Subscribe to Updates
Get the latest creative news from FooBar about art, design and business.
Author: PrasakthaNews
ಬಿಜೆಪಿ ಮುಖಂಡನ ಪುತ್ರನ ಲವ್, ಸೆ*ಕ್ಸ್, ದೋಖಾ ಕರ್ಮಕಾಂಡ. ಸಹಪಾಠಿ ಯುವತಿಯನ್ನು ಗರ್ಭಿಣಿ ಮಾಡಿ ಕೈಕೊಟ್ಟ ಕೃಷ್ಣ ರಾವ್. ಮಂಗಳೂರಿನ ಖಾಸಗಿ ಕಾಲೇಜಿನ Bsc ವ್ಯಾಸಂಗ ಮಾಡುತ್ತಿರುವ ಯುವತಿ. ಆರೋಪಿ ಕೃಷ್ಣ ಪುತ್ತೂರಿನಲ್ಲಿ ಹೈಸ್ಕೂಲ್‌ನಲ್ಲಿ ಓದುವಾಗ ಪರಸ್ಪರ ಲವ್. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಕರೆಸಿ ಯುವತಿ ಜೊತೆ ಸೆ*ಕ್ಸ್. 2024ರ ಅ.11ರಂದು ಶ್ರೀಕೃಷ್ಣ ಮನೆಗೆ ಕರೆಸಿಕೊಂಡು ದೈಹಿಕ ಸಂಪರ್ಕ. 2025ರ ಜನವರಿಯಲ್ಲಿ ಮತ್ತೆ ಬಲವಂತವಾಗಿ ಸೆ*ಕ್ಸ್ ಮಾಡಿದ ಕೃಷ್ಣ ರಾವ್. ಕೆಲ ತಿಂಗಳ ಬಳಿಕ ನಾನು ಗರ್ಭಿಣಿ ಎಂದು ಕೃಷ್ಣ ರಾವ್ಗೆ ತಿಳಿಸಿದ ಯುವತಿ. ಲವ್ ಹೆಸರಲ್ಲಿ ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿ ಈಗ ಉಲ್ಟಾ. ಯುವತಿಯನ್ನು ಮದುವೆಯಾಗಲು ನಿರಾಕರಿಸಿರುವ ಆರೋಪಿ ಕೃಷ್ಣ ರಾವ್. ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ ಯುವತಿ & ಪೋಷಕರು. ಪ್ರೀತಿ ಹೆಸರಲ್ಲಿ ಮೋಸ ಮಾಡಿದ ಶ್ರೀಕೃಷ್ಣನ ಪತ್ತೆಗೆ ಪೊಲೀಸರ ಬಲೆ. BNS 64(1), 69ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು. ತಲೆಮರೆಸಿಕೊಂಡಿರುವ ಆರೋಪಿ ಕೃಷ್ಣ ರಾವ್…
*ಬದುಕು ಬಂಗಾರವಾಗಲಿ ಎಂದು ಹಾರೈಸೋಣ *ಸ್ವ ಪ್ರತಿಷ್ಠೆ ರಾಜಕೀಯಕ್ಕೆ ಪ್ರಚಾರಕ್ಕೆ ಇನ್ನೊಬ್ಬರ ಬದುಕನ್ನು ಬಲಿ ಕೊಡದಿರೋಣ* *ಶಾಸಕ ಅಶೋಕ್ ರೈ ಅವರಿಂದ ಮನ ಮುಟ್ಟುವ ಸ್ಪಷ್ಟೀಕರಣ* ವಿನಾ ಸ್ತ್ರೀಯಾ ಜನನಂ ನಾಸ್ತಿ..ವಿನಾ ಸ್ತ್ರೀಯಾ ಗಮನಮ್ ನಾಸ್ತಿ..ವಿನಾ ಸ್ತ್ರೀಯಾ ಸೃಷ್ಟಿ ಏವ ನಾಸ್ತಿ.. ನಾನು ಹುಟ್ಟಿದಾಗ ನನ್ನನ್ನು ಎತ್ತಿಕೊಂಡು ಅಕ್ಕರೆಯಿಂದ, ಮಮತೆಯಿಂದ ಸಲಹಿದ್ದು ಓರ್ವ ಹೆಣ್ಣು…. ಅವಳೇ ನನ್ನ ತಾಯಿ. ನಾನಿನ್ನೂ ಪುಟ್ಟ ಮಗುವಾಗಿದ್ದಾಗ ಪ್ರೀತಿಯಿಂದ ನನ್ನನ್ನು ನೋಡಿಕೊಳ್ಳುತ್ತಾ ಜೊತೆಗೆ ಆಟ ಆಡುತ್ತಿದ್ದವಳೂ ಒಬ್ಬ ಹೆಣ್ಣು. ಅವಳೇ ನನ್ನ ಒಡಹುಟ್ಟಿದ ಅಕ್ಕ. ಸ್ವಲ್ಪ ದೊಡ್ಡವನಾದ ಬಳಿಕ ಶಾಲೆಗೆ ಹೋಗಲು ಶುರುಮಾಡಿದಾಗ ತಿದ್ದಿ ತೀಡಿ ಅಕ್ಷರಾಭ್ಯಾಸ ಮಾಡಿಸಿದ್ದು, ವಿದ್ಯೆ ಕಲಿಸಿದ್ದೂ ಕೂಡಾ ಹೆಣ್ಣುಮಕ್ಕಳೇ. ಅವರೇ ನನ್ನ ಶಿಕ್ಷಕಿಯರು. ಆ ಬಳಿಕ ನಾನು ಯುಕ್ತ ವಯಸ್ಕನಾದಾಗ, ನನ್ನದೇ ಜೀವನ ಕಟ್ಟಿಕೊಂಡು ನನ್ನದೇ ಆದ ವ್ಯಾಪಾರ ವ್ಯವಹಾರಗಳಲ್ಲಿ ವ್ಯಸ್ತನಾಗಿದ್ದಾಗ, ಕಾಲಕಾಲಕ್ಕೆ ನನ್ನ ಬೇಕು ಬೇಡಗಳನ್ನು ಗಮನಿಸಿ ನನ್ನ ಜೀವನಕ್ಕೆ ಆಧಾರಸ್ಥಂಭದಂತೆ ನಿಂತು ತನ್ನ ಜೀವನವನ್ನೇ ನನಗಾಗಿ ಸಮರ್ಪಿಸಿಕೊಂಡವಳೂ ಕೂಡ ಓರ್ವ…
ಬೆಂಗಳೂರು- ದ.ಕ.ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಸರಣಿ ಕೊಲೆಗಳು ಮತೀಯ ಸಂಘರ್ಷಣೆಗಳನ್ನು ಮಟ್ಟ ಹಾಕುವ ಸಲುವಾಗಿ ಕರ್ನಾಟಕ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ದ.ಕ.ಜಿಲ್ಲೆಯಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಸ್ಪೆಷಲ್ ಇನ್ವಷ್ಟಿಕೇಷನ್ ಟೀಮ್ ಇದನ್ನು ಸ್ಥಾಪಿಸುವ ಮೂಲಕ ಜಿಲ್ಲೆಯಲ್ಲಿ ಸೌಹಾರ್ದ ವಾತವಾರಣ ನಿರ್ಮಿಸುವ ಸಲುವಾಗಿ ಈ ಕಾರ್ಯವನ್ನು ದ.ಕ.ಜಿಲ್ಲೆಯಲ್ಲಿ ಸ್ಥಾಪಿಸಿದ್ದಾರೆ ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಬಿ ರಮನಾಥ್ ರೈ ಅವರು ಇಂದು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು ಜೊತೆಗೆ ದ.ಕ.ಜಿಲ್ಲೆಯಲ್ಲಿ ತಲೆದೂರಿರುವ ಜಟಿಲವಾಗಿರುವ ಕೆಂಪು ಕಲ್ಲು- ಮರಳಿನ ವಿಚಾರದಲ್ಲಿ ಸರಳವಾದ ರೀತಿಯ ಕಾನೂನು ಮಾಡುವ ಮೂಲಕ ಜಿಲ್ಲೆಯ ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರಿಗೆ ರಮನಾಥ್ ರೈ ಮನವಿ ಮಾಡಿದರು ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ನಗರಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಶ್ರೀ ಬೇಬಿ ಕುಂದರ್ , ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯರಾದ…
ಪುತ್ತೂರು:- ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿನ್ನಾಗಿಸಿ ವಂಚಿಸಿರುವ ಯುವಕ ನಾಪತ್ತೆಯಾದ ಪ್ರಕರಣದ ಸಂತ್ರಸ್ಥೆ ಮತ್ತು ಮಗುವಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂತ್ರಸ್ತೆಯ ಮನಗೆ ಇಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಶ್ರೀಮತಿ ಪ್ರತಿಭಾ ಕುಳಾಯಿ ಅವರು ಭೇಟಿ ಸಂತ್ರಸ್ತೆ ಮತ್ತು ಮನೆಯವರಿಗೆ ಧೈರ್ಯ ತುಂಬಿದರು ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಪ್ರತಿಭಾ ಕುಳಾಯಿ ಅವರು ಈ ಘಟನೆ ಇಡೀ ನಾಗರೀಕ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ ಮತ್ತು ಈ ವಿಚಾರ ಮತ್ತು ಘಟನೆಯ ಬಗ್ಗೆ ಸಂತ್ರಸ್ತೆ ಮತ್ತು ಮಗುವಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇನೆ ಎಂದರು ಸಂತ್ರಸ್ತೆಯನ್ನು ಭೇಟಿ ಮಾಡಿದ ತಕ್ಷಣ ಮಹಿಳಾ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷ್ಮಿ ಚೌಧರಿ ದ.ಕ.ಜಿಲ್ಲೆಯ ಪೋಲಿಸ್ ವರಿಷ್ಟಾಧಿಕಾರಿಗಳಿಗೆ ಕರೆ ಮಾಡಿ ತಕ್ಷಣ ಈ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗುವಂತೆ ಒತ್ತಾಯ ಮಾಡಿದರು ಸ್ಥಳದಲ್ಲಿ ಸಂತ್ರಸ್ತೆಯವರಿಗೆ ವೈಯುಕ್ತಿಕ ನೆಲೆಯಲ್ಲಿ ಧನಸಹಾಯ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಸಂಪೂರ್ಣ…
ಬಿಜೆಪಿ ಮುಖಂಡನ ಪುತ್ರನ ಕಾಮತೃಷೆಗೆ ಬಲಿಪಶುವಾದ ಪುತ್ತೂರಿನ ವಿದ್ಯಾರ್ಥಿನಿ ಮನೆಗೆ ಜನವಾದಿ ಮಹಿಳಾ ಸಂಘಟನೆ, ಸಾಮರಸ್ಯ ಮಂಗಳೂರು ಸಹಿತ ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರು ಭೇಟಿ ನೀಡಿ ಧೈರ್ಯ ತುಂಬಿದರು. ಮದುವೆಯಾಗುವ ಭರವಸೆ ನೀಡಿ, ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ನಂತರ ರಾಜಕೀಯ ಬೆಂಬಲದಿಂದ ತಲೆ ಮರೆಸಿಕೊಂಡಿರುವ ಕೃಷ್ಣ ರಾವ್ ನನ್ನು ತಕ್ಷಣ ಬಂಧಿಸಬೇಕು. ಗರ್ಭಪಾತಕ್ಕೆ ಒತ್ತಾಯಿಸಿ ಹಣದ ಆಮಿಷ ಒಡ್ಡಿದ ಸಂಘಟನೆಗಳ ಪ್ರಮುಖರನ್ನು ತನಿಖೆಗೆ ಒಳಪಡಿಸಬೇಕು ಎಂದು ಮಹಿಳಾ ನಾಯಕರು ಈ ಸಂದರ್ಭ ಆಗ್ರಹಿಸಿದರು. ಈ ಕುರಿತು ನ್ಯಾಯ ಒದಗಿಸದಿದ್ದಲ್ಲಿ ಜಿಲ್ಲೆಯ ಜನಪರ ಮಹಿಳಾ ಸಂಘಟನೆಗಳನ್ನು ಜೊತೆ ಸೇರಿಸಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಿಯೋಗ ಎಚ್ಚರಿಸಿತು. *ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ, ಮಾಜಿ ಕಾರ್ಪೊರೇಟರ್ ಜಯಂತಿ ಶೆಟ್ಟಿ, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ವಿದ್ಯಾ ಶೆಣೈ, ದಲಿತ ಹಕ್ಕುಗಳ ಸಮಿತಿಯ ಈಶ್ವರಿ ಪದ್ಮುಂಜ, ನ್ಯಾಯವಾದಿ ಶೈಲಜಾ ಅಮರನಾಥ್, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಕಾವೂರು, ಅಸುಂತಾ ಡಿ ಸೋಜಾ, ಪ್ರಮೀಳಾ ದೇವಾಡಿಗ, ಪ್ಲೇವಿ…
ಅನಂತಾಡಿ:- ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಬಂಟ್ರಿಂಜ ಮತ್ತು ವಿಟ್ಲ ಅನಂತಾಡಿ ಪುತ್ತೂರಿಗೆ ಬಸ್ಸು ಸಂಚಾರ ಪುನರಾಂಭಿಸುವ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇವರಿಗೆ ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಯಂತಿ ವಿ.ಪೂಜಾರಿ ಅವರು ಇತ್ತೀಚೆಗೆ- 6-6-2025 ರಂದು ಪತ್ರ ಬರೆಯುವ ಮೂಲಕ ಮನವಿ ಸಲ್ಲಿಸಿದ್ರು ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಬಸ್ಸು ಆರಂಭಿಸುವ ಮೂಲಕ ಜನತೆಯ ಬೇಡಿಕೆಯನ್ನು ಈಡೇರಿಸಿದ್ದಾರೆ ಇದಕ್ಕೆ ಪ್ರಯತ್ನ ಮಾಡಿ ವಿಶೇಷ ರೀತಿಯಲ್ಲಿ ಶ್ರಮ- ವಹಿಸಿದ ಶ್ರೀಮತಿ ಜಯಂತಿ ವಿ ಪೂಜಾರಿ ಅವರ ಸೇವೆ ಪ್ರಶಂಸನೀಯವಾಗಿದೆ
ಉಪ್ಪಿನಂಗಡಿ: ೩೪ ನೆಕ್ಕಿಲಾಡಿ ಗ್ರಾಮದ ಮೈಂದಡ್ಕ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಸಂಜೆ ೬.೦೩ರ ಸಮಯದಲ್ಲಿ ಖಾಸಗಿ ವ್ಯಕ್ತಿಗಳು ಅಂಗನವಾಡಿಯ ಒಳಗೆ ನುಗ್ಗಿ ಸಭೆ ನಡೆಸಿದ ಬಗ್ಗೆ ಆರೋಪ ಕೇಳಿ ಬಂದಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳ ಹಾಗೂ ಗರ್ಭೀಣಿಯರ ಪೌಷ್ಟಿಕ ಆಹಾರ ಸಾಮಗ್ರಿ ಸೇರಿದಂತೆ ಮಕ್ಕಳಿಗೆ ಸಂಬಂಧಿಸಿದ ವಸ್ತುಗಳು ದಾಸ್ತಾನಿರುವ ಕಟ್ಟಡದೊಳಗೆ ರಜಾ ದಿನದಲ್ಲಿ ಖಾಸಗಿ ವ್ಯಕ್ತಿಗಳು ಸಭೆ ನಡೆಸಿರುವುದು ಗಂಭೀರ ಪ್ರಕರಣವಾಗಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.ಮೈಂದಡ್ಕದ ಸರ್ವೇ ನಂ. ೮೮/೧ರಲ್ಲಿರುವ ೦.೫ ಸೆಂಟ್ಸ್ ಜಾಗದಲ್ಲಿ ಅನಧಿಕೃತ ಕಟ್ಟಡವೊಂದಿದ್ದು, ಅಲ್ಲಿ ಈಗ ಅಂಗನವಾಡಿ ಕಾರ್ಯಾಚರಿಸುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ ಭಾನುವಾರ ದಿನ ಅಂಗನವಾಡಿ ಕಟ್ಟಡದೊಳಗೆ ನುಗ್ಗಿದ ಕೆಲವರು ಅಲ್ಲಿದ್ದ ಮೇಜು, ಕಪಾಟು, ಗೋಡೆಗೆ ಸಂಘಟನೆಯೊಂದರ ಸ್ಟಿಕ್ಕರ್ ಅಳವಡಿಸಿ, ಈ ಕಟ್ಟಡ ನಮ್ಮದು ಎಂದು ಸಾಬೀತುಪಡಿಸಲು ಹೊರಟಿದ್ದರು. ಈ ಸಂದರ್ಭದಲ್ಲಿ ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಅಲ್ಲದೇ,…
ಪುಣಚ:- ಕಳೆದ ಅನೇಕ ವರ್ಷಗಳಿಂದ ಪುಣಚದ ಮಣಿಲ ಮತ್ತು ಕಳೆದ ಕೆಲವು ತಿಂಗಳಿನಲ್ಲಿ ಮಣಿಲ ಮುಖ್ಯ ರಸ್ತೆಯಲ್ಲಿ ಕಾರ್ಯಚರಿಸುತ್ತಿದ್ದ ಬ್ಲಿಸ್ ಲಂಡನ್ ಪ್ರೀ ಸ್ಕೂಲ್ ಇಂದು ಪರಿಯಾಲ್ತಡ್ಕ ಮಸೀದಿಯ ನೂತನ ನವೀಕೃತ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತ್ತು. ಈ ಸಂದರ್ಭದಲ್ಲಿ ಪರಿಯಾಲ್ತಡ್ಕ ಮಸೀದಿ ಅಧ್ಯಕ್ಷರಾದ ಎಂ.ಎಸ್ ಮಹಮ್ಮದ್, ಮಸೀದಿ ಸದರ್ ಉಸ್ತಾದ್ ಅಬೂಬಕ್ಕರ್ ಸಿದ್ದೀಕ್ ರಝ್ವಿ ಅವರು ಸಂಸ್ಥೆಯನ್ನು ಉದ್ಘಾಟಿಸುವ ಮೂಲಕ ಸಂಸ್ಥೆಗೆ ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರಾದ ನೂರ್ ಮುಹಮ್ಮದ್ ನೀರ್ಕಜೆ, ಅಶ್ರಫ್ ಅಂಜದಿ, ಕಮರುದ್ದೀನ್ ಪರಿಯಾಲ್, ಎಂ.ಎಸ್ ಶಫೀಕ್ ಮಣಿಲ, ಶಾಫಿ ಮಾಳಿಗೆ,ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು ಕಾರ್ಯಕ್ರಮದಲ್ಲಿ ಹಿರಿಯರಾದ ಕುಂಚ ಪರಿಯಾಲ್ತಡ್ಕ, ಯೂಸುಫ್ ಗೌಸಿಯಾ ಸಾಜಾ, ಸಿರಾಜ್ ಮಣಿಲ, ಕಮಾಲ್ ಪುಣಚ, ಇಸ್ಮಾಯಿಲ್ ನಾಟೆಕಲ್ಲು , ಮಹಮ್ಮದ್ ಆಲಿ ಸಿಟಿ ಬಝಾರ್, ಹನೀಫ್ ಸಿಟಿ ಮೊಬೈಲ್, ಮೊದಲಾದವರು ಉಪಸ್ಥಿತರಿದ್ದರು ಬ್ಲಿಸ್ ಲಂಡನ್ ಪ್ರೀ ಸ್ಕೂಲ್ ಸಂಸ್ಥೆಯ ಶಿಕ್ಷಕಿಯರು ವಿವಿಧ ಕಾರ್ಯಕ್ರಮ ನಿರ್ವಹಿಸಿ ಸಹಕರಿಸಿದರು
ಹತ್ತಾರು ಯುವ ಶ್ರೇಷ್ಠರು ಪುತ್ತೂರಿನ ಚಾರಿತ್ರಿಕ ಪುಟಗಳಲ್ಲಿ ಕಂಗೊಳಿಸಿದ್ದಾರೆ ಆ ಯುವ ಶ್ರೇಷ್ಠರ ಯಾದಿಯಲ್ಲಿ ಉದ್ಯಮಿ ಶ್ರೀ ಶಿವರಾಮ ಆಳ್ವರು ಒಬ್ಬರಾಗಿದ್ದಾರೆ.ಪುತ್ತೂರಿನ ಕುರಿಯ ಬಳ್ಳಮಜಲಿನ ದೇರಣ್ಣ ಆಳ್ವರ ಸುಪುತ್ರರಾದ ಶ್ರೀ ಶಿವರಾಮ ಆಳ್ವರು ಬಿ.ಎ. ಪದವೀಧರರಾಗಿ ವ್ಯವಹಾರಿಕ ರಂಗಕ್ಕೆ ಪಾದಾರ್ಪಣೆ ಮಾಡಿ,ಜನಮನ್ನಣೆ ಗಳಿಸಿದವರು ರಾಜಕೀಯ ನಾಯಕರೊಂದಿಗಿನ ಒಡನಾಡ, ಉನ್ನತ ಪೊಲೀಸ್ ಅಧಿಕಾರಿಗಳ ಬಾಂಧವ್ಯ, ಅಪಾರ ಬಂಧುಮಿತ್ರರ ಸ್ನೇಹ, ಪರೋಪಕಾರದ ಪ್ರತೀಕವಾಗಿರುವ ಶ್ರೀ ಆಳ್ವರು ಒಳ್ಳೆಯ ಸಮಾಜ ಸೇವಕರು ಆಗಿದ್ದಾರೆ. ವಿದ್ಯಾರ್ಥಿ ಜೀವನದಲ್ಲೇ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ನಾಯಕರಾಗಿ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಶ್ರಮಿಸಿದ ಶ್ರೀ ಶಿವರಾಮ ಆಳ್ವ ರೂ 3 ವರ್ಷಗಳ ಕಾಲ ಎನ್. ಎಸ್. ಯು (ಐ)ನಪುತ್ತೂರು ಘಟಕದ ಅಧ್ಯಕ್ಷರಾಗಿಯೂ, 1ವರ್ಷ ವಿ.ವಿ. ಸೆನೆಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದಾರಲ್ಲದೇ ಇದೀಗ ತನ್ನ ಬಿಡುವಿಲ್ಲದ ವ್ಯವಹಾರಗಳ ನಡುವೆಯೂ ವಿವಿಧ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿಯುತ್ತಾ ಎಲ್ಲರ ಅಚ್ಚುಮೆಚ್ಚಿನ ಕಾಂಗ್ರೆಸ್ ಮುಖಂಡರಾಗಿ…
ಅಕ್ಷಯ ಚವರ್ಕಾಡ್ ಸೆಂಟರ್ ಅಡ್ಯನಡ್ಕದಲ್ಲಿ ನೂತನವಾಗಿ ಆರಂಭಗೊಂಡ ಪರಂನೆಂಟ್ ಆಧಾರ್ ಸೆಂಟರ್ ನನ್ನು ಮಾಜಿ ಸಚಿವರಾದ ಶ್ರೀ ಬಿ ರಮಾನಾಥ್ ರೈ ಅವರು ಉದ್ಗಾಟಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮುಹಮ್ಮದ್, ಪುತ್ತೂರ್ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ,ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು,ದ ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ ,ಏನ್ಮಕಜೆ ಗ್ರಾ.ಪಂ ಮಾಜಿ ಸದಸ್ಯ ಐತಪ್ಪ ಕುಲಾಲ್,ಕೇಪು ಗ್ರಾ.ಪಂ ಸದಸ್ಯರು ಕರೀಂ ಕುದ್ದುಪದವು.ಕೇಶವ ನಾಯ್ಕ,ಅಕ್ಷಯ ಸೆಂಟರಿನ ಮುಖ್ಯಸ್ಥ ಅಬ್ದುಲ್ ಆರೀಸ್ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.


