕೂರತ್ ತಂಙಳ್ ಉರೂಸ್ ಕಾರ್ಯಕ್ರಮದ ಎರಡನೇ ದಿನವಾದ ಜೂ 27 ರಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ
ಪುತ್ತೂರು ಕೂರತ್ ತಂಙಳ್ ಎಂದೇ ಪ್ರಸಿದ್ದರಾಗಿದ್ದ ಖುರ್ರತುಸ್ಸಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿಯವರ ಹೆಸರಿನಲ್ಲಿ ಉರೂಸ್ ಮುಬಾರಕ್ ಜೂ 26 ರಿಂದ 29 ರ ತನಕ ಪುತ್ತೂರು ಕೂರತ್ ಫಝಲ್ ನಗರದಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಮತ್ತು ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರ ಉಳ್ಳಾಲ ಸಹಿತ ನೂರಾರು ಮೊಹಲ್ಲಾಗಳ ಖಾಝಿಗಳಾಗಿ ಸೇವೆ ಸಲ್ಲಿಸಿದ ತಂಙಳ್ ಅವರ ಪ್ರಥಮ ಅನುಸ್ಮರಣಾ ಉರೂಸ್ ಕಾರ್ಯಕ್ರಮ ಇದಾಗಿದ್ದು ಕೇರಳ ಮತ್ತು ಕರ್ನಾಟಕದ ಸಾವಿರಾರು ಜನರು ಭಾಗವಹಿಸಲಿದ್ದಾರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿದ್ವಾಂಸರು ಗಣ್ಯರು ಪಾಲ್ಗೊಳ್ಳುವವರು ಜೂ 26 ರ ಸಂಜೆ ಗಂಟೆ 4:30 ಕ್ಕೆ ಉರೂಸ್ ಸಮಿತಿಯ ಚೇರ್ ಮೇನ್, ಅಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ನೇತ್ರತ್ವದಲ್ಲಿ ಮಖಾಂ ಝಿಯಾರತ್ ನೊಂದಿಗೆ ಉರೂಸ್ ಸಮಾರಂಭಕ್ಕೆ ಚಾಲನೆ ದೊರಕಲಿದೆ ಸಂಜೆ ಗಂಟೆ 5:30 ಕ್ಕೆ ಕರ್ನಾಟಕ ಸುನ್ನಿ ಉಲೆಮಾ ಒಕ್ಕೂಟದ ರಾಜ್ಯಾಧ್ಯಕ್ಷ ಖಾಝಿ ಝೈನುಲ್ ಉಲೆಮಾ ಎಂ…
ಬೆಳ್ತಂಗಡಿ:- ಬೆಳ್ತಂಗಡಿ ತಾಲೂಕಿನ ಕಾಜೂರು ಸಮೀಪದ ನಿವಾಸಿ ಸುಮಾರು 85 ವರ್ಷ ಪ್ರಾಯದ ಅಲಿಮಮ್ಮ ಎಂಬವರು ಸಂಬಂಧಿಕರ ಮನೆ ಬೋಳಿಯಾರಿಗೆಂದು, ಎಂದು ಒಬ್ಬರೇ ಕಾಜು ಉರಿನಿಂದ ಹೊರಟವರು ಬೆಳ್ತಂಗಡಿಯಿಂದ ದಿಕ್ಕು ತಪ್ಪಿ ಪುತ್ತೂರಿಗೆ ಹೋಗುವ ಸರಕಾರಿ ಎಕ್ಸ್ಪ್ರೆಸ್ ರಸ್ತೆಗೆ ಹತ್ತಿದರು. ವಯೋವೃದ್ದೆಯ ಮಾತು ಕಂಡಕ್ಟರಿಗೆ ಅರ್ಥವಾಗದೆ ಮಹಿಳೆಯನ್ನು ಗೇರುಕಟ್ಟೆಯಲ್ಲಿ ತಿಳಿಸಿದರು ಈ ವೃದ್ಧೆಗೆ ದಿಕ್ಕು ತೋಚದೆ ಬಸ್ಸಿನಲ್ಲಿ ಹುಟ್ಟೂರು ಕಡೆ ಪ್ರಯಾಣಿಸುತ್ತಿದ್ದ ಈ ಹಿಂದೆ ಬೆಳ್ತಂಗಡಿ ಠಾಣೆಯಲ್ಲಿ ಪೊಲೀಸಾಗಿದ್ದ ಮಂಗಳೂರಿನ ಸೈಬರ್ ಕ್ರೈಂ ಹೆಡ್ ಕಾನ್ಸ್ಟೇಬಲ್ ಆಗಿರುವ ಸತೀಶ್ ಹಾಗೂ ಬೆಲಾಳಿನ ಆದಂ ಎಂಬವರು ಗೇರುಕಟ್ಟೆಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಅವರಿಗೆ ಮಾಹಿತಿ ತಿಳಿಸಿದರು ತಕ್ಷಣ ಪೇಟೆಗೆ ಬಂದು ಹುಡುಕಾಡಿದಾಗ ಬಸ್ ನಿಲ್ದಾಣದಲ್ಲಿ ಒಂಟಿಯಾಗಿ ದಿಕ್ಕು ತಪ್ಪಿ ಮಹಿಳೆಯರು ಭಯಗೊಂಡಿದ್ದರು ಇವರನ್ನು ವಿಚಾರಿಸಿದಾಗ ಕಾಜೂರು ಕಡೆಯವರೆಂದು ತಿಳಿದು ಬಂತು ತಕ್ಷಣ ಕಾಜೂರು ದರ್ಗಾ ಶರೀಫ್ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿದರು ಅಬ್ದುಲ್ ಕರೀಮ್ ಅವರು ಸ್ಥಳೀಯ…
ಮುಸ್ಲಿಮರ ಅರ್ಜಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಗಲ್ಲು ಶಿಕ್ಷೆಯ ಬೆದರಿಕೆ ಹಾಕಿದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಇವರನ್ನು ಕಾಂಗ್ರೆಸ್ ಸರಕಾರ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಆಗ್ರಹ ವಿಟ್ಲ:- ಮುಸ್ಲಿಂ ಸಮುದಾಯದ ಅರ್ಜಿಗೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎನ್ನುವ ನಿಟ್ಟಿನಲ್ಲಿ ಸರಕಾರಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆಯ ಬೆದರಿಕೆ ಹಾಕಿದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಸರಕಾರಿ ಅಧಿಕಾರಿಗಳಿಗೆ ಗೌರವ ನೀಡುವ ಕೆಲಸವನ್ನು ರಾಜ್ಯ ಸರಕಾರ ಮಾಡಿದರೆ ಇದಕ್ಕೆ ಬೆಲೆ ಮತ್ತು ಮೌಲ್ಯ ಬರ್ತದೆ ಎಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಸರಕಾರವನ್ನು ಆಗ್ರಹಿಸಿದ್ದಾರೆ ಕಾಂಗ್ರೆಸ್ ಪಕ್ಷದ ಪರಮೋಚ್ಚ ನಾಯಕ ಶ್ರೀ ರಾಹುಲ್ ಗಾಂಧಿಯವರು ಹೇಳಿದ ರೀತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇರುವ ಬಿಜೆಪಿ ಮನಸ್ಥಿತಿಯವರನ್ನು ಹೊರಗೆ ಹಾಕಬೇಕು ಈ ಸಂದೇಶ ನೇರವಾಗಿ ಈ ಶಾಸಕನನ್ನು ವಜಾ ಮಾಡುವ ಮೂಲಕ ಈ ಆರಂಭ ಕರ್ನಾಟಕದಿಂದಲೇ…


