Subscribe to Updates
Get the latest creative news from FooBar about art, design and business.
Author: PrasakthaNews
ವಿಟ್ಲ:- ಇಲ್ಲಿಯ ಖಾಸಗಿ ಬಸ್ ನಿಲ್ದಾಣದ ಸಮೀಪ ಅಪ್ರಾಪ್ತ ಪ್ರಾಯದ ಬಾಲಕ ಆತನ ಶಾಲಾ ಸಹಪಾಠಿವೊಬ್ಬಳೊಂದಿಗೆ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ವ್ಯಕ್ತಿ ಬಾಲಕನಿಗೆ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ ಅಪ್ರಾಪ್ತ ಬಾಲಕ ತನ್ನ ಶಾಲಾ ಸಹಪಾಠಿಯೊಂದಿಗೆ ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಮಾತನಾಡುತ್ತಿದ್ದರು ಈ ಸಂದರ್ಭದಲ್ಲಿ ಪದ್ಮರಾಜ್ ಎಂಬಾತ ಹಿಂದೂ ಹುಡುಗಿಯೊಂದಿಗೆ ಮಾತನಾಡುತ್ತಿರುವ ಬಗ್ಗೆ ತಕರಾರು ತೆಗೆದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 83/205 ಕಲಂ 126( 2) 352 351(3) 196(1)a BSN 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಆತನ ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ
ಬಂಟ್ವಾಳ:- ದಿನಾಂಕ 07/07/2025ರಂದು ಬಂಟ್ವಾಳ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯು ತಾಲೂಕು ಪಂಚಾಯತಿನ 2ನೇ ಮಹಡಿಯಲ್ಲಿರುವ ಸಮಿತಿಯ ಕಚೇರಿಯಲ್ಲಿ ಪಂಚ ಗ್ಯಾರೆಂಟಿ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಯಂತಿ ವಿ. ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಫ್ಲೈಓವರ್ ನಿರ್ಮಾಣದ ಬಳಿಕ ಉಪ್ಪಿನಂಗಡಿಯಿಂದ ಬರುವ ಬಸ್ಸುಗಳು ಮಾಣಿ ಜಂಕ್ಷನ್‌ಗೆ ಬರುತ್ತಿಲ್ಲ ಇದರಿಂದಾಗಿ ಮಾಣಿ ಗ್ರಾಮದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದ್ದು, ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ. ಡಿಪೋ ಮಂಗಳೂರು/ ಪುತ್ತೂರು ನಿಯಂತ್ರಣಾಧಿಕಾರಿ ಇವರಿಗೆ ಪತ್ರ ಬರೆಯಲು ನಿರ್ಣಯಿಸಲಾಯಿತು. ಅನಂತಾಡಿ ಗ್ರಾಮದ ಬಂಟ್ರಿಂಜ – ವಿಟ್ಲ ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳುವಂತೆ ಗ್ಯಾರೆಂಟಿ ಸಮಿತಿ ಅಧ್ಯಕ್ಷರ ಮನವಿಗೆ ಸ್ಪಂದಿಸಿ ಅನಂತಾಡಿ ಗ್ರಾಮಕ್ಕೆ ಬಸ್ ಸಂಚಾರದ ವ್ಯವಸ್ಥೆಯನ್ನು ಮಾಡಿರುವ ಕೆಎಸ್ಆರ್ಟಿಸಿ ಡಿಪೋ ಮಂಗಳೂರು ಇಲ್ಲಿನ ನಿಯಂತ್ರಣಾಧಿಕಾರಿ ಅವರಿಗೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು. ಬಿ.ಸಿ.ರೋಡು- ಕಲ್ಲಡ್ಕ – ಕರಿಂಗಾಣ ಬಸ್ ಸಂಚಾರವನ್ನು ಕೊರೋನ ಸಮಯದಲ್ಲಿ ಸ್ಥಗಿತಗೊಳಿಸಲಾಗಿತ್ತು, ಈ ಬಗ್ಗೆ ಸಮಿತಿಯ ಮನವಿಗೆ ಸ್ಪಂದಿಸಿ ಪುನಃ ಬಸ್ಸು ಸಂಚಾರವನ್ನು ಪ್ರಾರಂಭಿಸಲಾಗಿದೆ. ಹೊಸ ಪಡಿತರ ಚೀಟಿಯನ್ನು…
ವಿಟ್ಲ:- ಇಡ್ಕಿದು ಗ್ರಾಮ ಪಂಚಾಯತ್ ನೂತನ ಅಭಿವೃದ್ಧಿ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಅಜಿತ್ ಕುಮಾರ್ ಅವರಿಗೆ ಇಂದು ಕೆಪಿಸಿಸಿ ಮುಖಂಡ ಹನೀಫ್ ಬಗ್ಗುಮೂಲೆ ಹಾಗೂ ಸ್ಥಳೀಯ ಸಮಾಜ ಸೇವಕ ಸಿದ್ದೀಕ್ ಸೂರ್ಯ ಅವರ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ PDO ಅವರು ಗ್ರಾಮದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ನಿಮ್ಮ ಸಹಕಾರ ಅತ್ಯಗತ್ಯ ಎಂದರು ಈ ಸಂದರ್ಭದಲ್ಲಿ ಶಾಕೀರ್ 77 ಅಳಕೆಮಜಲು, ಯುವ ಕಾಂಗ್ರೆಸ್ ಅಧ್ಯಕ್ಷರು , ಅಶ್ರಫ್ KGN ಬೂತ್ ಅಧ್ಯಕ್ಷರು, ಅಬೂಬಕ್ಕರ್ ಕೋಲ್ಪೆ, ಸಿನಾನ್ ಅಳಕೆಮಜಲು PWD, ಜಾಬೀರ್ ಅಳಕೆಮಜಲು, ಮುನೀರ್ ಅಳಕೆಮಜಲು, ಶಾಫಿ ಸೂರ್ಯ ಸಮಾಜ ಸೇವಕರು, ಸಬೀರ್ ಕೋಲ್ಪೆ, ಸುಲೈಮಾನ್ ಕೋಲ್ಪೆ, ಅಜೀಜ್ ಕೋಲ್ಪೆ, ರಝಾಕ್ ಕೋಲ್ಪೆ, ಹಾರಿಸ್ , ಸಾದಿಕ್, ಗಪೂರ್, ಕಲಂದರ್ ಅಳಕೆಮಜಲು ಮೊದಲಾದವರು ಉಪಸ್ಥಿತರಿದ್ದರು
ಪುತ್ತೂರು:- ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಸಂಯೋಜಕರಾದ ಶ್ರೀ ಕಾವು ಹೇಮನಾಥ್ ಶೆಟ್ಟಿ ಅವರ ನಿವಾಸಕ್ಕೆ ಕೆಪಿಸಿಸಿ ಮುಖಂಡರಾದ ಹನೀಫ್ ಬಗ್ಗುಮೂಲೆ ಅವರ ನೇತ್ರತ್ವದ ತಂಡ ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿಚಾರಗಳ ಬಗ್ಗೆ ಮಹತ್ವದ ಬಗ್ಗೆ ಚರ್ಚೆ ನಡೆಸಿದರುಈ ಸಂದರ್ಭದಲ್ಲಿ ಯುವ ಉದ್ಯಮಿಯಾದ ಸಿದ್ದೀಕ್ ಸೂರ್ಯ , ಕಾಂಗ್ರೆಸ್ ಮುಖಂಡ ಅಬೂಬಕ್ಕರ್ ಕೊಲ್ಪೆ ,, ಮನ್ಸೂರ್ ಮುಂತಾದವರು ಉಪಸ್ಥಿತರಿದ್ದರು
ಪುತ್ತೂರು:- ಬಿರುಮಳೆ ಬೆಟ್ಟಕ್ಕೆ ಬಂದಿದ್ದ ಯುವಕ ಯುವತಿಯ ಮೇಲೆ ಕಿಡಿಗೇಡಿಗಳಿಂದ ನೈತಿಕ ಪೋಲಿಸ್ ಗಿರಿ ನಡೆದಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದ್ದು ಘಟನೆಗೆ ಸಂಬಂಧಿಸಿ ಇಬ್ಬರು ದುಷ್ಕರ್ಮಿಗಳನ್ನು ಪೋಲಿಸರು ಬಂಧಿಸಿದ್ದಾರೆ ಕೆಲಸಮಯಗಳಿಂದ ನಿಂತು ಹೋಗಿದ್ದ ಈ ರೀತಿಯ ಕೆಟ್ಟ ಘಟನೆಗಳು ಪುತ್ತೂರಿನಲ್ಲಿ ನಡೆದಿದೆ. ಬಾಲ ಮುದುಡಿಕೊಂಡಿದ್ದ ಸಮಾಜಘಾತುಕ ಕಿಡಿಗೇಡಿಗಳ ಬಾಲ ಕತ್ತರಿಸುವ ಕೆಲಸ ಮಾಡಲಾಗುತ್ತದೆಇಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳವಂತೆ ಪೋಲಿಸರಿಗೆ ಸೂಚನೆ ನೀಡಿದ್ದೇನೆ. ವಿಹಾರಕ್ಕೆ ಬರುವ ಮಂದಿಗೆ ರಕ್ಷಣೆ ನೀಡುವ ಕೆಲಸ ಪೋಲಿಸರು ಮಾಡಲಿದ್ದಾರೆ ಬಿರುಮಳೆ ಬೆಟ್ಟದಲ್ಲಿ ಪೋಲಿಸ್ ರಕ್ಷಣೆಯನ್ನು ಸೂಚನೆಯನ್ನು ನೀಡಿದ್ದು ಮಾತ್ರವಲ್ಲದೇ ಇನ್ನೂ ಮುಂದೆ ಈ ರೀತಿಯ ನೈತಿಕ ಪೋಲಿಸ್ ಗಿರಿ ನಡೆಯದಂತೆ ಪೋಲಿಸರು ಕಟ್ಟು ನಿಟ್ಟಿನ ವ್ಯವಸ್ಥೆಯನ್ನು ಮಾಡಬೇಕೆಂದು ಸೂಚನೆ ನೀಡಿರುವುದಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತಿಳಿಸಿದ್ದಾರೆ
ಕೊಡಪದವು ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಯನೇಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ NSS UNIT ಇದರ ವತಿಯಿಂದ ಮಜೀದ್ ಫಾರ್ಮ್ ನ ಸಹಕಾರದಿಂದ, 110ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಬರೆಯುವ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈನುಗಾರಿಕೆಯ ಮೂಲಕ ವಿಶೇಷ ಸಾಧನೆಯನ್ನು ಮಾಡಿ, ತಮಗೆ ಬರುವ ಲಾಭಾಂಶದ ಒಂದು ಭಾಗವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ರಮಗಳಿಗೆ ನೀಡುವ ನಿಟ್ಟಿನಲ್ಲಿ, ಮಜೀದ್ ಫಾರ್ಮ್ ನ ಮಾಲಕರಾದ ಮೈಮುನ ಹಾಗೂ ತಮ್ಮ ಮಕ್ಕಳಾದ ರಂಝೀನಾ, ಮರ್ಝೀನಾ, ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿ ವಿಜೇತೆ, ಸಿಲ್ವರ್ ಮೆಡಲಿಸ್ಟ್, ಅಝ್ವೀನಾ, ಇವರು ಆಗಮಿಸಿ ಕೋಡಪದವು ಶಾಲಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯಿನಿ, ಆರತಿ ಮೇಡಂ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಖಾಸಗಿ ಶಾಲೆಗಳಲ್ಲಿ ನೀಡುವುದಕ್ಕಿಂತ ಉತ್ತಮ ಶಿಕ್ಷಣ ಕೋಡಪ್ಪದವಿನಲ್ಲಿ ನೀಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ಉಚಿತವಾಗಿ ಇಲ್ಲೇ ಸಿಗುವಾಗ, ಅನಗತ್ಯ ಖರ್ಚು ಮಾಡಿ ಖಾಸಗಿ ಶಾಲೆಗಳಿಗೆ,…
ವಿಟ್ಲ ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆಯು ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಬ್ಲಾಕ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ರವರ ಅಧ್ಯಕ್ಷತೆದಲ್ಲಿ ಇಂದು ನಡೆಯಿತು. ಈ ಸಭೆಯಲ್ಲಿ ಸಭೆಯಲ್ಲಿ ಇತ್ತೀಚಿಗೆ ನಿಧನ ಹೊಂದಿದ ಕಾಂಗ್ರೆಸ್ ಮುಖಂಡ,ವೀರಕಂಬ ಗ್ರಾ ಪಂ ಸದಸ್ಯರಾದ ರಘು ಪೂಜಾರಿ ಯವರಿಗೆ ಮೌನ ಪ್ರಾರ್ಥನೆ ಮೂಲಕ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್,ಎಸ್ ಟಿ ಘಟಕದ ಜಿಲ್ಲಾ ಅಧ್ಯಕ್ಷ ನಾರಾಯಣ ನಾಯ್ಕ,ದ ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ,ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ವಿಟ್ಲ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ನಾಸಿರ್ ಕೋಲ್ಪೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮಾನಾಥ ವಿಟ್ಲ, ಎಸ್ ಟಿ ಘಟಕ ಅಧ್ಯಕ್ಷ ಮಹಾಲಿಂಗ ನಾಯ್ಕ, ಆರೋಗ್ಯ ರಕ್ಷ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್ ಕುರುಂಬಳ, ಪಟ್ಟಣ ಪಂಚಾಯತ್ ಸದಸ್ಯ…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ್ದ ಕೊಡಗಿನ ಸೋಮವಾರಪೇಟೆ ತಾಲೂಕಿನ ಅಬ್ದುಲ್ ರೆಹಮಾನ್ ಕಲ್ಕಂದೂರು ಎಂಬಾತನನ್ನು ಎನ್. ಐ.ಎ. ಅಧಿಕಾರಿಗಳು ಕೇರಳದ ವಿಮಾನ ನಿಲ್ದಾಣದಲ್ಲಿ ಬಂಧಿಸಿದಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ವಿದೇಶಕ್ಕೆ ತೆರಳಿ ಕತಾರ್ ನ ದೋಹಾದಲ್ಲಿ ತಲೆಮರೆಸಿಕೊಂಡಿದ್ದ ಎಲ್ಲಾ ಆರೋಪಿಗಳಿಗಾಗಿ ಲುಕ್ ಔಟ್ ನೋಟೀಸ್ ಕೂಡ ಜಾರಿ ಮಾಡಲಾಗಿತ್ತು. ಅಬ್ದುಲ್ ರೆಹಮಾನ್ ಕಲ್ಕಂದೂರ್ ಹಾಗೂ ತಲೆಮರೆಸಿಕೊಂಡಿರುವ ಇತರರ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನವನ್ನು ಕೂಡ ರಾಜ್ಯ ಗೃಹ ಇಲಾಖೆ ಘೋಷಿಸಿತ್ತು. ಅಬ್ದುಲ್ ರೆಹಮಾನ್ ನಿಷೇಧಿತ ಪಿಎಫೈ ಸಂಘಟನೆಯ ಕಾರ್ಯದರ್ಶಿಯಾಗಿದ್ದ. ರೆಹಮಾನನ್ನು ವಶಕ್ಕೆ ಪಡೆದಿರುವ ಎನ್ ಐ ಎ ಅಧಿಕಾರಿಗಳು ಬೆಂಗಳೂರಿನ ಎನ್ ಐ ಎ ನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ವಿಟ್ಲ; ಲಯನ್ಸ್ ಜಿಲ್ಲಾ 317 D ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ (ಪಿಅರ್‌ಒ)2025:-26 ನೇ ಸಾಲಿಗೆ ಸುದರ್ಶನ ಪಡಿಯಾರ್ ಆಯ್ಕೆಯಾಗಿದ್ದಾರೆ.ಇದರಲ್ಲಿ 120 ಕ್ಲಬ್ ಹಾಗೂ 4500 ಕ್ಕೂ ಅಧಿಕ ಸದಸ್ಯರಿದ್ದಾರೆ.ಇವರನ್ನು ಜಿಲ್ಲಾ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈ ಇವರು ನೇಮಕ ಮಾಡಿರುತ್ತಾರೆ.ಸುದರ್ಶನ ಪಡಿಯಾರ್ ರವರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಪ್ರಾಂತೀಯ ಅಧ್ಯಕ್ಷಾಗಿ,ಕ್ಲಬ್ ನ ವಿವಿಧ ಹುದ್ದೆಗಳನ್ನು ಅಲಂಕರಿಸಿರುತ್ತಾರೆ. ,ಭಾರತ ಸ್ಕೌಟ್ ಮತ್ತು ಗೈಡ್ಸ್ ನ ವಿಟ್ಲ ವಲಯ ಅಧ್ಯಕ್ಷರಾಗಿ,ರಾಜ್ಯ ಮಟ್ಟದ ಯುವಜನ ಮೇಳದ ಸಂಚಾಲಕರಾಗಿ,ವಿಟ್ಲ ಯುವಕ ಮಂಡಲದ ಅಧ್ಯಕ್ಷರಾಗಿ ,ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ದ.ಕ.ಜಿಲ್ಲೆಯ ವಿಟ್ಲದಲ್ಲಿ ಯುವಜನಮೇಳ ಕಾರ್ಯಕ್ರಮವನ್ನು ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮನಾಥ್ ರೈ, ಅಂದಿನ ಯುವಜನ ಕ್ರೀಡಾ ಇಲಾಖೆಯ ಸಚಿವರಾದ ಆಭಯಚಂದ್ರ ಜೈನ್ ಅವರ ಮೇಲೆ ಒತ್ತಡ ಅಂದು ಅದ್ದೂರಿಯಾದ ಯುವಜನಮೇಳ ಕಾರ್ಯಕ್ರಮವನ್ನು ಸಂಘಟಿಸಿ ಇಡೀ ರಾಜ್ಯದಲ್ಲಿ ಜನಪ್ರಿಯರಾಗಿದ್ದರು ಸದಾ ಬಡವರ್ಗದ ಜನರ ಬಗ್ಗೆ ಸಮಾಜ ಬಗ್ಗೆ ಅಭಿವೃದ್ಧಿ ವಿಚಾರಗಳ ಬಗ್ಗೆ…
ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಅಧ್ಯಕ್ಷರಾಗಿ ಶ್ವೇತ ರವಿಕುಮಾರ್, ಕಾರ್ಯದರ್ಶಿಯಾಗಿ ದಿನಕರ್ ಆಳ್ವ ಕೆ., ಕೋಶಾಧಿಕಾರಿಯಾಗಿ ಬಿ ಸಂದೇಶ್ ಶೆಟ್ಟಿ ಆಯ್ಕೆ ವಿಟ್ಲ-ಲಯನ್ಸ್ ಕ್ಲಬ್ ವಿಟ್ಲ ಸಿಟಿಯ 2025-26ನೇ ಸಾಲಿನ ಅಧ್ಯಕ್ಷರಾಗಿ ಶ್ವೇತ ರವಿ ಕುಮಾರ್ ಆಯ್ಕೆಯಾಗಿರುತ್ತಾರೆ. ಇವರು ಪ್ರಸ್ತುತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇವರು ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಅಂತರ್ರಾಷ್ಟ್ರೀಯ ಸ್ಯಾಕ್ಸೋಫೋನ್ ವಾದಕರಾದ ಪಿ.ಕೆ.ಗಣೇಶ್ ಪುತ್ತೂರು ಹಾಗೂ ಮಲ್ಲಿಕ ಸುಪುತ್ರಿ ಮತ್ತು ಉಪನ್ಯಾಸಕ ರವಿ ಕುಮಾರ್ ಇವರ ಧರ್ಮಪತ್ನಿ ಆಗಿರುತ್ತಾರೆ. ಕ್ಲಬ್ ನ ಕಾರ್ಯದರ್ಶಿಯಾಗಿ ಉದ್ಯಮಿ ದಿನಕರ ಆಳ್ವ.ಕೆ , ಕೋಶಾಧಿಕಾರಿಯಾಗಿ ಸಾಮಾಜಿಕ ಧಾರ್ಮಿಕ ಮುಂದಾಳು ಬಿ.ಸಂದೇಶ್ ಶೆಟ್ಟಿ ಆಯ್ಕೆಯಾಗಿರುತ್ತಾರೆ. ಇವರ ಪದಗ್ರಹಣ ಸಮಾರಂಭವು ದಿನಾಂಕ 06.07.2025 ನೇ ಆದಿತ್ಯವಾರ ಸಂಜೆ ಗಂಟೆ 7 ಕ್ಕೆ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಪದಗ್ರಹಣ ಅಧಿಕಾರಿಯಾಗಿ ಮಾಜಿ ರಾಜ್ಯಪಾಲರಾದ ಲಯನ್ ಅರುಣ್ ಶೆಟ್ಟಿಯವರು ನೆರವೇರಿಸಲಿದ್ದು ಮುಖ್ಯ ಅತಿಥಿಯಾಗಿ ರಾಜ್ಯಪಾಲರ ಕೊ ಆಡಿನೇಟರ್ ಜ್ಯೋತಿ ಶ್ರೀಧರ್ ರಾಜ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


