Subscribe to Updates
Get the latest creative news from FooBar about art, design and business.
Author: PrasakthaNews
ವಿಟ್ಲ:- ಇಸ್ರೇಲ್ ಮತ್ತು ಇರಾನ್ ರಾಷ್ಟ್ರದ ನಡುವೆ ಯುದ್ದ ಕದನ ಆರಂಭವಾಗಿರುವುದರಿಂದ ಇರಾನ್ ರಾಷ್ಟ್ರದಲ್ಲಿರುವ ಅನೇಕ ಭಾರತೀಯ ಉದ್ಯೋಗಸ್ಥರು ತೊಂದರೆ ಆನುಭವಿಸುತ್ತಿದ್ದಾರೆ ಮತ್ತು ಇರಾನ್ ನಲ್ಲಿ ಸಂಪೂರ್ಣವಾಗಿ ನೆಟ್ವರ್ಕ್ ಕನೆಕ್ಟ್ ಕಡಿತ ಆಗಿರುವುದರಿಂದ ಯಾವುದೇ ಸಂಪರ್ಕವನ್ನು ಕೂಡ ಉದ್ಯೋಗಸ್ಥರು ಆಗಲಿ ಉದ್ಯೋಗಸ್ಥರ ಮನೆಯವರಿಗೆ ಸಂಪರ್ಕ ಸಾಧ್ಯ ಆಗ್ತಿಲ್ಲ ಈ ನಿಟ್ಟಿನಲ್ಲಿ ಭಾರತ ಸರ್ಕಾರದ ತಕ್ಷಣ ಇರಾನ್ ರಾಷ್ಟ್ರದಲ್ಲಿರುವ ಭಾರತೀಯ ಉದ್ಯೋಗಸ್ಥರನ್ನು ಭಾರತಕ್ಕೆ ಕರೆತರುವ ಪ್ರಯತ್ನ ಮಾಡಬೇಕಾಗಿದೆ ಎಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ ಈಗಾಗಲೇ ದ.ಕ.ಜಿಲ್ಲೆಯವರು ಮತ್ತು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಯುವಕರ ಬಗ್ಗೆ ದ.ಕ.ಜಿಲ್ಲೆಯ ಜಿಲ್ಲಾಧಿಕಾರಿಯವರಿಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಕೆಲಸ ಕಾರ್ಯವನ್ನು ಮಾಡಿದ್ದೇನೆ ತಕ್ಷಣ ಕೇಂದ್ರ ಸರಕಾರ ಈ ವಿಚಾರದಲ್ಲಿ ವಿಶೇಷ ಗಮನ ಹರಿಸಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಸರಕಾರವನ್ನು ಆಗ್ರಹಿಸಿದ್ದಾರೆ
ಪುತ್ತೂರು:- ಶಾಂತಿನಗರ ಮತ್ತು ಕೋಡಿಂಬಾಡಿ ಮಧ್ಯ ಇರುವ ಎಡೆಪುಣಿ ರಸ್ತೆಯ ಬದಿಯಲ್ಲಿ ಕೂಲಿ ಕಾರ್ಮಿಕನೊಬ್ಬ ಬಿದ್ದು ನರಾಳಾಡುತ್ತಿದ್ದರು ಇದನ್ನು ಕಂಡ ಶಾಂತಿನಗರದ ಯುವಕರಾದ ಯೋಗಿಂದ್ರ ಆಚಾರ್ಯ ಪವಿತ್ ಶಿವಕುಮಾರ್ ಇವರು ಅವರನ್ನು ಅವರು ಇರುವ ಮನೆಗೆ ಸುರಕ್ಷಿತವಾಗಿ ಸೇರಿಸಿದರು ಈ ಸಂದರ್ಭದಲ್ಲಿ ಕಾರ್ಮಿಕನಲ್ಲಿ ಇದ್ದ ಸಾಮಾಗ್ರಿಗಳನ್ನು ಅವರ ಮನೆಗೆ ತಲುಪಿಸಿ ಮಾನವೀಯತೆ ಮರೆದಿದ್ದಾರೆ. ಕೂಲಿ ಕಾರ್ಮಿಕ ಉತ್ತರ ಕನ್ನಡ ಜಿಲ್ಲೆಯವರು ಎಂಬ ಮಾಹಿತಿ ಲಭ್ಯವಾಗಿದೆ…
ವಿಟ್ಲ:- TOP & TOP ಚಾರಿಟೇಬಲ್ ಟ್ರಸ್ಟ್ ರಿ ಕುಡ್ತಮುಗೇರು ಇದರ ವತಿಯಿಂದ ನಡೆದ ವಾರ್ಷಿಕ ಮಹಾಸಭೆಯಲ್ಲಿ ಟ್ರೆಸ್ಟಿನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಿ.ಎಚ್ ಅಬೂಬಕ್ಕರ್ ಅವರು ಆಯ್ಕೆಗೊಂಡಿದ್ದಾರೆ ಸಿ.ಎಚ್ ಅಬೂಬಕ್ಕರ್ ಅವರು ಈ ಹಿಂದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡಿರುತ್ತಾರೆ ಅವರ ಅರ್ಹತೆಯನ್ನು ಗುರುತಿಸಿ ಅವರನ್ನು TOP& TOP ಚಾರಿಟೇಬಲ್ ಟ್ರಸ್ಟ್ ರಿ ಇದರ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ
ಕುಡ್ತಮುಗೇರು:- TOP& TOP ಚಾರಿಟೇಬಲ್ ಟ್ರಸ್ಟ್ ವತಿಯಿಂದ 22-6-2025 ರಂದು ವಾರ್ಷಿಕ ಮಹಾಸಭೆಯು ಕಾವೇರಿ ಕಾಂಪ್ಲೆಕ್ಸ್ ಕುಡ್ತಮುಗೇರಿನಲ್ಲಿ ನಡೆಯಿತು ಸಭೆಯ ಅಧ್ಯಕ್ಷತೆಯು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ.ಎಸ್ ಮಹಮ್ಮದ್ ಅವರ ನೇತ್ರತ್ವದಲ್ಲಿ ನಡೆಯಿತು ಈ ಸಂಧರ್ಭದಲ್ಲಿ ನೂತನ ಟ್ರೆಸ್ಟಿಗೆ ಹೊಸ ಸಮಿತಿಯನ್ನು ರಚಿಸಲಾಯಿತು ನೂತನ ಅಧ್ಯಕ್ಷರಾಗಿ ಹಕೀಮ್ ಪರ್ತಿಪ್ಪಾಡಿ ಅವರನ್ನು ಆಯ್ಕೆ ಮಾಡಲಾಯಿತು… ನೂತನ TOP& TOP ಚಾರಿಟೇಬಲ್ ಟ್ರಸ್ಟ್ ಇದರ ಪದಾಧಿಕಾರಿಗಳ ವಿವರಗಳು- ಗೌರವಧ್ಯಕ್ಷರು:- ಶಶಿ ಭಟ್ ಪಡಾರ್ ಗೌರವ ಸಲಹೆಗಾರರು- ಎಂ.ಎಸ್ ಮಹಮ್ಮದ್ ಅಬ್ಬಾಸ್ ಹಾಜಿ ಸುರಿಬೈಲು ಸಿಎಚ್ ರಝಾಕ್, ಅಧ್ಯಕ್ಷರು ಹಕೀಮ್ ಪರ್ತಿಪ್ಪಾಡಿ ಉಪಾಧ್ಯಕ್ಷರು ಪವಿತ್ರ ಪೂಂಜಾ ಪ್ರಧಾನ ಕಾರ್ಯದರ್ಶಿ- ಸಿ.ಎಚ್ ಅಬೂಬಕ್ಕರ್, ಕೋಶಾಧಿಕಾರಿ ಹರಿಶ್ಚಂದ್ರ ಟೈಲರ್ ಉಳಿದಂತೆ ವಿವಿಧ ಸದಸ್ಯರುಗಳನ್ನು ನೂತನ ಟ್ರೆಸ್ಟಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ವಿಟ್ಲ;- *ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಂಸ್ಥಾಪನ ದಿನ ಆಚರಣೆ* ಪ್ರಯುಕ್ತ *ಎಸ್ಡಿಪಿಐ ವಿಟ್ಲ ಬ್ಲಾಕ್ ಸಮಿತಿ ವತಿಯಿಂದ ಹಸಿವು ಮುಕ್ತ ಸ್ವಾತಂತ್ರ್ಯ , ಭಯ ಮುಕ್ತ ಸ್ವಾತಂತ್ರ್ಯದ ಘೋಷಣೆಯೊಂದಿಗೆ ಮುಂದುವರಿಯುತ್ತಿರುವ ಎಸ್.ಡಿ. ಪಿ.ಐ ಪಕ್ಷದ 17ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬ್ಲಾಕ್ ಮಟ್ಟದ ಧ್ವಜಾರೋಹಣ ಮತ್ತು ಸಭಾ ಕಾರ್ಯಕ್ರಮವನ್ನು ಕಂಬಳಬೆಟ್ಟು ಜಂಕ್ಷನ್ ನಲ್ಲಿ ಇಂದು (21/06/2025)ಬೆಳಿಗ್ಗೆ 9:30 ಗಂಟೆಗೆ ಸರಿಯಾಗಿ ನೆರವೇರಿಸಲಾಯಿತು.* *SDPI ವಿಟ್ಲ ಬ್ಲಾಕ್ ಸಮಿತಿ ಅಧ್ಯಕ್ಷರಾದ ಕಮರುದ್ದಿನ್ ಪುಣಚ ಧ್ವಜಾರೋಹಣ ನೆರವೇರಿಸಿದರು*, *SDPI ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕೀರ್ ಅಳಕೆಮಜಲ್ ಮತ್ತು ಪುತ್ತೂರು ಕ್ಷೇತ್ರ ಸಮಿತಿ ಕೋಸಧಿಕಾರಿ ಮುಸ್ತಫ D. B. ಒಕ್ಕೆತೂರ್ ಸಭೆಯನ್ನು ಉದ್ದೆಶಿಸಿ ಮತಾನಾಡಿ ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಹಾಗೂ ಎಲ್ಲಾ ಸಹೃದಯಿ ನಾಗರಿಕರಿಗೆ SDPI ಸಂಸ್ಥಾಪನ ದಿನದ ಶುಭಾಶಯವನ್ನು ಹೇಳಿದರು.* *ಈ ಸಂದರ್ಭದಲ್ಲಿ SDPi ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾದ ಸಿದ್ದೀಕ್ ಉರಿಮಜಲ್, ಮರಿಯಮ್ಮ ಕಂಬಳಬೆಟ್ಟು, ಸಿದ್ದೀಕ್ ಕಂಬಳಬೆಟ್ಟು,…
ಪುತ್ತೂರು:- ದ.ಕ.ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಕಂಪ್ಯೂಟರ್ ಬಸ್ ಕ್ಲಾಸ್ ಆನ್ ವೀಲ್ಸ್ ಇದರ ಉದ್ಘಾಟನೆಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಎಂ.ಫ್ರೆಂಡ್ಸ್ ಸಂಸ್ಥೆಯ ಸೇವೆ ಇಡೀ ದ.ಕ.ಜಿಲ್ಲೆಯಲ್ಲಿ ಎಲ್ಲಾ ಸಮುದಾಯದ ಜನರಿಗೆ ಸಿಗುತ್ತಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕಂಪ್ಯೂಟರ್ ಬಸ್ ಕ್ಲಾಸ್ ಆನ್ ವೀಲ್ಸ್ ಸೇವೆ ನೀಡುವ ಕಾರ್ಯ ಪ್ರಶಂಸನೀಯವಾಗಿದೆ ಎಂದು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಹನೀಫ್ ಹಾಜಿ ಗೋಳ್ತಮಜಲು ಹಾಗೂ ಸಂಸ್ಥೆಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು
ಮಂಗಳೂರು:-ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ ಶ್ರೀ ಹರೀಶ್ ಕುಮಾರ್ ಅವರ ಅವಧಿ ಮುಗಿದು ವರ್ಷ ಆದರೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗುತ್ತಿದೆ ದ.ಕ.ಜಿಲ್ಲೆಯಲ್ಲಿ ಬ್ಲೇಸಿಯಸ್ ಡಿಸೋಜ, ಮಾಜಿ ಸಚಿವ ಬಿ ರಮನಾಥ್ ರೈ ಅವರು ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸುದೀರ್ಘ ಅವಧಿಯಲ್ಲಿ ಕಟ್ಟಿ ಬೆಳೆಸಿದವರು ಇದರಲ್ಲಿ ರಮನಾಥ್ ರೈ ಅವರು 2013 ರಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಪಕ್ಷ ಸಂಘಟನೆ ಮಾಡಿ ಕರಾವಳಿ ಜಿಲ್ಲೆಯಲ್ಲಿ 8 ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 7 ಅಭ್ಯರ್ಥಿಗಳು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ರೈ ಅವರು ಆ ಸಮಯದಲ್ಲಿ ಶಾಸಕರಾಗಿ ಸಚಿವರಾದರು ಆ ಸಮಯದಲ್ಲಿ ರೈ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ರೈ ಸೂಚಿಸಿದ ಹೆಸರೇ ಹರೀಶ್ ಕುಮಾರ್ ಅವರದ್ದಾಗಿತ್ತು ನಂತರ ನಡೆದ ಲೋಕಸಭಾ ಚುನಾವಣೆ, ವಿಧಾನ ಸಭಾ ಚುನಾವಣೆ ಪ್ರತಿಯೊಂದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹರೀಶ್…
ಬೆಂಗಳೂರು:- ಯುವ ಉದ್ಯಮಿ ಅಲಿ ಮಣಿಲ ಅವರ ಮಾಲಕತ್ವದ ನೂತನ ರೋಯಲ್ ಕಾರ್ ವಲ್ಡ್ ಸಂಸ್ಥೆಯು ಇಂದು ಬೆಂಗಳೂರಿನ ಟಿಸಿ ಪಾಳ್ಯದಲ್ಲಿ ಶುಭಾರಂಭಗೊಂಡಿತು.ಈ ಸಂದರ್ಭದಲ್ಲಿ ರೋಯಲ್ ಗ್ರೂಪ್ ಮುಖ್ಯಸ್ಥರಾದ ಹಂಝಾರ್ ಟಿಸಿ ಪಾಳ್ಯ, ಯುವ ಉದ್ಯಮಿ ಜಗದೀಶ್ ರೈ ಚನಿಲ, ಬಶೀರ್ ಪಿಧಾ ಪುಣಚ, ಝಿಯಾದ್ ಪೈಸಾರಿ ಉಡುಪಿ, ಕಮಾಲ್ ಪುಣಚ, ಜಲೀಲ್ ಉಡುಪಿ, ಅಬ್ದುಲ್ ರಹಿಮಾನ್ ಕುಟ್ಟಿತ್ತಡ್ಕ , ಹಂಝ ನಾಟೆಕಲ್ಲು, ಜಮ್ಮಿ, ಲತೀಫ್ ಜಾಂಟಿ, ಮುನೀರ್ ಎಂಕೆ, ಮುಂತಾದವರು ಉಪಸ್ಥಿತರಿದ್ದರುಕಾರ್ ವಲ್ಡ್ ಸಂಸ್ಥೆಯಲ್ಲಿ OIL& FILTER CHANGE,VEHICLE WASH,CAR ACCESSORIES,GENERAL CHECK UPBATTERY SERVICES ಮುಂತಾದವುಗಳು ನಮ್ಮ ಕಾರ್ ವಲ್ಡ್ ನಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ಅಲಿ ಮಣಿಲ ಅವರು ತಿಳಿಸಿದ್ದಾರೆ.
ಪುತ್ತೂರು:- ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ನಾಳೆಯ ದಿವಸ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಶೋಕ್ ಕುಮಾರ್ ರೈ ಅವರು ಭಾಗವಹಿಸಲಿದ್ದಾರೆ ಬೆಳಿಗ್ಗೆ- 10.00 ಗಂಟೆಗೆ ಕೊಂಬೆಟ್ಟು ಪ ಪೂ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ 11.00 ಕ್ಕೆ ಎಂ-ಫ್ರೆಂಡ್ಸ್ ಕಲಿಕಾ ಕಂಪ್ಯೂಟರ್ ಬಸ್ ಉದ್ಘಾಟನೆ 12.30 ಕ್ಕೆ ಕೊಳ್ತಿಗೆ ಗ್ರಾಪಂ ಸಭಾಂಗಣದಲ್ಲಿ ಕಾಡಾನೆ ದಾಳಿಯ ಬಗ್ಗೆ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಭೆ ಈ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಲಿದ್ದಾರೆ ಎಂದು ಶಾಸಕರ ಆಪ್ತ ಸಹಾಯಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮಂಗಳೂರು:- ಇತ್ತೀಚೆಗೆ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಅವರೇ ಇನ್ವಿಷ್ಟಿಗೇಷನ್ ಮಾಡಿಕೊಂಡು ಯಾವ ಪ್ರಕರಣದಲ್ಲಿ ಯಾರನ್ನು ಅರೆಸ್ಟ್ ಮಾಡಬೇಕು ಯಾರನ್ನು ಬಿಡಬೇಕು ಎಂದು ಅವರೇ ಡಿಸೈಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಅನಗತ್ಯ ಸಂದೇಶ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮಂಗಳೂರು ಪೋಲಿಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ ತನಿಖೆಯನ್ನು ಸಾಕ್ಷ್ಯಗಳ ಆಧಾರದ ಮೇಲೆ ಪೋಲಿಸರು ಮಾಡುತ್ತಾರೆ ಯಾರೇ ಆರೋಪಿತರ ಮೇಲೆ ಸಾಕ್ಷ್ಯ ಸಿಕ್ಕಿದರೆ ಅವರನ್ನು ಅರೆಸ್ಟ್ ಮಾಡುತ್ತಾರೆ. ಸಾಕ್ಷ್ಯ ಸಿಗದಿದ್ದರೆ ಅಂತರವನ್ನು ಅರೆಸ್ಟ್ ಮಾಡಲು ಆಗುವುದಿಲ್ಲ ಯಾರಾಲ್ಲಾದರೂ ಯಾವ ಕೇಸಾಲ್ಲಾದರೂ ಸಾಕ್ಷ್ಯ ಇದ್ದರೆ ನೇರವಾಗಿ ಪೋಲಿಸ್ ಠಾಣೆಗೆ ಬನ್ನಿ ನಾವು ಆ ಸಾಕ್ಷ್ಯವನ್ನು ಪರಿಗಣಿಸುತ್ತೇವೆ ಆರೋಪಿತರ ವಿರುದ್ದ ಸಾಕ್ಷ್ಯ ಇದ್ದರೂ ಪರವಾಗಿಲ್ಲ ಪೋಲಿಸರು ಹಿಡಿಯುತ್ತಿದ್ದಾರೆ ಅಂತ ಅನಿಸಿ ನಿರಾಪರಾಧಿ ಎಂದು ಸಾಕ್ಷಿ ಇದ್ದರೆ ಅದೂ ಪರವಾಗಿಲ್ಲ ಪ್ರತಿ ಸಾಕ್ಷ್ಯವನ್ನು ಕೂಡ ಪೋಲಿಸರು ಯಾವಾಗಲೂ ಪರಿಗಣಿಸುತ್ತಾರೆ ಅದನ್ನು ಬಿಟ್ಟು ಸೋಶಿಯಲ್…


