Subscribe to Updates
Get the latest creative news from FooBar about art, design and business.
Author: PrasakthaNews
ಬೆಳ್ತಂಗಡಿ:- ಧರ್ಮಸ್ಥಳದಲ್ಲಿ ನೂರಕ್ಕೂ ಅಧಿಕ ಮೃತ ದೇಹಗಳನ್ನು ಹೂತು ಹಾಕಿದ್ದೇನೆ ಎಂದು ಪೋಲಿಸರ ಮುಂದೆ ಹೇಳಿಕೆ ನೀಡಿದ ಧರ್ಮಸ್ಥಳದಲ್ಲಿ ಸ್ವಚ್ಚತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಜುಲೈ 4 ರಂದು ವಕೀಲರ ಮೂಲಕ ದೂರು ನೀಡಿದ್ದ ಈ ವ್ಯಕ್ತಿ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಅವರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ
ವಿಟ್ಲ:- ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ ಹಿರಿಯ ವ್ಯೆದ್ಯಾಧಿಕಾರಿ ಡಾ ವೇದಾವತಿ ಬಲ್ಲಾಳ್ ರವರು ಪಾಣಾಜೆ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದಾರೆ. ಪಾಣಾಜೆ ನಿವಾಸಿಯಾಗಿರುವ ಡಾ ವೇದಾವತಿ ಬಲ್ಲಾಳ್ ರವರು ತಮ್ಮ ವಿಶೇಷ ಸೇವೆ ನೀಡುವುದರ ಮೂಲಕ ವಿಟ್ಲದ ಜನತೆಯ ಪ್ರೀತಿಗೆ ಪಾತ್ರರಾಗಿದ್ದರು ಇದೀಗ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಭಾರ ಆಡಳಿತ ವ್ಯೆದ್ಯಾದಿಕಾರಿಯಾಗಿ ಅಡ್ಯನಡ್ಕ ಆರೋಗ್ಯ ಕೇಂದ್ರದ ವ್ಯೆದ್ಯಾದಿಕಾರಿಗಳಾದ ಡಾ ವಿಶೇಶ್ವರ ಭಟ್ ರವರು ಕರ್ತವ್ಯ ಸಲ್ಲಿಸಲಿದ್ದಾರೆ
ಬಂಟ್ವಾಳ:- ಕರ್ನಾಟಕ ಸರಕಾರದ ಬಹು ನಿರೀಕ್ಷಿತ ಮತ್ತು ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಪಲಾನುಭವಿಗಳ ಸಂಖ್ಯೆ 500 ಕೋಟಿ ಗಡಿಯನ್ನು ದಾಟಿರುವ ಹಿನ್ನೆಲೆಯಲ್ಲಿ -ಶಕ್ತಿ – ಸಂಭ್ರಮ ಕಾರ್ಯಕ್ರಮ ದಿನಾಂಕ: 14.07.2025ನೇ ಸೋಮವಾರ ಬೆಳಗ್ಗೆ ಗಂಟೆ. 10.,00 ಕ್ಕೆ K.S.R.T.C ಬಸ್ಸು ನಿಲ್ದಾಣ ಬಿ.ಸಿ ರೋಡ್ ನಲ್ಲಿ ನಡೆಯಲಿದೆ. ಈ ಅರ್ಥಪೂರ್ಣ ಮತ್ತು ಸುಂದರ ಕಾರ್ಯಕ್ರಮದಲ್ಲಿ ಹೆಚ್ಚಿನ ಮಹಿಳಾ ಪಲಾನುಭವಿಗಳು, ಹಾಗೂ ಎಲ್ಲಾ ನಾಮನಿರ್ದೇಶಿತ ಸದಸ್ಯರು, ಕಾಂಗ್ರೆಸ್ ಪಕ್ಷದ ಹಿರಿಯ ಕಿರಿಯ ನಾಯಕರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಯಂತಿ ವಿ ಪೂಜಾರಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ
ಪುತ್ತೂರು:- ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಯುವಕ ಜೆ ಕೃಷ್ಣ ಎಂಬವನು ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿ ಮಗು ಕರುಣಿಸಿದ ಈ ವಿಚಾರ ಇಡೀ ರಾಜ್ಯದಲ್ಲಿ ವ್ಯಾಪಿಸಿದ ಸಂದರ್ಭದಲ್ಲಿ ಸರಕಾರ ಇಲಾಖೆಗಳು ಮಾನವ ಹಕ್ಕುಗಳ ಆಯೋಗ ಯುವತಿಗೆ ನ್ಯಾಯ ದೊರಕಿಸಲು ಮುಂದೆ ಬಂದಿದೆ ಈ ವಿಚಾರವಾಗಿ ಇಂದು ಸಂತ್ರಸ್ಥೆಯ ಮನೆಗೆ ಭೇಟಿ ನೀಡಿದ ಸಾಮಾಜಿಕ ಮುಖಂಡರಾದ ಶ್ರೀ ಹನೀಫ್ ಬಗ್ಗುಮೂಲೆ, ಸಿದ್ದೀಕ್ ಸೂರ್ಯ ಶಬೀರ್ ಕೊಲ್ಪೆ, ಹನೀಫ್ ಪುಂಚತ್ತಾರ್ ನಿಯೋಗ ಭೇಟಿ ನೀಡಿ ಸಂತ್ರಸ್ಥೆಯ ತಾಯಿಯಲ್ಲಿ ಮಾತನಾಡಿ ಕಾನೂನು ವಿಚಾರದ ಬಗ್ಗೆ ಮಾತನಾಡಿ ಮುಂದಿನ ರೂಪು ರೇಷೆಯ ಬಗ್ಗೆ ಮಾಹಿತಿ ನೀಡಿದರು…
ಮಂಗಳೂರು:- ದ.ಕ.ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಇದರ ಭಾಗವಾಗಿ ದ.ಕ.ಜಿಲ್ಲಾಡಳಿತ ಮೌನ ವಹಿಸಿರುವ ಬಗ್ಗೆ ಶಾಲಾ ಮಕ್ಕಳು ಮತ್ತು ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆನಿರಂತರವಾಗಿ ಮಳೆ ಸುರಿಯುತ್ತಿದ್ದೂ ಒಂದನೇ ತರಗತಿಯಿಂದ ಕನಿಷ್ಠ ಪಕ್ಷ 5 ತರಗತಿಯ ಮಕ್ಕಳಿಗೆ ರಜೆ ನೀಡಬಹುದಿತ್ತು ಆದರೆ ಜಿಲ್ಲಾಡಳಿತ ಇದರ ಬಗ್ಗೆ ಸಂಪೂರ್ಣವಾಗಿ ಮೌನ ವಹಿಸಿ ನಿರ್ಲಕ್ಷ್ಯ ಮಾಡಿರುವುದು ಎಷ್ಟು ಸರಿ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ ಈ ಹಿಂದೆ ದ.ಕ.ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಗಿಲನ್ ಅವರನ್ನು ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಮತ್ತು ಪೋಷಕರು ನೆನಪಿಸಿದ್ದಾರೆ.
ಬಂಟ್ವಾಳ: ಕೆಪಿ ಸುಲೈಮಾನ್ ಹಾಜಿ ಕನ್ಯಾನ ಅಬುದಾಬಿ ಹ್ಯಾಪಿ ಸ್ಟಾರ್ ಗ್ರೂಪ್ ವತಿಯಿಂದ ಆರು ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭವು ಗುರುವಾರ ನೇರಳಕಟ್ಟೆ ಜನಪ್ರಿಯ ಗಾರ್ಡನ್ನಲ್ಲಿ ನಡೆಯಿತು ಕೆಪಿ ಸುಲೈಮಾನ್ ಹಾಜಿ ಕನ್ಯಾನ ಅವರ ನೇತೃತ್ವದಲ್ಲಿ ನಡೆದ ನಿಖಾಹ್ ಕಾರ್ಯಕ್ರಮದಲ್ಲಿ ಸುರಿಬೈಲ್ ದಾರುಲ್ ಅಶ್ ಅರಿಯಾ ಮನೇಜನರ್ ಮಹಮ್ಮದಾಲಿ ಸಖಾಫಿ ಖುತುಬಾ ನೆರವೇರಿಸಿದರುದುವಾಃ ನೆರವೇರಿಸಿದ ಬಹು: ಸೈಯ್ಯದ್ ಅಬ್ದುರಹ್ಮಾನ್ ಮಸ್ ಊದ್ ಅಲ್ ಬುಖಾರಿ ಕೂರತ್ ತಂಙಳ್ ರವರು ಕೆಪಿ ಸುಲೈಮಾನ್ ಹಾಜಿ ಕನ್ಯಾನ ಅವರ ಈ ಪುಣ್ಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಡಂಬು ಜುಮಾ ಮಸೀದಿಯ ಖತೀಬ್ ಅಬ್ದುರಹ್ಮಾನ್ ಸಹದಿ ಉಪಸ್ಥಿತರಿದ್ದರು ವಿವಿಧ ಮಸೀದಿಗಳ ಉಸ್ತಾದರು ನಿಖಾಹ್ ನೇರವೇರಿಸಿ ಕೊಟ್ಟರು ಕೊಡಂಗಾಯಿ ಕಡಂಬುವಿನ ರಹಮತ್ ಅವರು ಸಾಲೆತ್ತೂರು ತಿರುಮಜೆಯ ಶರೀಫ್ ಅವರೊಂದಿಗೆ ಕೆದಿಲ ಬೀಟಿಗೆಯ ಫಾತಿಮತ್ ಪರ್ಝಾನ ಅವರು ಚಿಕ್ಕಮಗಳೂರು ಟಿಪ್ಪು ನಗರದ ಇಮ್ರಾನ್ ಜೊತೆಗೆ, ಇಳಂತಿಲ ಅಂಡೆತಡ್ಕದ ಫಾತಿಮಾ ಸುಳ್ಯ ಜಟ್ಟಿಪಳ್ಳದ ಅಬ್ದುಲ್ ರಮ್ಸಾದ್ ಎಂಬ ವರನೊಂದಿಗೆ, ಮಿತ್ತಬಾಗಿಲು ಪೆರಾಡಿಯ…
ಪುತ್ತೂರು:ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ ರವರನ್ನು ನಿಂದಿಸಿರುವ ಪ್ರಕರಣಕ್ಕೆ ಸಂಭಂದಿಸಿದಂತೆ ಉಪ್ಪಿನಂಗಡಿ ಬ್ಲಾಕ್ ವತಿಯಿಂದ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ. ಜು. 7 ಪುತ್ತೂರಿನ ದರ್ಬೆಯಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನಾ ಸಭೆಯಲ್ಲಿ ಅಜಿತ್ ಮಡಿಕೇರಿ ಎನ್ನುವ ವ್ಯಕ್ತಿ ಶಾಸಕರನ್ನು ಅವಹೇಳನಾಕಾರಿಯಾಗಿ ಬೈದು, ಜೀವ ಬೆದರಿಕೆಯನ್ನು ಮಾಡಿರುತ್ತಾರೆ. ಅಲ್ಲದೇ ಅಯೋಗ್ಯ ಶಾಸಕ ಎಂದು. ಹೇಳುವುದರ ಮೂಲಕ ಶಾಸಕರಿಗೆ ಅವಮಾನ ಮಾಡಿರುತ್ತಾರೆ. ಅಲ್ಲದೇ ಇಸ್ಲಾಮಿಕ್ ಭಯೋತ್ಪಾದಕ ಗೂಂಡಗಳಿಗೆ ಶಾಸಕರು ಬೆಂಬಲಿಸಿದ್ದಾರೆಂದು ಎಂದು ಹೇಳುವುದರ ಮೂಲಕ ಭಾಷಣದಲ್ಲಿ ಕೋಮು ಪ್ರಚೋದನೆಯನ್ನು ಮಾಡಿರುತ್ತಾರೆ. ಸಂಘ ಪರಿವಾರದ ಸಭೆಯಲ್ಲಿ ಸಾರ್ವಜನಿಕವಾಗಿ ಶಾಸಕರನ್ನು ದಮನಿಸುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ಶಾಸಕರ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆ ಬಗ್ಗೆ ಇವರ ಪ್ರಭಾವವನ್ನು ಕುಂದಿಸಲು ಸುಳ್ಳು ಆರೋಪವನ್ನು ಹೊರಿಸಿರುತ್ತಾರೆ.ಆದ್ದರಿಂದ ಶಾಸಕರನ್ನು ಬೆದರಿಸುವ ಇವರ ದುರಹಂಕಾರದ ವರ್ತನೆಗೆ ಇವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷಯು.ಟಿ. ತೌಸೀಫ್, ನೆಕ್ಕಿಲಾಡಿ ವಲಯ…
ಉಡುಪಿ ಜಿಲ್ಲಾ ನೂತನ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ರವರು ಭಾಗವಹಿಸಿ ನೂತನ ಅಧ್ಯಕ್ಷರಿಗೆ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನಪರಿಷತ್ ಶಾಸಕರು ಮಂಜುನಾಥ ಭಂಡಾರಿ ಹಾಗೂ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ರಾಜ್ಯದ್ಯಕ್ಷರಾದ ಸೌಮ್ಯ ರೆಡ್ಡಿ , ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ, ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ, ಕೆಪಿಸಿಸಿ ಉಪಾಧ್ಯಕ್ಷರಾದ ಗಫೂರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ,ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಹೆಬ್ಬಾರ್, ಕುಂದಾಪುರ ವಿಧಾನಸಭಾ ಕ್ಷೇತ್ರದ ನಾಯಕರಾದ ದಿನೇಶ್ ಹೆಗ್ಡೆ ಮೊಳಹಳ್ಳಿ , ಉಡುಪಿ ವಿಧಾನಸಭಾ ನಾಯಕರಾದ ಪ್ರಸಾದರಾಜ್ ಕಾಂಚನ್, ರಾಜು ಪೂಜಾರಿ, ಶ್ರೀಮತಿ ಗೀತಾ ವಾಗ್ಲೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ,…
ಕಾರ್ಕಳ:- ರಾಜ್ಯ ಸರ್ಕಾರದ ಗೃಹ ಸಚಿವರು ಸನ್ಮಾನ್ಯ ಡಾ.ಜಿ.ಪರಮೇಶ್ವರ್ ಅವರು ಇಂದು ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ರವರು ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಶ್ರೀ. ಬಿ. ಕೆ. ವಿಗ್ನೇಶ್ ಭಟ್ ಹಾಗೂ ಅರ್ಚಕ ವೃಂದ, ಸ್ಥಳೀಯ ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದರು. DR. G Parameshwara #belmanTempleVisit
ಆದಿಉಡುಪಿ ಭಾಗದಲ್ಲಿ ಸುಮಾರು ಒಂದು ವರ್ಷದಿಂದ ಕಾಮಗಾರಿ ಪ್ರಗತಿಯಲ್ಲಿದ್ದು 135 ಭೂ ಮಾಲೀಕರಿಗೆ ಸುಮಾರು 24.86 ಕೋಟಿ ರೂಪಾಯಿ ಪರಿಹಾರದ ಹಣ ಪಾವತಿಯಾಗಿದೆ. ತಕರಾರು ಇರುವಲ್ಲಿ ನಾನೇ ಅಧಿಕಾರಿಗಳೊಂದಿಗೆ ಕರಾವಳಿ ಜಂಕ್ಷನ್ ನಿಂದ ಮಲ್ಪೆಯವರೆಗೆ ವಿವಿಧ ಸ್ಥಳಗಳಿಗೆ ಹಲವು ಬಾರಿ ಭೇಟಿಕೊಟ್ಟು ಕಾಮಗಾರಿಗೆ ವೇಗ ನೀಡಲು ಪ್ರಯತ್ನಿಸಿದ್ದೆ. ಸುಮಾರು 90ರಷ್ಟು ಸಣ್ಣ ಸಣ್ಣ ಭೂಭಾಗಗಳ ಸರ್ವೆ ಮುಗಿಸಿ ಹಣ ಪಾವತಿಸಲು ವಿವಿಧ ಅಧಿಕಾರಿಗಳ ಸಭೆ ಕರೆದು ಪ್ರಗತಿ ಗಮನಿಸಿದ್ದೆ ಮತ್ತು ಸರ್ವೆ ಅಧಿಕಾರಿಗಳ ಮೂಲಕ ಈ ಬಗ್ಗೆ 3D ವರದಿ ಸಲ್ಲಿಸಲು ಸೂಚಿಸಿದ್ದೆ. ಸ್ವತಃ ನಾನೇ ಬೆಂಗಳೂರಿನ ಆರ್.ಓ. ಕಚೇರಿಗೆ ಭೇಟಿಕೊಟ್ಟು ಭೂಮಾಲಿಕರಿಗೆ ಹಣ ಪಾವತಿ ಮಾಡುವ ಬಗ್ಗೆ ಚರ್ಚಿಸಿದ್ದೆ. ಇಲ್ಲಿಯವರೆಗೆ ದಾಖಲೆಗಳನ್ನೇ ನೀಡದಿರುವ 70 ಭೂ ಮಾಲೀಕರನ್ನು ಸಂಪರ್ಕಿಸಿ ಕೋರ್ಟ್ ಮೂಲಕ ಠೇವಣಿ ಇರಿಸಿ ಕಾಮಗಾರಿ ಮುನ್ನಡೆಸಲು ಪ್ರಯತ್ನಿಸಲಾಗಿದೆ. ಮರಗಳನ್ನು ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಒಂದಷ್ಟು ಸಮಯ ತೆಗೆದುಕೊಳ್ಳುವುದು ಅನಿವಾರ್ಯ. ಆದರೆ ಇದೀಗ ಮಲ್ಪೆ ಕರಾವಳಿ ಜಂಕ್ಷನ್ ಕಾಮಗಾರಿ…


